Site icon Vistara News

Bigg Boss Kannada | ಪ್ರ್ಯಾಂಕ್‌ ಮಾಸ್ಟರ್‌ ರಾಕೇಶ್‌ ಅಡಿಗ ರ್‍ಯಾಪ್‌ ಹಾಡಿನ ಹೂರಣ: ವೈರಲ್‌ ಆಯ್ತು ವಿಡಿಯೊ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ರಾಕೇಶ್‌ ಅಡಿಗ ಸಮಯ ಸಿಕ್ಕಾಗೆಲ್ಲ ರ್‍ಯಾಪ್‌ ಸಾಂಗ್‌ ಮೂಲಕ ಮನರಂಜನೆ ನೀಡಲು ಎತ್ತಿದ ಕೈ. ಇವರ ಜತೆ ವಿನೋದ್‌ ಗೊಬ್ಬರಗಾಲ ಹಾಗೂ ಅರುಣ್‌ ಸಾಗರ್‌ ಅವರು ಸೇರಿದರೆ ಹಾಡಿಗೆ ಕಳೆ ಬರುವುದಂತೂ ಗ್ಯಾರಂಟಿ. ಇದೀಗ ರಾಕೇಶ್‌ ಅಡಿಗ ಅವರ ರ್‍ಯಾಪ್‌ ಸಾಂಗ್‌ ನೋಡಗರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೊ ವೈರಲ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ಪ್ರೇಕ್ಷಕರು ಸಂತಸ ವ್ಯಕ್ತ ಪಡಿಸಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಈ ಹಿಂದೆ ಹೆಂಗಳೆಯರು ರಾಕೇಶ್‌ ಅಡಿಗ ಅವರು ಎಕ್ಸ್‌ಪ್ರೆಷನ್‌ ನೀಡುವುದೇ ಇಲ್ಲ ಎಂದು ಸಾಬೀತು ಪಡಿಸಿದ್ದರು. ವೀಕೆಂಡ್‌ ಪಂಚಾಯಿತಿಯಲ್ಲಿ ಈ ಬಗ್ಗೆ ಕಿಚ್ಚನ ಮುಂದೆಯೂ ಪ್ರಸ್ತಾಪಿಸಲಾಗಿತ್ತು. ಕಿಚ್ಚ ಸುದೀಪ್‌ ಅವರು ಅರುಣ್‌ ಸಾಗರ್‌ ಅವರಿಗೆ ರಾಕೇಶ್‌ ಎಲ್ಲರ ಜತೆ ಮಿಂಗಲ್‌ ಆಗುವಂತೆ ಮಾಡಬೇಕು ಎಂದು ಆದೇಶ ನೀಡಿದ್ದರು. ಅಲ್ಲಿಂದ ರಾಕೇಶ್‌ ಅವರು ಅಮೂಲ್ಯ ಜತೆಗೂ ಆಪ್ತತೆ ಬೆಳೆಸಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಮನೆಯ ಕನ್‌ಫ್ಯೂಷನ್‌ಗಳಿಗೆ ರೂಪೇಶ್‌ ರಾಜಣ್ಣ ಕಿವಿ ಕಾರಣ ಎಂದ ಪ್ರಶಾಂತ್‌!

ವಿನೋದ್‌ ಗೊಬ್ಬರಗಾಲ ಹಾಗೂ ರಾಕೇಶ್‌ ಅಡಿಗ ಕೈ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ಮ್ಯೂಸಿಕ್‌ ಕಂಪೋಸ್‌ ಮಾಡಿ ರ್‍ಯಾಪ್‌ ಸಾಂಗ್‌ ಹಾಡುತ್ತಲೇ ಇರುತ್ತಾರೆ. ರಾಕೇಶ್‌ ಅಡಿಗ ರ್‍ಯಾಪ್‌ ಸಾಂಗ್‌ ಹಾಡಿದರೆ ಸಾಕು, ಉಳಿದ ಸ್ಪರ್ಧಿಗಳು ಡ್ಯಾನ್ಸ್‌ ಮಾಡಲು ಶುರು ಮಾಡುತ್ತಾರೆ.

ಬಿಗ್‌ ಬಾಸ್‌ ಮನೆಯಲ್ಲಿ ರಾಕೇಶ್‌ ಅಡಿಗ ಅವರು ಪ್ರ್ಯಾಂಕ್‌ ಮಾಸ್ಟರ್‌ ಎಂಬ ಬಿರುದು ಕೂಡ ಪಡೆದಿದ್ದಾರೆ. ಈ ಹಿಂದೆ ಪ್ರ್ಯಾಂಕ್‌ನಿಂದಾಗಿ ಸ್ಪರ್ಧಿಗಳು ಕಳಪೆಯನ್ನು ನೀಡಿದ್ದರು. ಕಿಚ್ಚ ಸುದೀಪ್‌ ಕೂಡ ವಾರ್ನಿಂಗ್‌ ಕೊಟ್ಟಿದ್ದರು. ಈ ವಾರ ರಾಕೇಶ್‌ ಅಡಿಗ ನಾಮಿನೇಟ್‌ ಆಗಿದ್ದು ಹೇಗೆ ರಂಜಿಸಲಿದ್ದಾರೆ ಎಂಬದು ಕಾದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಆತ್ಮ ಸಾಕ್ಷಿಗೆ ತಪ್ಪು ಅನಿಸಿದ ಮೇಲೆ ಕ್ಷಮೆ ಕೇಳಲೇಬೇಕು ಅಂತಿದ್ದಾರೆ ಅರುಣ್‌ ಸಾಗರ್‌!

Exit mobile version