Site icon Vistara News

Bigg Boss Kannada | ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಯಾರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಎಂಟನೇ ವಾರ ಕಾವ್ಯಶ್ರೀ ಗೌಡ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಈ ವಾರ ಒಂಬತ್ತು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ ನೀಡಿದ ಲಕ್ಷುರಿ ಬಜೆಟ್‌ ಟಾಸ್ಕ್‌ ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳು ಕಳೆದುಕೊಂಡಿದ್ದಾರೆ.

ಈ ಹಿಂದೆ ಪ್ರಶಾಂತ್‌ ಸಂಬರಗಿ ಅವರನ್ನು ಸಾನ್ಯ ಅವರು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ಗುರೂಜಿ ಈಗಾಗಲೇ ನಾಮಿನೇಟ್‌ ಆಗಿದ್ದರು. 51ನೇ ದಿನ ಕ್ಯಾಪ್ಟನ್‌ ಕಾವ್ಯಶ್ರೀ ಗೌಡ ಅವರು ಅನುಪಮಾ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಅಮೂಲ್ಯ, ದೀಪಿಕಾ ದಾಸ್‌, ರೂಪೇಶ್‌ ಶೆಟ್ಟಿ, ದಿವ್ಯಾ ಉರುಡುಗ ಮತ್ತು ಅರುಣ್‌ ಸಾಗರ್‌ ಅವರು ನಾಮಿನೇಟ್‌ ಆಗಿದ್ದಾರೆ. ಹೆಚ್ಚಾಗಿ ಮನೆಮಂದಿ ಅಮೂಲ್ಯ ಅವರನ್ನೇ ನಾನಿಮೇಟ್‌ ಮಾಡಿದ್ದು, ಟಾಸ್ಕ್‌ ಸರಿಯಾಗಿ ಆಡುತ್ತಿಲ್ಲ. ಹಾಗೂ ರಾಕೇಶ್‌ ಜತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಕಾರಣ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಈ ವಾರ ನೋ ಎಲಿಮಿನೇಷನ್‌ ವೀಕ್‌: ಕಿಚ್ಚನ ಚಪ್ಪಾಳೆ ಯಾರಿಗೆ?

ಏನಿತ್ತು ಲಕ್ಷುರಿ ಬಜೆಟ್‌ ಟಾಸ್ಕ್‌?
ಬಿಗ್‌ ಬಾಸ್‌ ಈ ವಾರ ಲಕ್ಷುರಿ ಬಜೆಟ್‌ 10ಸಾವಿರ ಅಂಕಗಳನ್ನು ನೀಡಿತ್ತು. ಆದರೆ ಮನೆಯ ಸದಸ್ಯರು ನಿಯಮ ಉಲ್ಲಂಘಿಸಿದ ಕಾರಣ ಕೇವಲ 4450 ಲಕ್ಷುರಿ ಪಾಯಿಂಟ್‌ಗಳನ್ನು ನೀಡಿತ್ತು. ಇದರ ಅನುಸಾರ ತಮಗೆ ಬೇಕಾದ ವಸ್ತುಗಳನ್ನು ಪಡೆಯಲು ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಮನೆಯ ಸದಸ್ಯರು 01 ಬೌಲ್‌ನಿಂದ ಯಾವುದಾದರೂ ಎರಡು ಚೀಟಿಗಳನ್ನು ತೆಗೆದು ಜೋರಾಗಿ ಘೋಷಿಸಿ, ಚೀಟಿಯನ್ನು ಕ್ಯಾಮೆರಾಗೆ ತೋರಿಸಬೇಕು. ಒಂದೇ ಬೌಲ್‌ನಲ್ಲಿ ಒಂದೇ ಸಂಖ್ಯೆಯ ಎರಡು ಚೀಟಿಗಳು ಬಂದರೆ ಇನ್ನೊಂದು ಚೀಟಿ ಎತ್ತಬಹುದಿತ್ತು. ಬೌಲ್‌ಗಳಿಂದ ಒಬ್ಬರು ಮಾತ್ರ ಚೀಟಿ ತೆಗೆಯಬೇಕಿತ್ತು. ಪ್ರತಿ ಬೌಲ್‌ನಿಂದ ಎರಡು ಚೀಟಿಗಳನ್ನು ಮಾತ್ರ ಆರಿಸಬೇಕಿತ್ತು. ಆದರೆ ಆಡುವ ವೇಳೆ ಅನುಪಮಾ ಅವರು ಒಂದು ಬೌಲ್‌ನಲ್ಲಿ ಒಂದೇ ಚೀಟಿ ತೆಗೆದ ಕಾರಣ ಬಿಗ್‌ ಬಾಸ್‌ ಲಕ್ಷುರಿ ಬಜೆಟ್‌ ನೀಡಿಲ್ಲ.

ಇದನ್ನೂ ಓದಿ | Bigg Boss Kannada | 50 ಸಂಚಿಕೆ ಪೂರೈಸಿದ ಬಿಗ್‌ ಬಾಸ್‌: ಇಲ್ಲಿವೆ ಫೋಟೊಗಳು!

Exit mobile version