ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada ) ಹತ್ತನೇ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ರೋಚಕರ ಸಂಗತಿ ಸೃಷ್ಟಿಯಾಗಿದೆ. ಈ ವಾರ ಬಿಗ್ ಬಾಸ್ ನಾಮಿನೇಟ್ ಮಾಡಲು ಹೊಸ ಟಾಸ್ಕ್ ನೀಡಿದ್ದರು. ಈ ವಾರ ಒಂಬತ್ತು ಸದಸ್ಯರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಾಕೇಶ್ ಅಡಿಗ ಮತ್ತು ಸ್ಪರ್ಧಿ ರೂಪೇಶ್ ರಾಜಣ್ಣ ಮಾತ್ರ ಸೇಫ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಗೆ ಹೊಸ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಅನುಸಾರ ಮನಯ ಸದಸ್ಯರನ್ನು ಇಬ್ಬರಂತೆ ತಂಡಗಳಾಗಿ ವಿಂಗಡಿಸಿ ಸೌಂಡ್ ಪ್ರೂಫ್ ಕೊಠಡಿಗೆ ಹಾಕಿದ್ದರು. ಅವರಿಗೆ ಹೆಡ್ ಫೋನ್ ಹಾಕಿ ನಿಲ್ಲಿಸಲಾಗಿತ್ತು. ಇಬ್ಬರಿಗೂ ಅವರವರ ಚಿತ್ರಗಳನ್ನು ನೀಡಲಾಗಿತ್ತು. ಯಾರು ಸೇಫ್ ಆಗಬೇಕೆಂದು ಸ್ಪರ್ಧಿಗಳು ಚಿತ್ರ ತೋರಿಸಬೇಕಿತ್ತು. ಇಬ್ಬರೂ ತೋರಿಸಿದ ಚಿತ್ರ ಒಂದೇ ಆಗಿದ್ದರೆ ಚಿತ್ರದಲ್ಲಿರುವ ವ್ಯಕ್ತಿ ಸೇಫ್ ಆಗುತ್ತಿದ್ದರು. ಇಬ್ಬರೂ ಬೇರೆ ಬೇರೆ ಚಿತ್ರ ತೋರಿಸಿದರೆ ಇಬ್ಬರೂ ನಾಮಿನೇಟ್ ಆಗುತ್ತಾರೆ.
ಇದನ್ನೂ ಓದಿ | Bigg Boss Kannada | ರಾಕೇಶ್ ಅಡಿಗ-ಅಮೂಲ್ಯ ನಡುವೆ ಮನಸ್ತಾಪ: ಕಣ್ಣಿಂದಾಚೆ, ಗಮನದಿಂದಲೂ ಆಚೆ ಆದ್ರಾ ಅಮ್ಮು!
ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಮತ್ತು ದೀಪಿಕಾ ದಾಸ್ ಒಂದೇ ಚಿತ್ರವನ್ನು ತೋರಿಸಿದ ಕಾರಣ ಪ್ರಶಾಂತ್ ಸಂಬರಗಿ ಸೇಫ್ ಆದರು. ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಅವರು ಒಂದೇ ಚಿತ್ರವನ್ನು ತೋರಿಸಿದ ಕಾರಣ ರೂಪೇಶ್ ರಾಜಣ್ಣ ಸೇಫ್ ಆದರು. ಆದರೆ ಕ್ಯಾಪ್ಟನ್ ರಾಕೇಶ್ ಅಡಿಗ ಅವರಿಗೆ ವಿಶೇಷ ಅಧಿಕಾರ ಬಿಗ್ ಬಾಸ್ ನೀಡಿದ್ದರು. ಪ್ರಶಾಂತ್ ಸಂಬರಗಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ ರಾಕೇಶ್ ಅಡಿಗ. ಹೀಗಾಗಿ ರೂಪೇಶ್ ರಾಜಣ್ಣ ಮತ್ತು ರಾಕೇಶ್ ಅಡಿಗ ಈ ವಾರ ಸೇಫ್ ಆದರು. ಉಳಿದ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದಾರೆ.
ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಕಾವ್ಯ ಗೌಡ, ಅರುಣ್ ಸಾಗರ್, ಆರ್ಯವರ್ಧನ್ ಮತ್ತು ದೀಪಿಕಾ ದಾಸ್ ಈ ವಾರ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಿಂದ ಹೊರನಡೆದ ವಿನೋದ್ ಗೊಬ್ಬರಗಾಲ