Site icon Vistara News

Bigg Boss Kannada | ಪ್ರಶಾಂತ್‌-ರೂಪೇಶ್‌ ಮಾತಿನ ಚಕಮಕಿ: ಅವರವರ ಭಾವಕ್ಕೆ ಅವರವರ ವಾದ, ಯಾವುದು ಸರಿ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) 20ನೇ ದಿನ ರೂಪೇಶ್‌ ರಾಜಣ್ಣ ಮನೆಯವರ ಮುಂದೆ ಪ್ರಶಾಂತ್ ಸಂಬರಗಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೇ ಕಳಪೆ ಪ್ರದರ್ಶನದ ಅನೌನ್ಸ್‌ ವೇಳೆಯಲ್ಲಿ ಪ್ರಶಾಂತ್‌ ಸಂಬರಗಿ ಹಾಗೂ ರೂಪೇಶ್‌ ರಾಜಣ್ಣ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ರೂಪೇಶ್‌ ರಾಜಣ್ಣ ಮನೆಯವರ ಮುಂದೆ ʻʻಎಲ್ಲರ ಸಮ್ಮುಖದಲ್ಲಿ ನಾನು ಎರಡು ಪದಗಳನ್ನ ಉಪಯೋಗಿಸಿದ್ದೆ. ಆ ಎರಡು ಪದಗಳಿಗೆ ಮಾತ್ರ ನಾನು ಕ್ಷಮೆ ಕೇಳುತ್ತೇನೆ, ವಾಪಸ್ ಪಡೆಯುತ್ತೇನೆ. ಉಳಿದ ಚರ್ಚೆ ಹಾಗೇ ಇರುತ್ತೆ’’ ಎಂದರು. ಈ ವೇಳೆ ಅರುಣ್‌ ಸಾಗರ್‌ ಪ್ರತಿಕ್ರಿಯೆ ನೀಡಿ ‘’ಮಾತು ಜಾರದೇ ಇದ್ದರೆ ಅದು ಮುತ್ತು. ಮಾತು ಜಾರಿದರೆ ಅದೇ ನಿಮಗೆ ಕುತ್ತು’ ಎಂದರು.

ಇದನ್ನೂ ಓದಿ | Bigg Boss Kannada | ನಿಮ್ಮೊಳಗೆ ತುಂಬ ಜನಕ್ಕೆ ಮಾನವೀಯತೆ ಇಲ್ಲ: ಗರಂ ಆದ್ರು ಅರುಣ್‌ ಸಾಗರ್‌!


ರೂಪೇಶ್ ರಾಜಣ್ಣಗೆ ಪ್ರಶಾಂತ್ ಸಂಬರಗಿ ಕಳಪೆ ಕೊಡುವ ಸಂದರ್ಭದಲ್ಲಿ ‘’ಮಾತಿನ ಭರದಲ್ಲಿ ನನ್ನ ತಾಯಿಯನ್ನ ಅವಮಾನ ಮಾಡಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವಷ್ಟು ಪದಗಳನ್ನು ಆಡಿ, ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜಿಗೆ ಹಾಕಿದ್ದೀರಲ್ಲ, ಇದಕ್ಕೆ ಬೇರೆ ಯಾವ ಶಿಕ್ಷೆಯೂ ಇಲ್ಲʼʼ ಎಂದು ಕೂಗಾಡಿದ್ದಾರೆ.

ರೂಪೇಶ್‌ ರಾಜಣ್ಣರ ಸರದಿ ಬಂದಾಗ ಈ ಕುರಿತು ಪ್ರತಿಕ್ರಿಯೆ ನೀಡಿ ʻʻನಾನಾಗಿ ನಾನು ಜಗಳವನ್ನ ಪ್ರಾರಂಭ ಮಾಡಲಿಲ್ಲ. ನೀವು ಗ್ಲಾಸ್‌ ಡೋರ್‌ ಕ್ರಾಸ್ ಮಾಡುವಾಗ ಯಾವ ಶಬ್ದ ಬಳಸಿದ್ದೀರಿ ಅನ್ನೋದನ್ನು ಕರ್ನಾಟಕದ ಜನತೆ ನೋಡಿದ್ದಾರೆ. ಶಬ್ದವನ್ನ ಪ್ರಯೋಗ ಮಾಡಿ ನನ್ನನ್ನ ಪ್ರಚೋದಿಸಿದ್ದೀರಿ. ಅದಾದ ಮೇಲೆ ನೀವು ಒಳಗೆ ಹೋಗುತ್ತೀರಿ, ಹೊರಗಡೆ ನನ್ನನ್ನ ಮಾತಾಡುವ ಹಾಗೆ ಮಾಡುತ್ತೀರಿ. ನಾನು ಮೋಸ ಮಾಡಿ ಆಟ ಆಡಲಿಲ್ಲ. ಆದರೆ ನೀವು ಮಹಾ ಮೋಸ ಮಾಡಿ ನನ್ನನ್ನ ಸೋಲಿಸಿದ್ದೀರಿ’’ ಎಂದು ಗರಂ ಆಗಿ ಹೇಳಿದ್ದಾರೆ.

ಇದನ್ನೂ ಓದಿ |Bigg Boss Kannada | ಪ್ರಶಾಂತ್‌ ಆಟಕ್ಕೆ ಮನೆಯವರ ಹೊಗಳಿಕೆ: ನಿಮ್ಮನ್ನು ಟ್ರಸ್ಟ್‌ ಮಾಡೋದು ಕಷ್ಟ ಅಂದ್ರು ನೇಹಾ!

Exit mobile version