Site icon Vistara News

Bigg Boss Kannada | ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್‌: ಈ 4 ಸ್ಪರ್ಧಿಗಳು ಸೀಸನ್‌ 9ಕ್ಕೆ ಎಂಟ್ರಿ, ಟಾಪರ್ ಆದ ರೂಪೇಶ್! 

Bigg Boss Kannada

ಬೆಂಗಳೂರು : ಬಿಗ್ ಬಾಸ್ ಒಟಿಟಿ (Bigg Boss Kannada) ಕನ್ನಡ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತೂ ಸೀಸನ್ 9ಕ್ಕೆ ಯಾರು ಹೋಗಲಿದ್ದಾರೆ ಎಂಬುದು ರಿವೀಲ್‌ ಆಗಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಎಂಟ್ರಿ ಪಡೆದುಕೊಂಡರು. ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ಎರಡನೇ ಸ್ಪರ್ಧಿಯಾಗಿ ಅವಕಾಶ ಪಡೆದಿದ್ದಾರೆ‌.

ಹಾಗೇ ಸಾನ್ಯ ಮತ್ತು ರಾಕೇಶ್ ಅಡಿಗ ಕೂಡ ಸೀಸನ್ 9ಕ್ಕೆ ಬಡ್ತಿ ಪಡೆದಿದ್ದಾರೆ. ಒಟಿಟಿ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ಜನಮೆಚ್ಚಿದ ನಾಯಕನಾಗಿ ಹೊರಹೊಮ್ಮಿದ್ದು 5 ಲಕ್ಷ ರೂ. ಗೆದ್ದಿದ್ದಾರೆ.

ಈಗಾಗಲೇ ಸೀಸನ್ 9ರ ಪ್ರೋಮೊ ಹಂಚಿಕೊಂಡ ಕಲರ್ಸ್ ಕನ್ನಡ ಸೆ.24ರಿಂದ 9ನೇ ಆವೃತ್ತಿಯನ್ನು ಶುರು ಮಾಡುತ್ತಿದೆ. ಪ್ರವೀಣರ ಜತೆ ನವೀನರು ಇರುವುದು ಈ ಬಾರಿ ಬಿಗ್ ಬಾಸ್‌‌ನ ವಿಶೇಷ. ಒಟಿಟಿ ಬಿಗ್‌ಬಾಸ್‌‌ಗೆ ಸೋಮಣ್ಣ ಮಾಚಿಮಾಡ, ಸಾನ್ಯ, ರೂಪೇಶ್ ಶೆಟ್ಟಿ, ಜಶ್ವಂತ್ ಜಯಶ್ರೀ, ಆರ್ಯವರ್ಧನ್ ಆಯ್ಕೆ ಆಗಿದ್ದರು. 8 ಸ್ಪರ್ಧಿಗಳಲ್ಲಿ ನಾಲ್ವರು 9ನೇ ಆವೃತ್ತಿಗೆ ಹೋಗುವುದು ಕನ್ಫರ್ಮ್ ಆಗಿದೆ. ಮೊದಲಿಗೆ ಜಶ್ವಂತ್ ಎಲಿಮಿನೇಟ್ ಆದರೆ, ಜಯಶ್ರೀ, ಸೋಮಣ್ಣ ಮಾಚಿಮಾಡ ಹಾಗೂ ಸೋನು ಗೌಡ ಎಲಿಮಿನೇಟ್‌ ಆಗಿದ್ದಾರೆ.

ಇದನ್ನೂ ಓದಿ | Bigg Boss Kannada | ಎಂಟರಲ್ಲಿ ನಾಲ್ಕು ಜನರಿಗೆ ಮಾತ್ರ ಟಿ.ವಿ ಸೀಸನ್‍‍ಗೆ ಅವಕಾಶ: ಇಲ್ಲಿವೆ ಕಿಚ್ಚನ ಫಿನಾಲೆ ಲುಕ್‌ ಪೋಟೋಗಳು

ಬಿಗ್‌ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಸಾನ್ಯಾ ಅಯ್ಯರ್, ಸಂಖ್ಯಾಶಾಸ್ತ್ರ ಖ್ಯಾತಿಯ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿವಾಡ, ರೂಪೇಶ್ ಶೆಟ್ಟಿ, ರಾಕೇಶ್, ಜಯಶ್ರೀ ಆರಾಧ್ಯ, ಪ್ರೇಮಿಗಳಾಗಿರುವ ಜಶ್ವಂತ್ ಬೋಪಣ್ಣ ಫಿನಾಲೆಗೆ ಎಂಟ್ರಿಕೊಟ್ಟಿದ್ದರು.

ಬಿಗ್‌ಬಾಸ್‌ ಸೀಸನ್‌ 9 ಪ್ರೋಮೊದಲ್ಲಿ ಹಿಂದಿನ ಸೀಸನ್‌ ಸ್ಪರ್ಧಿಗಳಾದ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌, ಅನುಪಮಾ ಗೌಡ ಮತ್ತು ವೈಷ್ಣವಿ ಗೌಡ ಕಾಣಿಸಿಕೊಂಡಿದ್ದು, ಸೀಸನ್‌ 9ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೂ ದಿನ ಪ್ರೋಮೊ ಹೋಲಿಕೆ ಮಾಡಿದರೆ ಈ ಬಾರಿ ವಿಭಿನ್ನವಾಗಿದೆ.

ಇದನ್ನೂ ಓದಿ | Bigg Boss Kannada | ಸೀಸನ್ ಗೆದ್ದು ಟಿ.ವಿ ಸೀಸನ್‍‍ಗೆ ಪ್ರವೇಶ ಪಡೆಯೋರು ಯಾರು? ಇಂದು ಫಿನಾಲೆ ಧಮಾಕಾ!

Exit mobile version