Site icon Vistara News

Bigg Boss Kannada | ಲಿವಿಂಗ್‌ ಏರಿಯಾದಲ್ಲಿ ಹೈಡ್ರಾಮಾ: ಮೊದಲ ದಿನ ಏಳು ಸ್ಪರ್ಧಿಗಳು ನಾಮಿನೇಟ್‌

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಒಟಿಟಿ ಕನ್ನಡದ ಮೊದಲ ದಿನದ ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್‌ ಬಾಸ್‌ (Bigg Boss Kannada) ಈಗ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಒಟ್ಟು 16 ಅಭ್ಯರ್ಥಿಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ.

ಬಿಗ್‌ ಬಾಸ್‌ ಮಾಹಿತಿಯಂತೆ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಬೇಕಿತ್ತು. ಸ್ಪರ್ಧಿಗಳು ಈಗಾಗಲೇ ತಮ್ಮ ಇಚ್ಛೆ ಪಟ್ಟಂತಹ ಎರಡು ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಿದ್ದಾರೆ. ಮನೆಯ ಸ್ಪರ್ಧಿಗಳ ಆಯ್ಕೆ ಅನುಸಾರ ಏಳು ಸ್ಪರ್ಧಿಗಳು ಇದೀಗ ನಾಮಿನೇಟ್‌ ಆಗಿದ್ದಾರೆ. ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್‌ ಗುರೂಜಿ, ಜಯಶ್ರೀ, ನಂದಿನಿ, ಜಶ್ವಂತ್‌, ಕಿರಣ್‌ ಹಾಗೂ ಅಕ್ಷತಾ ನಾಮಿನೇಟ್‌ ಆದವರು. ಈಗಾಗಲೇ ಲಿವಿಂಗ್‌ ಏರಿಯಾದಲ್ಲಿ ಹೈಡ್ರಾಮಾ ಶುರುವಾಗಿದೆ. ಸ್ಪರ್ಧಿಗಳು ಕಾರಣಗಳನ್ನು ಹೇಳಿ ನಾಮಿನೇಟ್‌ ಮಾಡಬೇಕಿತ್ತು.

ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 24 ಗಂಟೆ ಲೈವ್‌ನಲ್ಲಿ ಬಿಗ್‌ ಬಾಸ್‌ ಪ್ರಸಾರವಾಗುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವೂಟ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡರೆ ಮಾತ್ರ ಈ ಕಾರ್ಯಕ್ರಮ ನೋಡಲು ಸಾಧ್ಯ. ಮುಂದೆ ಬರಲಿರುವ ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿಯೂ ಪ್ರಸಾರವಾಗಲಿದೆ. ಬಿಗ್‌ ಬಾಸ್ ಒಟಿಟಿ ಶೋ ಮುಗಿದ ನಂತರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಲಿದೆ.

ಇದನ್ನೂ ಓದಿ | Bigg Boss Kannada | ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿರುವ 16 ಜನರು ಯಾರು?

Exit mobile version