Site icon Vistara News

Bigg Boss Kannada | ಸೀಸನ್ ಗೆದ್ದು ಟಿ.ವಿ ಸೀಸನ್‍‍ಗೆ ಪ್ರವೇಶ ಪಡೆಯೋರು ಯಾರು? ಇಂದು ಫಿನಾಲೆ ಧಮಾಕಾ!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ ಫಿನಾಲೆಗೆ ಕೊನೇ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಸದಸ್ಯರು ತಮ್ಮ ಪಯಣದ ಕುರಿತು ಮನತುಂಬಿ ಅನಿಸಿಕೆ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಸೋಮಣ್ಣ ಮಾಚಿಮಾಡ, ಆರ್ಯವರ್ಧನ್‌ ಗುರೂಜಿ, ಜಯಶ್ರೀ, ಸಾನ್ಯ, ರಾಕೇಶ್‌, ಸೋನು ಗೌಡ ಮತ್ತು ರೂಪೇಶ್‌ ಶೆಟ್ಟಿ ಈ ವಾರ ಮನೆಯಲ್ಲಿ ಭಾವುಕತೆಯಿಂದ ಮಾತನಾಡಿದ್ದಾರೆ. ಹಾಗೆಯೇ ಶುಕ್ರವಾರ ಸಂಜೆಯ ಸಂಚಿಕೆಯಲ್ಲಿ(ಸೆ.16) ಒಟಿಟಿ ಸೀಸನ್‌ನಲ್ಲಿ ಗೆದ್ದು ಟಿವಿ ಸೀಸನ್‌ಗೆ ಯಾರು ಪ್ರವೇಶ ಪಡೆಯಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ.

ಸಾನ್ಯ ಹಸಿರು ಬಳೆಗಳನ್ನು ಸೋಮಣ್ಣ ಮಾಚಿಮಾಡಗೆ ನೀಡಿ ʻʻಆದಷ್ಟು ಬೇಗ ತೊಡಿಸಿಕೊಳ್ಳುವ ಕೈಗಳು ಸಿಗಲಿ” ಎಂದು ಹಾರೈಸಿದರು. ಜಯಶ್ರೀ ಮಾತನಾಡಿ ʻʻನನ್ನ ಗೆಲುವಾಗಿ ನಿಂತಿದ್ದು ಗುರೂಜಿʼʼ ಎಂದು ಭಾವುಕರಾಗಿ ಹೇರ್‌ಬ್ಯಾಂಡ್‌ ಅನ್ನು ಗುರೂಜಿಗೆ ನೀಡಿದರು. ಅದನ್ನು ನಿಮ್ಮ ಮಗಳು ಹಾಕಿಕೊಂಡಾಗ ನಾನು ನೆನಪಲ್ಲಿ ಉಳಿಯುತ್ತೇನೆ ಎಂದು ಆನಂದ ಭಾಷ್ಪ ಸುರಿಸಿದರು.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಒಟಿಟಿ ಫಿನಾಲೆಗೆ ಇವರೇ ಅರ್ಹರೆಂದ ಎಲಿಮಿನೇಟ್‌ ಸ್ಪರ್ಧಿಗಳು!

ಸೋನು ಗೌಡ ಮಾತನಾಡಿ ʻʻಮಗುವನ್ನು ತಾಯಿ ಎಷ್ಟು ಕೇರ್ ಮಾಡುತ್ತಾಳೋ ರಾಕೇಶ್​​ಗೆ ಅದಕ್ಕಿಂತ ಜಾಸ್ತಿ ಕೇರ್ ಕೊಟ್ಟಿದ್ದೇನೆ. ನಮ್ಮಿಬ್ಬರದ್ದು ಸ್ಪೆಷಲ್ ಕನೆಕ್ಷನ್, ಬಾಂಡಿಂಗ್. ನನ್ನ ಲೈಫ್‌ನಲ್ಲಿ ರಾಕೇಶ್ ತುಂಬಾ ಕಲಿಸಿಕೊಟ್ಟಿದ್ದಾನೆʼʼ ಎಂದಿದ್ದಾರೆ. ಹಾಗೆಯೇ ನಾನು ನನ್ನ ಸ್ವಂತ ದುಡ್ಡಿನಿಂದ ತೆಗೆದುಕೊಂಡಿದ್ದು ಈ ಗೋಲ್ಡ್ ಪೆಂಡೆಂಟ್. ಇದನ್ನ ನಾನು ರಾಕೇಶ್‌ಗೆ ಕೊಡುತ್ತಿದ್ದೇನೆ ಎಂದಿದ್ದಾರೆ. ಈ ಪೆಂಡೆಂಟ್‌ ರೌಂಡ್‌ ಆಗಿದೆ. ಈ ಭೂಮಿ ಕೂಡ ರೌಂಡ್ ಆಗಿದೆ. ಇವನು ಎಲ್ಲೇ ಹೋದರೂ ನಾನು ಇವನ ಹಿಂದೆ ಸುತ್ತುತ್ತಿರುತ್ತೇನೆ. ದಯವಿಟ್ಟು ಇದನ್ನು ಹಾಕಿಕೊಂಡು ನನ್ನನ್ನ ಯಾವಾಗಲೂ ನೆನಪಿಸಿಕೋʼʼ ಎಂದಿದ್ದಾರೆ.

ಈ ಫಿನಾಲೇ ವಾರ ಕೂಡ ರೂಪೇಶ್‌ ಶೆಟ್ಟಿ ಮತ್ತೆ ʻಬಾಸ್‌ʼ ಆಗಿ ಹೊರಹೊಮ್ಮಿದ್ದಾರೆ. ವೂಟ್‌ ಸಣ್ಣ ಪ್ರೋಮೊ ಒಂದನ್ನು ಹಂಚಿಕೊಂಡಿದ್ದು, ಜಶ್ವಂತ್‌ ಜೋಶ್‌ ಪಯಣ, ಆರ್ಯವರ್ಧನ್‌ ಜಂಗಲಕ ಜರ್ನಿ ಮತ್ತು ರಾಕೇಶ್‌ ಬಿಗ್‌ಬಾಸ್‌ ಕಹಾನಿ ವಿಡಿಯೋ ಬಿಟ್ಟಿದೆ. OTT ಸೀಸನ್ ಗೆದ್ದು ಟಿ.ವಿ ಸೀಸನ್‍‍ಗೆ ಪ್ರವೇಶ ಪಡೆಯುವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನೊಂದೆಡೆ ಬಿಗ್‌ ಬಾಸ್‌ ಸೀಸನ್‌ 9 ಶುರುವಾಗುವುದು ಫಿಕ್ಸ್‌ ಆಗಿದೆ. ಒಟಿಟಿಯಿಂದ ನಾಲ್ಕು ಸ್ಪರ್ಧಿಗಳು ಯಾರು ಸೀಸನ್‌ 9 ಕ್ಕೆ ಹೋಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ | Bigg Boss Kannada 9 | ಟಿವಿ ಸೀಸನ್‌ನಲ್ಲಿ ಪ್ರವೀಣರ ಜತೆ ನವೀನರು; ಶೋಗಿನ್ನು ಒಂಭತ್ತೇ ದಿನ ಬಾಕಿ!

Exit mobile version