Site icon Vistara News

Bigg Boss Kannada | ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ: ಇಲ್ಲಿ ಕಿಚ್ಚನ ಲುಕ್ಕೂ ಡಿಫರೆಂಟು!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ ಕನ್ನಡ (Bigg Boss Kannada) ಇದೀಗ ಮೂರನೇ ವಾರಕ್ಕೆ ಬಂದು ನಿಂತಿದೆ. ಈ ವಾರ ಸೋಮಣ್ಣ ಮಾಚಿಮಾಡ, ಉದಯ್‌ ಸೂರ್ಯ, ಚೈತ್ರಾ, ರೂಪೇಶ್‌ ಶೆಟ್ಟಿ ಮತ್ತು ಅಕ್ಷತಾ ಕುಕ್ಕಿ, ಜಯಶ್ರೀ, ಆರ್ಯವರ್ಧನ್‌ ಗುರೂಜಿ ನಾಮಿನೇಟ್‌ ಆಗಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ನೋಡಬೇಕಿದೆ. ಮನೆಯಲ್ಲಿ ಈ ವಾರ ಸೋಮಣ್ಣ ಮಾಚಿಮಾಡ ಕ್ಯಾಪ್ಟನ್‌ ಆಗಿದ್ದರು. ಹಾಗೇ ರೂಪೇಶ್‌ ಶೆಟ್ಟಿ ಈ ವಾರದ ಬೆಸ್ಟ್‌ ಪರ್ಫಾರ್ಮರ್‌ ಆಗಿ ಹೊರಹೊಮ್ಮಿದ್ದರು.

ಜಯಶ್ರೀ ಈ ವಾರ ಕಳಪೆ ಪ್ರದರ್ಶನ ಮಾಡಿ ಜೈಲು ಸೇರಿದರೆ, ಆರ್ಯವರ್ಧನ್‌ ಗುರೂಜಿ ಬೆಸ್ಟ್‌ ಆಟಗಾರ ಎಂದೆನಿಸಿಕೊಂಡರು. ಸೋಮಣ್ಣ ಅವರ ಸಾರಥ್ಯದಲ್ಲಿ ಎಲ್ಲ ಸ್ಪರ್ಧಿಗಳು ಟಾಸ್ಕ್‌ ಅನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಈ ವಾರ ಯಾರು ಮನೆಯಿಂದ ಎಲಿಮಿನೇಟ್‌ ಆಗುತ್ತಾರೆ ಎಂಬುದು ʻವಾರದ ಕತೆ ಕಿಚ್ಚನ ಜೊತೆʼ ಸಂಚಿಕೆ ಮೂಲಕ ರಿವೀಲ್‌ ಆಗಲಿದೆ. ಈ ವಾರ ಸುದೀಪ್‌ ಅವರು ಡಿಫರೆಂಟ್‌ ಲುಕ್‌ ಮೂಲಕ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss kannada | ರೂಪೇಶ್‌ಗೆ ಮೀನೂಟ, ಬಿಗ್‌ಬಾಸ್‌ನ ಈ ವಾರದ ಬೆಸ್ಟ್‌ ಪೋಟೋಗಳು ಇಲ್ಲಿವೆ!

Exit mobile version