ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ನೇಹಾ ಗೌಡ ಈ ವಾರ ನಾಮಿನೇಟ್ ಆಗಿದ್ದಾರೆ. ಹಾಗೇ ʻಒಗ್ಗಟ್ಟಿನಲ್ಲಿ ಹೆಸರಿದೆʼ ಎನ್ನುವ ಟಾಸ್ಕ್ ವಿಚಾರಕ್ಕೆ ಅರುಣ್ ಸಾಗರ್ ಅವರ ಮೇಲೆ ನೇಹಾ ಬೇಸರವನ್ನು ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ. ಕಾಮನ ಬಿಲ್ಲು ತಂಡ ಈ ವಾರ ಸೋತಿದ್ದು, ಧಮ್ ಪವರ್ ತಂಡ ವಿಜೇತವಾಗಿ ಹೊರಹೊಮ್ಮಿತು. ಈ ವಾರ ದೀಪಿಕಾ ದಾಸ್ ಅವರ ಕ್ಯಾಪ್ಟನ್ ಅಧಿಕಾರ ಕೂಡ ಪೂರ್ಣಗೊಂಡಿದೆ.
ಅಮೂಲ್ಯ, ದಿವ್ಯಾ ಉರುಡುಗ ಹಾಗೂ ನೇಹಾ ಗೌಡ ʻಒಗ್ಗಟ್ಟಿನಲ್ಲಿ ಹೆಸರಿದೆʼ ಎನ್ನುವ ಟಾಸ್ಕ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆ ವೇಳೆ ಅರುಣ್ ಸಾಗರ್ ಅವರ ಕುರಿತು ನೇಹಾ ಗೌಡ ಬೇಸರವನ್ನು ಹೊರ ಹಾಕಿದರು. ಅಮೂಲ್ಯ ಗೌಡ ಈ ಬಗ್ಗೆ ನೇಹಾ ಜತೆ ಮಾತನಾಡಿ ʻʻಜಡ್ಜ್ ಮಾಡೋದು ಸಮಸ್ಯೆ ಅಲ್ಲ. ಬೇರೆಯವರಿಗೆ ಎಷ್ಟು ಬೇಸರವಾಗುತ್ತೆʼʼ ಎಂದಿದ್ದಾರೆ. ನೇಹಾ ಪ್ರತಿಕ್ರಿಯೆ ನೀಡಿʻʻಅರುಣ್ ಸಾಗರ್ ಅವರು ಹೇಳಿದಕ್ಕೆ ನಾನು ತಲೆಗೆ ಹಾಕಿಕೊಳ್ಳುವುದಿಲ್ಲ. ರಿಯಾಕ್ಟ್ ಕೂಡ ಮಾಡುವುದಿಲ್ಲ. ನೀವೇನು ಆಟ ಆಡಿದ್ದೀರಿ? ಎಂದು ನಾನು ಅಲ್ಲಿಯೇ ಕೇಳಬಹುದಿತ್ತುʼʼ ಎಂದರು.
ಇದನ್ನೂ ಓದಿ | Bigg Boss Kannada | ಆಟ ಆಡುತ್ತಲೇ ಸ್ಪರ್ಧಿಗಳಿಗೆ ಜಾಗರಣೆ ಖಾತ್ರಿ ಆಯ್ತು: ಇಲ್ಲಿವೆ ಫೋಟೊ!
ನೇಹಾ ಮಾತು ಮುಂದುವರಿಸಿ ʻʻಅರುಣ್ ಸಾಗರ್ ಇವತ್ತೂ ಕೂಡ ಟಾಸ್ಕ್‌ನ ಬ್ಯಾಲೆನ್ಸ್ ವಿಚಾರಕ್ಕೆ ಮಾತನಾಡಿದರು. ಡಿಸೈಡ್ ಮಾಡುವುದಕ್ಕೆ ಅವರು ಯಾರು? ಹೇಳುವುದಕ್ಕೂ ಒಂದು ರೀತಿ ಇದೆ. ಗೋಲ್ಡ್ ಮೈನ್ ಆಟ ತುಂಬಾ ಚೆಂದವಾಗಿ ಆಡಿದರು. ಆದರೆ ಈ ಗ್ರೂಪ್ ಟಾಸ್ಕ್ ಅಲ್ಲಿ ಅವರು ಏನು ಆಡಿದರು? ಅವರು ಯಾರು ಹೇಳುವುದಕ್ಕೆ? ಇದು ಈಗಂತಲ್ಲ. ಮೊದಲ ದಿನದದಿಂದಲೂ ನಡೆಯುತ್ತಿದೆ. ಎಲ್ಲವನ್ನೂ ಎಲ್ಲಾ ಟಾಸ್ಕ್‌ಗಳನ್ನೂ ಆಡುವುದಕ್ಕೆ ಆಗಲ್ಲ. ಎಲ್ಲಿ ಪ್ರೂವ್ ಮಾಡಬೇಕೋ ಅಲ್ಲಿ ಮಾಡುತ್ತೇನೆ. ಇನ್ನೊಬ್ಬರನ್ನು ಜಡ್ಜ್ ಮಾಡುವಾಗ ಅವರೇನು ಎಂಬುದು ಅರ್ಥ ಮಾಡಿಕೊಳ್ಳಬೇಕು. ನಾನು ಸಮ್ಮನೇ ಇದ್ದೇನೆ. ನನಗೆ ತಾಳ್ಮೆ ತುಂಬಾ ಇದೆ. ತೀರಾ ಕೆಣಕಿದರೆ ಕೇಳಿಯೇ ಬಿಡುತ್ತೇನೆ. ನಾನು ವಯಸ್ಸಿಗೆ ಗೌರವ ನೀಡುತ್ತೇನೆ. ಎಲ್ಲೋ ಒಂದು ಕಡೆ ಅರುಣ್ ಸಾಗರ್ ಅವರಿಗೆ ಹೇಳಲು ಕಷ್ಟ. ನಾನು ಬೇಜರಾಗಿ ಅತ್ತಿಲ್ಲ. ಕೋಪ ಬಂದಾಗಲೂ ಅಳುತ್ತೇನೆʼʼ ಎಂದರು.
ಇದನ್ನೂ ಓದಿ | Bigg Boss Kannada | ತಮ್ಮ ಗೆಲುವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ಅರ್ಪಿಸಿದ ʻಧಮ್ ಪವರ್ʼ ಟೀಮ್!