Site icon Vistara News

Bigg Boss Kannada | ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿಗಳು!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಈಗಾಗಲೇ 50 ದಿನಗಳು ಮುಕ್ತಾಯಗೊಂಡಿವೆ. ಬಿಗ್‌ ಬಾಸ್‌ ಕನ್ನಡ ಒಟಿಟಿಯ ಸದಸ್ಯರು ರಿ-ಯುನಿಯನ್‌ ಆಗಿದ್ದು, ಚಾಮುಂಡಿ ಬೆಟ್ಟದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಒಟಿಟಿ ಸೀಸನ್‌ ಸ್ಪರ್ಧಿ ಸೋಮಣ್ಣ ಮಾಚಿಮಾಡ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಇದೀಗ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಅರ್ಜುನ್ ರಮೇಶ್, ಲೋಕೇಶ್ ಕುಮಾರ್, ಉದಯ್ ಸೂರ್ಯ, ಸ್ಫೂರ್ತಿ ಗೌಡ, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಹಾಗೂ ಸೋನು ಶ್ರೀನಿವಾಸ್ ಗೌಡ ಸ್ಪರ್ಧಿಯಾಗಿದ್ದರು. ಚಾಮುಂಡಿ ಬೆಟ್ಟದಲ್ಲಿ ಎಲ್ಲರೂ ಭೇಟಿಯಾಗಿದ್ದು, ಫೋಟೊವನ್ನು ಸೋಮಣ್ಣ ಮಾಚಿಮಾಡ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಕಳಪೆ ಪಟ್ಟದ ವಾದ- ಪ್ರತಿವಾದ: ಪ್ರಶಾಂತ್‌ ಸಂಬರಗಿಗೆ ಮನೆಮಂದಿ ನೀಡಿದ ಶಿಕ್ಷೆ ಏನು?

ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ಒಟಿಟಿ ಸೀಸನ್‌ನಿಂದ ಸಾನ್ಯ ಅಯ್ಯರ್‌, ರಾಕೇಶ್‌ ಅಡಿಗ, ರೂಪೇಶ್‌ ಶೆಟ್ಟಿ ಮತ್ತು ಆರ್ಯವರ್ಧನ್‌ ಗುರೂಜಿ ಆಯ್ಕೆಯಾಗಿದ್ದರು.ಇದೀಗ ಸೀಸನ್‌ 9ರಿಂದ ಸಾನ್ಯ ಅವರು ಮನೆಯಿಂದ ಹೊರನಡೆದಿದ್ದಾರೆ. 50 ದಿನಗಳು ಮುಕ್ತಾಯಗೊಂಡಿದ್ದು, ರಾಕೇಶ್‌ ಅಡಿಗ, ಆರ್ಯವರ್ಧನ್‌ ಗುರೂಜಿ ಹಾಗೂ ರೂಪೇಶ್‌ ಶೆಟ್ಟಿ ಅವರು ಪ್ರವೀಣರ ಜತೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದೀಗ ಸೀಸನ್‌ 9ಕ್ಕೆ ಒಟಿಟಿ ಸೀಸನ್‌ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ ಅವರು ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್ಸಿ ಕಹಾನಿಯಲ್ಲಿ ಟ್ವಿಸ್ಟ್!

Exit mobile version