Site icon Vistara News

Bigg Boss Kannada | ಪ್ರಶಾಂತ್‌-ಸಾನ್ಯ ತರ್ಲೆ: ರೂಪೇಶ್ ರಾಜಣ್ಣ ಗಿರಿಗಿಟ್ಲೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಸುದೀಪ್‌ ವೀಕೆಂಡ್‌ ಪಂಚಾಯಿತಿಯಲ್ಲಿ ಪ್ರಶಾಂತ್‌ ಸಂಬರಿಗೆ ಹಾಗೂ ರೂಪೇಶ್‌ ರಾಜಣ್ಣಗೆ ಟಾಮ್‌ ಮತ್ತು ಜೆರ್ರಿ ಎಂದು ಹೆಸರಿಟ್ಟಿದ್ದಾರೆ. ಈ ವಾರ ಬಿಗ್‌ ಬಾಸ್‌ನಲ್ಲಿ ರೂಪೇಶ್‌ ರಾಜಣ್ಣ ಕುರಿಯಾಗುತ್ತಿದ್ದಾರೆ. ಪ್ರಶಾಂತ್‌ ಸಂಬರಗಿ ಮತ್ತು ಸಾನ್ಯ ಅಯ್ಯರ್‌ ಸೇರಿಕೊಂಡು ಬಕ್ರಾ ಮಾಡುತ್ತಿದ್ದಾರೆ. ರೂಪೇಶ್ ರಾಜಣ್ಣ ನಡೆದುಕೊಳ್ಳುತ್ತಿರುವ ರೀತಿಗೆ ಸಾನ್ಯ ಐಯ್ಯರ್ ಹಾಗೂ ಪ್ರಶಾಂತ್‌ ಬಿದ್ದು ಬಿದ್ದು ನಗುತ್ತಿದ್ದಾರೆ.

ರೂಪೇಶ್‌ ರಾಜಣ್ಣ ಜತೆ ಜಗಳ ಆಡಿದ್ದಕ್ಕೆ ಅವರ ವಾಟರ್‌ ಬಾಟಲ್‌ ಅನ್ನು ಪ್ರಶಾಂತ್‌ ಸಂಬರಗಿ ಈ ಹಿಂದೆ ಬಚ್ಚಿಟ್ಟಿದ್ದರು. ಇದನ್ನು ಸಾನ್ಯರ ಮುಂದೆ ಪ್ರಶಾಂತ್‌ ಸಂಬರಗಿ ಹೇಳಿಕೊಂಡಿದ್ದರು. ಇದಕ್ಕೆ ಸಾನ್ಯ ಬಿದ್ದು ಬಿದ್ದು ನಕ್ಕಿದ್ದಾರೆ. ಬಾಟಲನ್ನು ದಿವ್ಯಾ ಉರುಡುಗ ಬೆಡ್ ಪಕ್ಕ ಅಡಗಿಸಿ ಇಟ್ಟಿದ್ದರು ಪ್ರಶಾಂತ್. ಸಾನ್ಯ ಐಯ್ಯರ್ ಅವರ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಪ್ರಶಾಂತ್​ ಹೇಳಿದ್ದರು. ನಂತರ ಸಾನ್ಯಾ ಅವರು ಬಂದು ರೂಪೇಶ್ ರಾಜಣ್ಣ ಬಳಿ ಬಾಟಲ್ ಇರುವ ಜಾಗದ ಬಗ್ಗೆ ಮಾಹಿತಿ ನೀಡಿದರು. ಸಾನ್ಯ ಹೇಳಿದ ಜಾಗಕ್ಕೆ ಹೋಗಿ ನೋಡಿದಾಗ ಬಾಟಲ್ ಸಿಕ್ಕಿತು. ಆ ಒಂದು ಕ್ಷಣ ರೂಪೇಶ್ ರಾಜಣ್ಣ ನಡುಗಿ ಹೋದರು.

