Site icon Vistara News

Bigg Boss Kannada | ನಾಮಿನೇಶನ್‌ ಟಾಸ್ಕ್‌ನಲ್ಲಿ ಗೆದ್ದು ದಡ ಸೇರಿದ್ದು ಯಾರು? ಚೈತ್ರಾ-ಉದಯ್‌ ವಾರ್‌!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಒಟಿಟಿಯಲ್ಲಿ (Bigg Boss Kannada) ಈ ವಾರ ಜಶ್ವಂತ್‌ ಕ್ಯಾಪ್ಟನ್‌ ಆಗಿದ್ದಾರೆ. ಈಗಾಗಲೇ ಬಿಗ್‌ಬಾಸ್‌ ಮನೆಯಿಂದ ಸ್ಫೂರ್ತಿ ಗೌಡ ಹಾಗೂ ಅರ್ಜುನ್‌ ರಮೇಶ್‌ ಹೊರ ನಡೆದಿದ್ದಾರೆ.

ಎರಡು ವಾರಗಳಲ್ಲಿ ಬಿಗ್‌ಬಾಸ್‌ ಮನೆಯಿಂದ ನಾಲ್ಕು ಸ್ಪರ್ಧಿಗಳು ಎಲಿಮಿನೇಷನ್‌ ಆಗಿದ್ದಾರೆ. ಈ ವಾರ ಅಕ್ಷತಾ ಕುಕ್ಕಿ, ಉದಯ್‌ ಸೂರ್ಯ, ಜಯಶ್ರೀ ಆರಾಧ್ಯ, ಚೈತ್ರಾ ಹಳ್ಳಿಕೇರಿ, ಸೋಮಣ್ಣ ಮಾಚಿಮಾಡ, ರೂಪೇಶ್‌ ಶೆಟ್ಟಿ, ಆರ್ಯವರ್ಧನ್‌ ನಾಮಿನೇಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಈಗಾಗಲೇ ಟಾಸ್ಕ್‌ ನೀಡಲು ಶುರು ಮಾಡಿದ್ದು, ಟಾಸ್ಕ್‌ನಲ್ಲಿ ಗೆಲ್ಲುವವರು ನಾಮಿನೇಷನ್‌ನಿಂದ ಪಾರಾಗುತ್ತಾರೆ. ರೋಲ್‌ ಟಾಸ್ಕ್‌ನಲ್ಲಿ ಜಶ್ವಂತ್‌ ನಂದಿನಿಗೆ ಮಾತ್ರ ಸಪೋರ್ಟ್‌ ಮಾಡುತ್ತಾರೆ ಎಂಬ ಕಾರಣಕ್ಕೆ ಚೈತ್ರಾ ಕೂಗಾಡಿದ್ದಾರೆ. ರೂಪೇಶ್‌ ಶೆಟ್ಟಿ ಕೂಡ ಈ ಬಗ್ಗೆ ಇರಿಸು-ಮುರಿಸಾಗಿದ್ದಾರೆ. ಬಿಗ್‌ ಬಾಸ್‌ ಟಾಸ್ಕ್‌ನ ಪ್ರೋಮೊ ಹಂಚಿಕೊಂಡಿದ್ದು, ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೆಯಿಂದ ಹೊರಗೆ ಬರಲಿದ್ದಾರಾ ಸ್ಫೂರ್ತಿ ಗೌಡ?

ಚೈತ್ರಾ-ಉದಯ್‌ ಮಧ್ಯೆ ಮಾತಿನ ಚಕಮಕಿ

ಹುಡುಗಿ ಬಗ್ಗೆ ಮಾತನಾಡುವಾಗ ನೂರು ಬಾರಿ ಯೋಚಿಸಬೇಕು ಎಂದು ಉದಯ್‌ ಬಳಿ ಚೈತ್ರಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನನ್ನದೇನೂ ತಪ್ಪಿಲ್ಲ ಎಂದು ಉದಯ್‌ ಕೇಳಿಕೊಂಡಿದ್ದಾರೆ. ಆದರೆ, ಅದನ್ನು ಕೇಳಿಸಿಕೊಳ್ಳಲು ಚೈತ್ರಾ ತಯಾರಿಲ್ಲದ್ದರಿಂದ ಅನಾವಶ್ಯಕವಾಗಿ ಸೀನ್‌ ಕ್ರಿಯೇಟ್‌ ಮಾಡಬೇಡ ಎಂದು ಉದಯ್‌ ಎಚ್ಚರಿಸಿದ್ದಾರೆ. ಈ ಮಾತಿನ ಚಕಮಕಿಯ ಎಪಿಸೋಡ್‌ ಸಂಜೆಯ ಸಂಚಿಕೆಯಲ್ಲಿ ಪ್ರಸಾರವಾಗಲಿದೆ ಎಂದು ವೂಟ್‌ ಪ್ರೋಮೊ ಹಂಚಿಕೊಂಡಿದೆ.

Exit mobile version