Site icon Vistara News

Bigg Boss Kannada | ಬಿಗ್‌ ಬಾಸ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ನೇಹಾ ಗೌಡ: 11ನೇ ಸ್ಪರ್ಧಿಯಾಗಿ ವಿನೋದ್ ಗೊಬ್ಬರಗಾಲ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 9ಗೆ 11ನೇ ಸ್ಪರ್ಧಿಯಾಗಿ (Bigg Boss Kannada) ವಿನೋದ್ ಗೊಬ್ಬರಗಾಲ ಪ್ರವೇಶ ಪಡೆದಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ರನ್ನರ್ ಅಪ್ ವಿನೋದ್ ಗೊಬ್ಬರಗಾಲ ಹೊರಹೊಮ್ಮಿದ್ದರು. ‘ಮಜಾ ಭಾರತ’ದಲ್ಲಿಯೂ ಖ್ಯಾತಿಯನ್ನು ಹೊಂದಿದ್ದರು ವಿನೋದ್ ಗೊಬ್ಬರಗಾಲ.

12ನೇ ಸ್ಪರ್ಧಿಯಾಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಗ್ರ್ಯಾಂಡ್‌ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ‘ಸ್ವಾತಿ ಚುನುಕುಲು’ ಇವರ ಧಾರಾವಾಹಿ. ಅಷ್ಟೇ ಅಲ್ಲದೆ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿ ಮನೆ ಮಾತಾಗಿದ್ದರು.’ಟೇಕ್ ಆಫ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ನೇಹಾಗೆ ಮೆಚ್ಚುಗೆ ಸಿಕ್ಕಿತ್ತು.

ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ನೇಹಾ ಕೆಲಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ನೇಹಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪತಿ ಚಂದನ್ ಜತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಜ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಗೆದ್ದಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಒಟಿಟಿಯಲ್ಲಿ ಮೋಡಿ ಮಾಡಿದ್ದ ಸಾನ್ಯ-ರೂಪೇಶ್‌ ಎಂಟ್ರಿ!

Exit mobile version