ಬೆಂಗಳೂರು: ಬಿಗ್ ಬಾಸ್ ಒಟಿಟಿ ಕನ್ನಡ (Bigg Boss Kannada) ಈಗಾಗಲೇ ಅಸಲಿ ಆಟ ಶುರು ಮಾಡಿದೆ. ಕೇವಲ ಎರಡು ದಿನದಲ್ಲಿಯೇ ಸ್ಪರ್ಧಿಗಳ ಮಧ್ಯೆ ಇರಸುಮುರಸು ಆರಂಭವಾಗಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಟಾಸ್ಕ್ ನೀಡಲು ಶುರು ಮಾಡಿದೆ.
ವೂಟ್ ಸಣ್ಣ ವಿಡಿಯೊ ತುಣುಕನ್ನು ಹರಿ ಬಿಟ್ಟಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್ ಹಾಗೂ ಆರ್ಯವರ್ಧನ್ ಮಧ್ಯೆ ಮಾತಿನ ವಾರ್ ಶುರುವಾಗಿದೆ. ಲೋಕೇಶ್ ತಮ್ಮ ಜೀವನದ ಕಹಿ ಘಟನೆಗಳನ್ನು ಹೇಳುವಾಗ ಆರ್ಯವರ್ಧನ್, ಸಿಂಪಥಿ ಗಿಟ್ಟಿಸಿಕೊಳ್ಳಬೇಡಿ ಎನ್ನುವ ಅರ್ಥದಲ್ಲಿ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ | Bigg Boss Kannada | ಲಿವಿಂಗ್ ಏರಿಯಾದಲ್ಲಿ ಹೈಡ್ರಾಮಾ: ಮೊದಲ ದಿನ ಏಳು ಸ್ಪರ್ಧಿಗಳು ನಾಮಿನೇಟ್