ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ನಾಲ್ಕನೇ ವಾರ ಪ್ರಶಾಂತ್ ಸಂಬರಗಿ ಮತ್ತು ಸಾನ್ಯ ನಡುವೆ ಬಹಳ ಆತ್ಮೀಯತೆ ಬೆಳೆದಿತ್ತು. ಇಬ್ಬರೂ ಸೇರಿಕೊಂಡು ರೂಪೇಶ್ ರಾಜಣ್ಣ ಅವರನ್ನು ಪ್ರ್ಯಾಂಕ್ ಮಾಡಿದ್ದರು. ಇದರ ನಡುವೆ ಸಾನ್ಯರ ಮೇಲೆ ಪ್ರಶಾಂತ್ ಸಂಬರಗಿ ಕಿಡಿಕಾರಿದ್ದಾರೆ. ʻನಿನ್ನನ್ನು ದೇವರು ಮೆಚ್ಚೋದಿಲ್ಲʼ ಎಂದು ಪ್ರಶಾಂತ್ ಸಂಬರಗಿ ಅವರು ಸಾನ್ಯಗೆ ಹಿಡಿಶಾಪ ಹಾಕಿದ್ದಾರೆ.
ನಾಲ್ಕನೇ ವಾರ ಕಳಪೆ ಕೊಡುವ ಸಂದರ್ಭದಲ್ಲಿ ಸಾನ್ಯ ಅವರು ಪ್ರಶಾಂತ್ ಸಂಬರಗಿ ಅವರಿಗೆ ಕಳಪೆ ಶ್ರೇಣಿ ನೀಡಿದರು. ಇದಕ್ಕೆ ಕಾರಣವನ್ನು ನೀಡಿದ ಸಾನ್ಯ ʻʻಪ್ರಶಾಂತ್ ಸಂಬರಗಿ ತುಂಬಾ ಎಫೆಕ್ಟಿವ್ ಆಗಿ ಆಡಿದ್ದಾರೆ. ಆದರೆ ಅನುಪಮಾ ಮತ್ತು ರಾಕೇಶ್ ಬಾಯಿಯಿಂದ ಸ್ಟ್ರ್ಯಾಟೆಜಿಗಳು ಬರುತ್ತಿತ್ತು. ಯಾವ ಟಾಸ್ಕ್ ನಾವು ಗೆದ್ದಿದ್ದೇವೆ, ಯಾವ ಟಾಸ್ಕ್ ನಾವು ಸೋತಿದ್ದೇವೆ ಎನ್ನುವ ಕ್ಲ್ಯಾರಿಟಿ ಪ್ರಶಾಂತ್ ಸಂಬರಗಿ ಅವರಿಗೆ ಅರಿವು ಇರಲಿಲ್ಲʼʼ ಎಂದು ಕಾರಣ ನೀಡಿದರು. ನಂತರ ಅನುಪಮಾ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಸೂಚಿಸಿದರು. ಈ ವಾರ ಸಾನ್ಯ ಉತ್ತಮ ಪ್ರದರ್ಶನಕಾರರಾಗಿಯೂ ಹೊರಹೊಮ್ಮಿದರು. ಸಾನ್ಯ ಕಳಪೆ ಶ್ರೇಣಿ ಕೊಟ್ಟ ಕಾರಣದಿಂದಾಗಿ ಪ್ರಶಾಂತ್ ಸಂಬರಗಿ ಅನುಪಮಾ ಮುಂದೆ ಗರಂ ಆಗಿ ಸಾನ್ಯ ಅವರಿಗೆ ಕ್ಲಾಸ್ ತೆಗೆದುಕೊಂಡರು.
ಇದನ್ನೂ ಓದಿ | Bigg Boss Kannada | ಇನ್ನೆರಡು ವಾರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ: ಪ್ರವೇಶಿಸಲಿದ್ದಾರಾ ಪ್ರವೀಣರು?