ಇದನ್ನೂ ಓದಿ | Bigg Boss Kannada | ಹೆಣ್ಣಿಗೆ ಹೆಣ್ಣೇ ಶತ್ರು , ಆ ಗ್ರೂಪ್‌ನಲ್ಲಿ ಇದ್ದಿದ್ದರೆ ನಾಮಿನೇಟ್‌ ಆಗ್ತಾ ಇರಲಿಲ್ಲ: ಕಾವ್ಯಶ್ರೀ

ನಂತರ ಬಾಳೆ ಹಣ್ಣಿನ ವಿಚಾರ ಬಂತು. ದೇವರ ಮೂರ್ತಿ ಪಕ್ಕದಲ್ಲಿ ಒಂದು ಬಾಳೆ ಹಣ್ಣಿದೆ. ಆ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್‌ ಆಗಿರುತ್ತದೆ. ನಿಮಗಾಗದ ಐದು ಜನರಿಗೆ ನೀಡಿ, ಅವರು ಸೋಲುತ್ತಾರೆ ಎಂದು ಸಾನ್ಯ ಅವರು ರೂಪೇಶ್ ಅವರಿಗೆ ಹೇಳಿದ್ದರು. ಅದರಂತೆ ರೂಪೇಶ್ ಅವರು ದೇವರ ಮೂರ್ತಿ ಬಳಿ ಇರುವ ಬಾಳೆ ಹಣ್ಣು ಪರೀಕ್ಷಿಸುತ್ತಾರೆ. ಸಾನ್ಯಾ ಹೇಳಿದೆ ಹಾಗೆಯೇ, ಬಾಳೆ ಹಣ್ಣು ಒಳಗಿನಿಂದ ಐದು ಕಡೆ ಕಟ್ ಆಗಿರುತ್ತದೆ. ಇದನ್ನು ಕಂಡು ರೂಪೇಶ್ ಅವಕ್ಕಾಗುತ್ತಾರೆ. ಹಾಗೆಯೇ, ತುಂಡಾ ಬಾಳೆ ಹಣ್ಣನ್ನು ರೂಪೇಶ್ ತಮಗಾಗದ ಪ್ರಶಾಂತ್ ಅವರಿಗೆ ಕೊಡಬಹುದು ಎಂಬ ಊಹೆ ತಪ್ಪಾಗುತ್ತದೆ. ಬದಲಿಗೆ, ರೂಪೇ ಅವರು ʻʻನಾನು ಯಾರಿಗೂ ಕೊಡಲ್ಲ. ಆ ರೀತಿ ಮೋಸ ಮಾಡೋದು ನಗೆ ಇಷ್ಟ ಇಲ್ಲಾʼʼ ಎಂದಿದ್ದಾರೆ. ಇದನ್ನು ಕೇಳಿ ಪ್ರಶಾಂತ್‌ ಖುಷಿಯಾಗಿದ್ದು, ಅರುಣ್‌ ಸಾಗರ್‌ ಮುಂದೆ ʻʻರೂಪೇಶ್‌ ರಾಜಣ್ಣನಿಗೆ ನಿಯತ್ತಿದೆ, ಆತನಿಗೆ ಮೌಲ್ಯಗಳಿವೆ,ʼʼ ಎಂದು ಹೇಳಿಕೊಂಡಿದ್ದಾರೆ. ಅರುಣ್‌ ಸಾಗರ್‌ ಕೂಡ ಹೌದು ಎಂದಿದ್ದಾರೆ.

ಈ ವಾರದ ಕ್ಯಾಪ್ಟನ್‌ ಟಾಸ್ಕ್‌ನಲ್ಲಿಯೂ ಎರಡು ತಂಡಗಳ ಕ್ಯಾಪ್ಟನ್‌ ಆಯ್ಕೆ ಮಾಡುವ ಅಧಿಕಾರವನ್ನು ಬಿಗ್‌ ಬಾಸ್‌ ದೀಪಿಕಾ ದಾಸ್‌ಗೆ ನೀಡಿದ್ದರು. ಈ ಅಧಿಕಾರ ಬಳಸಿಕೊಂಡ ದೀಪಿಕಾ ದಾಸ್‌ ಅವರು ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ಅವರನ್ನು ಸೆಲೆಕ್ಟ್‌ ಮಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ʻನನ್ನ ಜತೆ ಮಾತಾಡುವ ರೀತಿ ಬದಲಾಗಿದೆ ರೂಪಿʼ: ಕಣ್ಣೀರು ಹಾಕಿದ ಸಾನ್ಯ!

Exit mobile version