Site icon Vistara News

Bigg Boss Kannada | ಮನೆಯ ಕನ್‌ಫ್ಯೂಷನ್‌ಗಳಿಗೆ ರೂಪೇಶ್‌ ರಾಜಣ್ಣ ಕಿವಿ ಕಾರಣ ಎಂದ ಪ್ರಶಾಂತ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ಸಂಬರಗಿ ನಡುವೆ ಪ್ರತಿ ವಿಷಯಕ್ಕೂ ಜಗಳಗಳು ನಡೆಯುತ್ತಲೇ ಇರುತ್ತದೆ. ಈ ಬಾರಿ ಪ್ರಶಾಂತ್‌ ಸಂಬರಗಿ ಅವರು ರೂಪೇಶ್‌ ರಾಜಣ್ಣ ಅವರಿಗೆ ಕಿವಿ ಕೇಳಿಸುವುದಿಲ್ಲ ಎಂದು ಪ್ರೂವ್‌ ಮಾಡಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಎಲ್ಲ ಕನ್‌ಫ್ಯೂಷನ್‌ಗಳಿಗೆ ರೂಪೇಶ್‌ ರಾಜಣ್ಣ ಅವರ ಕಿವಿ ಕಾರಣ ಎಂದು ಪ್ರಶಾಂತ್‌ ಸಂಬರಗಿ ಅವರು ದಿವ್ಯಾ ಉರುಡಗ ಮುಂದೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ರೂಪೇಶ್‌ ರಾಜಣ್ಣ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ಸಂಬರಗಿ ಮಧ್ಯೆ ಮನೆಯ ಕ್ಲೀನಿಂಗ್‌ ವಿಚಾರವಾಗಿ ವಾದಗಳು ನಡೆಯಿತು. ಸಾನ್ಯ ಟಾಸ್ಕ್‌ ಬಿಟ್ಟು ಕೊಟ್ಟ ಬಗ್ಗೆಯೂ ರೂಪೇಶ್‌ ರಾಜಣ್ಣ ಅವರು ಪ್ರಶಾಂತ್‌ ಸಂಬರಗಿ ಅವರಿಗೆ ಸ್ಪಷ್ಟೀಕರಣ ಕೊಡಲು ಹೇಳಿದರು. ಚರ್ಚೆಗಳು ಆದ ನಂತರ ನೇಹಾ ಮತ್ತು ದಿವ್ಯಾ ಉರುಡುಗ ಮುಂದೆ ಪ್ರಶಾಂತ್‌ ಸಂಬರಗಿ ʻʻರೂಪೇಶ್‌ ರಾಜಣ್ಣ ಅವರಿಗೆ 50% ಮಾತ್ರ ಕಿವಿ ಕೇಳಿಸುತ್ತದೆ. ಅವರಿಗೆ ಟ್ರೀಟ್‌ಮೆಂಟ್‌ ಅಗತ್ಯ ಇದೆ. ಅದನ್ನು ನಾನು ಪ್ರೂವ್‌ ಮಾಡುತ್ತೇನೆʼʼ ಎಂದರು. ಮೊದಲಿಗೆ ದಿವ್ಯಾ ಉರುಡುಗ ಇದನ್ನು ಒಪ್ಪಿಲ್ಲ.

ಇದನ್ನೂ ಓದಿ | Bigg boss Kannada | ಕರಿಬೇವು ಚೆಲ್ಲಿದ ವಿನೋದ್ ಗೊಬ್ಬರ ಗಾಲಗೆ ಕ್ಲಾಸ್ ತೆಗೆದುಕೊಂಡ ಕಾವ್ಯ ಶ್ರೀ

ದಿವ್ಯಾ ಉರುಡುಗ ಅವರು ರೂಪೇಶ್‌ ರಾಜಣ್ಣ ಅವರ ಬಳಿ ʻʻಕಿವಿ ಸಂಬಂಧಿತ ಸಮಸ್ಯೆ ಇದೆಯಾʼʼ ಎಂದು ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ರೂಪೇಶ್‌ ರಾಜಣ್ಣ ʻʻನನಗೆ ದೂರದಿಂದ ಮಾತನಾಡಿಸಿದರೂ ಕೇಳುತ್ತದೆ. ನನ್ನ ಒಂದು ಕಿವಿ ಮುಚ್ಚಿಕೊಂಡು ಇನ್ನೊಂದು ಕಿವಿಯಿಂದ ದೂರದಲ್ಲಿ ನಿಂತು ಮಾತನಾಡಿದರೆ ಕೇಳಿಸುವುದಿಲ್ಲ. ಆದರೆ ಸ್ಪಷ್ಟವಾಗಿ ಒಂದು ಕಿವಿ ಕೇಳಿಸುವುದಿಲ್ಲ. ಸ್ವಲ್ಪ ದೂರ ನಿಂತು ಮಾತನಾಡಿದರೆ ಕೇಳುತ್ತದೆʼʼ ಎಂದರು. ದಿವ್ಯಾ ಉರುಡುಗ ಈ ಬಗ್ಗೆ ʻʻನಿಮ್ಮ ಹಾನೆಸ್ಟಿ ಇಷ್ಟ ಆಯ್ತುʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಉಡುಗೊರೆ ನೋಡಿ ಕುಣಿದು ಕುಪ್ಪಳಿಸಿದ್ರು ರೂಪೇಶ್‌ ಶೆಟ್ಟಿ: ಭಾವುಕರಾದ್ರು ವಿನೋದ್‌!

Exit mobile version