Site icon Vistara News

Bigg Boss Kannada | ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರ ನಡೆದ ನೇಹಾ ಗೌಡ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 12ನೇ ಸ್ಪರ್ಧಿಯಾಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದರು. ಮನರಂಜನೆ ಮತ್ತು ಟಾಸ್ಕ್ ಗಳಲ್ಲಿ ಸೈ ಎನಿಸಿಕೊಂಡಿದ್ದ ನೇಹಾಗೆ ದೊಡ್ಮನೆಯ ಆಟ ಅಂತ್ಯವಾಗಿದೆ.‌ ಈ ಹಿಂದೆ ಅಷ್ಟೇ ʻಒಗ್ಗಟ್ಟಿನಲ್ಲಿ ಹೆಸರಿದೆʼ ಎನ್ನುವ ಟಾಸ್ಕ್‌ ವಿಚಾರಕ್ಕೆ ಅರುಣ್‌ ಸಾಗರ್‌ ಅವರ ಮೇಲೆ ನೇಹಾ ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದರು. ಇತ್ತೀಚೆಗೆ ಅರುಣ್ ಸಾಗರ್ ಟಾಸ್ಕ್ ಆಡುವ ಮುನ್ನ ದುರಾಸೆ ಎಂದು ಹೇಳಿದ್ದಕ್ಕೆ ನೇಹಾ ಕ್ಲಾಸ್ ತೆಗೆದುಕೊಂಡಿದ್ದರು.

ನೇಹಾ ಅವರು ಅರುಣ್‌ ಸಾಗರ್‌ ಕುರಿತು ʻʻಟಾಸ್ಕ್‌ ಬಗ್ಗೆ ಅವರು ಯಾರು ಹೇಳುವುದಕ್ಕೆ? ಇದು ಈಗಂತಲ್ಲ. ಮೊದಲ ದಿನದಿಂದಲೂ ನಡೆಯುತ್ತಿದೆ. ಎಲ್ಲವನ್ನೂ ಎಲ್ಲ ಟಾಸ್ಕ್‌ಗಳನ್ನೂ ಆಡುವುದಕ್ಕೆ ಆಗಲ್ಲ. ಎಲ್ಲಿ ಪ್ರೂವ್‌ ಮಾಡಬೇಕೋ ಅಲ್ಲಿ ಮಾಡುತ್ತೇನೆ. ಇನ್ನೊಬ್ಬರನ್ನು ಜಡ್ಜ್‌ ಮಾಡುವಾಗ ಅವರೇನು ಎಂಬುದು ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಒಂದು ಕಡೆ ಅರುಣ್‌ ಸಾಗರ್‌ ಅವರಿಗೆ ಹೇಳಲು ಕಷ್ಟ. ನಾನು ಬೇಜರಾಗಿ ಅತ್ತಿಲ್ಲ. ಕೋಪ ಬಂದಾಗಲೂ ಅಳುತ್ತೇನೆʼʼ ಎಂದಿದ್ದರು.

ಇದನ್ನೂ ಓದಿ | Bigg Boss Kannada | ಕಿಡಿ ಇಲ್ಲದೆ ಕಾಡು ಹತ್ತಿ ಉರಿಯೋದಿಲ್ಲ: ಸ್ಪರ್ಧಿಗಳಿಗೆ ಕಿಚ್ಚ ಕಿವಿಮಾತು!

ಗೊಂಬೆ ಎಂತಲೇ ಖ್ಯಾತಿ ಪಡೆದ ನೇಹಾ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ ಮತ್ತು ತೆಲುಗಿನ ಕಲ್ಯಾಣ ಪರಿಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿ ಮನೆ ಮಾತಾಗಿದ್ದರು.’ಟೇಕ್ ಆಫ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ನೇಹಾಗೆ ಮೆಚ್ಚುಗೆ ಸಿಕ್ಕಿತ್ತು. ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ನೇಹಾ ಕೆಲಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ನೇಹಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪತಿ ಚಂದನ್ ಜತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಜ-ರಾಣಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಗೆದ್ದಿದ್ದರು.

ಐಶ್ವರ್ಯ, ನವಾಜ್, ದರ್ಶ್‌, ಮಯೂರಿ ನಂತರ ಇದೀಗ ಬಿಗ್ ಬಾಸ್‌ ಮನೆಯಿಂದ ನೇಹಾ ಗೌಡ ಹೊರ ಬಂದಿದ್ದಾರೆ. ಮುಂದಿನ ವಾರ ಇನ್ಯಾವ ಸ್ಪರ್ಧಿ ಹೊರ ಬರಬಹುದು ಎಂಬ ಕುತೂಹಲ ಈಗಾಗಲೇ ಮನೆ ಮಾಡಿದೆ.

ಇದನ್ನೂ ಓದಿ | Bigg Boss Kannada | ವೀಕೆಂಡ್‌ ಪಂಚಾಯಿತಿಯಲ್ಲಿ ದೀಪಿಕಾ ಕ್ಯಾಪ್ಟನ್ಸಿ ರಿವ್ಯೂ!

Exit mobile version