ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ (Bigg Boss Kannada) ಈಗಾಗಲೇ ಶುರುವಾಗಿದ್ದು, ಮೊದಲ ದಿನ ಸ್ಪರ್ಧಿಗಳ ಹುರುಪು ಸಖತ್ ಆಗಿಯೇ ಇದೆ. ಈಗಲೇ ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ಗಳು ಕೇಳಿ ಬರಲು ಶುರುವಾಗಿವೆ.
ಮಲೆನಾಡ ಸುಂದರಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಒಂದು ರೌಂಡು ಸೋನು ಗೌಡ ಬಗ್ಗೆ ಮಾತಾಡಿದ್ದೂ ಆಗಿದೆ. ಸೋನು ಗೌಡಾಗೆ ಮೇಕಪ್ ಮಾಡಿಕೊಳ್ಳಲು ಬರಲ್ಲ, ಅಕ್ಷತಾ ಮಾಡುತ್ತಾ ಇದ್ದಾರೆ ಎನ್ನುತ್ತಾ ರಾಕೇಶ್ ಬಳಿ ಸೋನು ಕುರಿತಾಗಿ ಸ್ಫೂರ್ತಿ ಮಾತನಾಡಿದ್ದಾರೆ. ಸೋನು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಾರೆ. ಆದರೆ ಎಲ್ಲರೂ ಕೇಳ್ಕೊಂಡು ಸುಮ್ಮನೆ ಇದ್ದಾರೆ. ಯಾಕಂದರೆ ಸೋನುಗೆ ಬೇರೆ ಒಳ್ಳೆಯ ಕ್ವಾಲೀಟೀಸ್ ಇದೆ. ಇಲ್ಲಾ ಅಂದಿದ್ದರೆ ಇಷ್ಟೊತ್ತಿಗೆ ಯಾರೂ ಬಿಡುತ್ತಾ ಇರಲಿಲ್ಲಾ ಎಂದು ರಾಕೇಶ್-ಸ್ಫೂರ್ತಿ ಮಾತನಾಡಿಕೊಂಡಿದ್ದಾರೆ. ರಾಕೇಶ್ ಕೂಡ ಇದಕ್ಕೆ ಉತ್ತರ ನೀಡಿದ್ದು, ಸೋನು ಹಾವಭಾವಗಳನ್ನು ಕಾಮಿಡಿಯಾಗಿ ಮಾಡುತ್ತಾ ಕಾಲೆಳೆದಿದ್ದಾರೆ. ಕೊನೆಯಲ್ಲಿ ಸ್ಫೂರ್ತಿ ನನ್ನ ನಿಮ್ಮ ಆಲೋಚನೆಗಳು ಒಂದೇ ತರಹವಾಗಿದೆ ಎಂದು ಮಾತಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ. ನಿಮ್ಮನ್ನು ಲಾಂಗ್ ಜರ್ನಿಯಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತೇನೆ ಎಂದು ರಾಕೇಶ್ ಹೇಳಿದ್ದಾರೆ!
ಇದನ್ನೂ ಓದಿ | Bigg Boss Kannada | ಮೊದಲ ದಿನವೇ ಜಶ್ವಂತ್ ಬೋಪಣ್ಣಗೆ ಸರ್ಪೈಸ್ ನೀಡಿದ ಬಿಗ್ ಬಾಸ್!
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್ ಕುಮಾರ್ ಕೂಡ ರ್ಯಾಂಪ್ ವಾಕ್ ಮಾಡಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸಾನ್ಯ ಹಾಗೂ ಅಕ್ಷತಾ ಕೂಡ ರ್ಯಾಂಪ್ ವಾಕ್ ಮಾಡಿದ್ದಾರೆ. ಇದೀಗ ಮೊದಲ ದಿನದ ನಾಮಿನೇಷನ್ ಪ್ರಕ್ರಿಯೆ ಆರಂಭಗೊಂಡಿದೆ.
ಇದನ್ನೂ ಓದಿ | Bigg Boss Kannada | ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿರುವ 16 ಜನರು ಯಾರು?