ಸಾನ್ಯ ಅವರಿಗೆ ಪ್ರಶಾಂತ್ ಸಂಬರಿ ʻʻಸಾನ್ಯ, ಈ ಮುಂಚೆ ನೀನು ನನ್ನ ಬಳಿ ಅನುಪಮಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ಯಾ ಇಲ್ಲವಾ? ಈ ವಿಷಯ ನಿನ್ನ ಬಾಯಿಯಿಂದ ಬಂದಿದ್ದಕ್ಕೆ ನಾನು ಹೇಳಿದೆ ಹೊರತು ಅನುಪಮಾ ಕಣ್ಣಲ್ಲಿ ಬೀಳುವುದಕ್ಕೆ ನನಗೆ ಇಷ್ಟವಿಲ್ಲ. ಯಾಕೆ ಅಂದರೆ ಅನುಪಮಾ ಅವರ ಮೇಲೆ ನನಗೆ ತುಂಬಾ ಅಭಿಮಾನ ಇದೆ. ಅವರಿಗೆ ನನ್ನ ಮೇಲೆ ಅಭಿಮಾನ ಇದೆ. ವಯಸ್ಸಿನಲ್ಲಿ ನಾನು ದೊಡ್ಡವನಿದ್ದೇನೆ. ಹೆಣ್ಣು ಮಕ್ಕಳ ಮಧ್ಯೆ ತಂದಿಡುವ ಕೆಲಸ ನಾನು ಮಾಡುವುದಿಲ್ಲ. ಅಂತಹ ಚಿಲ್ಲರೆ ಕೆಲಸ ನಾನು ಮಾಡುವುದಿಲ್ಲ. ಅನುಪಮಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ನೀನು ಹೇಳಿದ್ಯಾ, ಇಲ್ಲವಾ ಅಷ್ಟು ಹೇಳು ಸಾಕುʼʼ ಎಂದಿದ್ದಾರೆ. ಈ ಬಗ್ಗೆ ಸಾನ್ಯ ʻʻನೋʼʼ ಎಂದು ಉತ್ತರ ನೀಡಿದರು.
ಪ್ರಶಾಂತ್ ಸಂಬರಗಿ ಅವರಿಗೆ ಮತ್ತೆ ಕೋಪ ನೆತ್ತಿಗೇರಿ ಸಾನ್ಯಗೆ ʻʻನನ್ನ ಮಾತನ್ನು ಟ್ವಿಸ್ಟ್ ಮಾಡಿ, ಬೇರೆ ಹೇಳಿ, ಅನುಪಮಾ ಕಣ್ಣಲ್ಲಿ ಬೀಳಿಸಿದ್ದೀಯಾ. ಅದನ್ನು ದೇವರು ಮೆಚ್ಚೋದಿಲ್ಲಾ. ನಿನಗೆ ಒಳ್ಳೆಯದೂ ಆಗೋದಿಲ್ಲ. ನೀನು ಬೆಳೆಯುವ ಹುಡುಗಿ. ನಿನಗೆ ಒಳ್ಳೆಯದಾಗಲಿ, ಗುಡ್ ಲಕ್ʼʼ ಎಂದಿದ್ದಾರೆ.
ಅದೇ ದಿನ ಅರುಣ್ ಸಾಗರ್ ಕೂಡ ಸಾನ್ಯ ಬಗ್ಗೆ “”ಪ್ರಶಾಂತ್ ಸಂಬರಗಿ , ರಾಕೇಶ್ ಅಡಿಗ ಮುಂದೆ ಡಾಮಿನೇಟ್ ಮಾಡುತ್ತಾರೆʼʼ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ | Bigg Boss Kannada | ಬಲಗಾಲಿಟ್ಟು ಕ್ಯಾಪ್ಟನ್ ರೂಮ್ಗೆ ಎಂಟ್ರಿ ಕೊಟ್ಟ ಸಾನ್ಯ: ಈ ವಾರದ ಸಂತಸದ ಕ್ಷಣಗಳು ಇಲ್ಲಿವೆ!