Site icon Vistara News

Bigg Boss Kannada | ಈ ವಾರ ನೋ ಎಲಿಮಿನೇಷನ್‌ ವೀಕ್‌: ಕಿಚ್ಚನ ಚಪ್ಪಾಳೆ ಯಾರಿಗೆ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಕಿಚ್ಚನ ವೀಕೆಂಡ್‌ ಪಂಚಾಯಿತಿಯಲ್ಲಿ ಆರ್ಯವರ್ಧನ್‌ ಗುರೂಜಿ ಅವರು ಕಣ್ಣೀರು ಹಾಕಿದ್ದಾರೆ. ಬಿಗ್‌ ಬಾಸ್‌ 50 ಸಂಚಿಕೆಗಳನ್ನು ಪೂರೈಸಿದಕ್ಕಾಗಿ ನೋ ಎಲಿಮಿನೇಷನ್‌ ವೀಕ್‌ ಎಂದು ಅನೌನ್ಸ್‌ ಮಾಡಿದೆ. ಡೇಂಜರ್‌ ರೌಂಡ್‌ನಲ್ಲಿದ್ದ ಆರ್ಯವರ್ಧನ್‌ ಮತ್ತು ಪ್ರಶಾಂತ್‌ ಸಂಬರಗಿ ಅವರಿಗೆ ಕಿಚ್ಚ ಸುದೀಪ್‌ ಅವರು ಸಣ್ಣ ಚಮಕ್‌ ನೀಡಿದ್ದಾರೆ.

ಅರುಣ್‌ ಸಾಗರ್‌ ಹಾಗೂ ದಿವ್ಯಾ ಉರುಡುಗ ಅವರು ಹಿಂದಿನ ಸಂಚಿಕೆಯಲ್ಲಿ ಸೇಫ್‌ ಆಗಿದ್ದಾರೆ. ವೀಕೆಂಡ್‌ ಪಂಚಾಯಿತಿಯಲ್ಲಿ ಮೊದಲಿಗೆ ಅಮೂಲ್ಯ ಮತ್ತು ದೀಪಿಕಾ ದಾಸ್‌ ಸೇಫ್‌ ಆದರು. ಪ್ರಶಾಂತ್‌ ಸಂಬರಗಿ ಮತ್ತು ಆರ್ಯವರ್ಧನ್‌ ಗುರೂಜಿ ಅವರು ಕೊನೆಯ ಹಂತದಲ್ಲಿ ಇದ್ದರು. ಕಿಚ್ಚ ಸುದೀಪ್‌ ಅವರು ಆರ್ಯವರ್ಧನ್‌ ಅವರು ಈ ವಾರ ಜರ್ನಿ ಮುಗಿಸಿದ್ದಾರೆ ಎಂದು ಹೇಳಿದ ಕೂಡಲೇ ಆರ್ಯವರ್ಧನ್‌ ಗುರೂಜಿ ಫುಲ್‌ ಖುಷ್‌ ಆದರು. ಇನ್ನೇನು ಹೊರಡಲು ರೆಡಿಯಾಗಿದ್ದ ಆರ್ಯವರ್ಧನ್‌ ಅವರಿಗೆ ಸೇಫ್‌ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಇದನ್ನು ಕೇಳಿ ಗುರೂಜಿ ಗಳಗಳನೇ ಅತ್ತಿದ್ದಾರೆ. ʻʻಮಗಳ ಹುಟ್ಟು ಹಬ್ಬವಿದೆ. ನನ್ನನ್ನು ಕಳುಹಿಸಿಕೊಡಿ. ನಾನು ಮನೆಯಿಂದ ಹೊರಡಬೇಕುʼʼಎಂದು ಅತ್ತಿದ್ದಾರೆ. ಕಿಚ್ಚ ಸುದೀಪ್‌ ಅವರು ಬಳಿಕ ಅನೌನ್ಸ್‌ ಮಾಡಿದ್ದಾರೆ. ಈ ವಾರ 50ದಿನ ಪೂರ್ಣಗೊಂಡಿದ್ದು, ವೋಟಿಂಗ್‌ ಇರಲಿಲ್ಲವಾಗಿತ್ತು. ಈ ವಾರ ನೋ ಎಲಿಮಿನೇಷನ್‌ ವೀಕ್‌ ಎಂದು ಅನೌನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್ ಶೆಟ್ಟಿ ಹೊಸ ಡಯಟ್ ಶುರು: ʻಮನೆಯವರು ಫೇಕ್‌ʼ ಅಂದ್ರು ಆರ್ಯವರ್ಧನ್‌!


ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್‌ ಅವರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್‌ ಅವರು ʻʻಗುಂಪಿದೆ ಎಂದು ಇನ್ನೂ ಮೂವರು ಗುಂಪು ಕಟ್ಟಿಕೊಂಡು ಟೀಕೆ ಮಾಡುತ್ತಾರೆ ಮನೆಯಲ್ಲಿ ಹೌದೋ ಅಥವಾ ಅಲ್ಲವೋʼʼಎಂದು ಪ್ರಶ್ನೆ ಕೇಳಿದ್ದಾರೆ.

ಈ ಬಗ್ಗೆ ಅಮೂಲ್ಯ ಪ್ರತಿಕ್ರಿಯಿಸಿದ್ದು, ʻʻಈ ಮನೆಯಲ್ಲಿ ನಾನು, ಅನುಪಮಾ ಮತ್ತು ರಾಕೇಶ್‌ ಅವರು ಗುಂಪು ಎಂದು ಅಂದಕೊಂಡಿದ್ದಾರೆ. ಆದರೆ ನಾವು ಎಲ್ಲರ ಜತೆ ಬೆರೆಯುತ್ತೇವೆʼʼಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೂಪೇಶ್‌ ಶೆಟ್ಟಿ ʻʻಕಳಪೆ ಮತ್ತು ಉತ್ತಮ ಎಂಬ ಆಯ್ಕೆ ಪ್ರಕ್ರಿಯೆ ವೇಳೆ ಗುಂಪುಗಾರಿಕೆ ತರುತ್ತಾರೆ ಎಂಬುದು ನನ್ನ ಭಾವನೆʼʼ ಎಂದರು.

ಈ ವಾರದ ಕಿಚ್ಚನ ಚಪ್ಪಾಳೆ ರಾಕೇಶ್‌ ಅಡಿಗ ಅವರಿಗೆ ಸಿಕ್ಕಿದೆ. 50ದಿನದಲ್ಲಿ ರಾಕೇಶ್‌ ಅಡಿಗ ಅವರ ಆಟ ಮತ್ತು ಅವರು ಒಟ್ಟೂ ಆಟದ ಶೈಲಿಗೆ ಕಿಚ್ಚ ಸುದೀಪ್‌ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಕಿಚ್ಚ ಸುದೀಪ್‌ ಮಾತನಾಡಿ ʻʻಒಟಿಟಿಯಿಂದ ನಿಮ್ಮನ್ನು ನೋಡಿಕೊಂಡು ಬಂದಿದ್ದೇನೆ. ನೀವು ಯಾರ ಜತೆಗೆ ಮನಸ್ತಾಪವಿಲ್ಲದೇ, ಆಟವನ್ನು ಚೆನ್ನಾಗಿ ಆಡಿಕೊಂಡು ಬಂದಿದ್ದೂ, 50 ಬಹಳ ಆ್ಯಕ್ಟಿವ್‌ ಆಗಿ ಆಡಿದ್ದೀರಿʼʼಎಂದು ಹೊಗಳಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್‌ ರಾಜಣ್ಣ -ದಿವ್ಯಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಿಚ್ಚ ಸುದೀಪ್‌ ನೀಡಿದ ಸ್ಪಷ್ಟನೆ ಏನು?



Exit mobile version