Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್ಸಿ ಕಹಾನಿಯಲ್ಲಿ ಟ್ವಿಸ್ಟ್!

Bigg Boss Kannada (no captaincy task )

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಗೊಂಬೆಗಳ ಟಾಸ್ಕ್‌ ನೀಡಿದ್ದರು. ಈ ಟಾಸ್ಕ್‌ನಲ್ಲಿ ಸೂಪರ್‌ ಸಿಕ್ಸ್‌ ತಂಡ ಹಾಗೂ ಗೋಲ್ಡನ್‌ ಗೊಂಬೆ ತಂಡಗಳು ಸಮನಾಗಿ ಅಂಕಗಳನ್ನು ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಬಿಗ್‌ ಬಾಸ್‌ ಕ್ಯಾಪ್ಟನ್‌ ಆಯ್ಕೆಯನ್ನು ಚರ್ಚಿಸಿ ಹೇಳಿ ಎಂದು ಸ್ಪರ್ಧಿಗಳಿಗೆ ಆದೇಶ ನೀಡಿದ್ದಾರೆ.

ಸ್ಪರ್ಧಿಗಳು ಒಮ್ಮತದಿಂದ ಬಿಗ್‌ ಬಾಸ್‌ ಕ್ಯಾಪ್ಟನ್‌ ಯಾರೆಂಬುದನ್ನು ಆಯ್ಕೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಇದರಿಂದ ಬಿಗ್‌ ಬಾಸ್‌, ಎರಡೂ ತಂಡಗಳಿಂದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಯಾವುದೇ ಹೆಸರು ಬರದ ಕಾರಣ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ ಇರುವುದಿಲ್ಲ. ಹಾಗೆಯೇ ಮುಂದಿನ ವಾರ ಮನೆಯಲ್ಲಿ ಯಾವ ಕ್ಯಾಪ್ಟನ್‌, ಇಮ್ಯುನಿಟಿ ಇರುವುದಿಲ್ಲ ಎಂದು ಆದೇಶ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಕಳಪೆ ಪಟ್ಟದ ವಾದ- ಪ್ರತಿವಾದ: ಪ್ರಶಾಂತ್‌ ಸಂಬರಗಿಗೆ ಮನೆಮಂದಿ ನೀಡಿದ ಶಿಕ್ಷೆ ಏನು?

ಬಿಗ್‌ ಬಾಸ್‌ ಮನೆಯಲ್ಲಿ ಎರಡು ಟಾಸ್ಕ್‌ಗಳನ್ನು ನೀಡಿದ್ದರು. ಎರಡೂ ಟಾಸ್ಕ್‌ನಲ್ಲಿಯೂ ಗೋಲ್ಡನ್‌ ಗೊಂಬೆ ತಂಡ ವಿಜೇತರಾಗಿದ್ದಾರೆ. ಒಂದು ಟಾಸ್ಕ್‌ನಲ್ಲಿ ಮನೆಯ ಸದಸ್ಯರು ತಲಾ ಐವರು ಇರುವ ಎರಡು ತಂಡಗಳನ್ನು ರಚಿಸಬೇಕು. ಪ್ರತಿ ತಂಡದ ನಾಲ್ಕು ಸದಸ್ಯರು ಫುಟ್ಬಾಲ್ ಒದ್ದು, ಗೋಲ್‌ ಮಾಡಬೇಕು. ಐದನೇ ಸದಸ್ಯರು ಗೋಲ್‌ ಕೀಪರ್‌ ಆಗಿ ಎದುರಾಳಿ ತಂಡದ ಬಾಲ್‌ಗಳನ್ನು ತಡೆಯಬೇಕು. ಇದರಲ್ಲಿ ಅರುಣ್‌ ಸಾಗರ್‌ ತಂಡ ವಿಜೇತರಾಗಿ ಹೊರಹೊಮ್ಮಿತು.

ಇದನ್ನೂ ಓದಿ | Bigg Boss Kannada | ಗೊಂಬೆ ಆಟದಲ್ಲಿ ರಾಕೇಶ್‌-ದೀಪಿಕಾ ವಾದ, ಪ್ರತಿವಾದ: ಚಿಕನ್ ಕನವರಿಕೆಯಲ್ಲಿ ಕಾವ್ಯಶ್ರೀ!


Exit mobile version