Site icon Vistara News

Bigg Boss Kannada | ಕಳಪೆ ಪಟ್ಟದ ವಾದ- ಪ್ರತಿವಾದ: ಪ್ರಶಾಂತ್‌ ಸಂಬರಗಿಗೆ ಮನೆಮಂದಿ ನೀಡಿದ ಶಿಕ್ಷೆ ಏನು?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 55ನೇ ದಿನ ಸ್ಪರ್ಧಿಗಳು ‘ಕಳಪೆ’ಯನ್ನು ಪ್ರಶಾಂತ್‌ ಸಂಬರಗಿ ಅವರಿಗೆ ಹಾಗೂ ಅತ್ಯುತ್ತಮವನ್ನು ಅಮೂಲ್ಯ ಅವರಿಗೆ ನೀಡಿದ್ದಾರೆ. ಈ ಬಗ್ಗೆ ಪ್ರಶಾಂತ್‌ ಸಂಬರಗಿ ಅವರು ʻಮನೆಯವರೆಲ್ಲರೂ ಸೇರಿ ಒಮ್ಮತದಿಂದ ತನಗೆ ಕಳಪೆ ಕೊಟ್ಟಿದ್ದೀರಿʼ ಎಂದು ಕಾರಣ ನೀಡಿ ಸ್ಪರ್ಧಿಗಳ ವಿರುದ್ಧ ಕೂಗಾಡಿದ್ದಾರೆ.

ಗೊಂಬೆಗಳ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಅವರು ಆಗಾಗ ಎಲ್ಲರನ್ನೂ ಟ್ರಿಗರ್‌ ಮಾಡುತ್ತಿದ್ದರು. ಅದೇ ರೀತಿ ರೂಪೇಶ್‌ ಶೆಟ್ಟಿ ಅವರೊಂದಿಗೆ ಜಗಳ ಮಾಡಿರುವುದು ಸರಿಯಾಗಿ ಕಾಣಲಿಲ್ಲ ಎಂದು ಬಹುತೇಕ ಮಂದಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಕೇಶ್‌ ಅಡಿಗ ಮತ್ತು ಅನುಪಮಾ ಅವರ ಮಾತುಗಳು ಪ್ರಶಾಂತ್‌ ಸಂಬರಗಿ ಅವರನ್ನು ಕೋಪಕ್ಕೆ ಗುರಿಯಾಗಿಸುವಂತೆ ಮಾಡಿದೆ.

ರಾಕೇಶ್‌ ಹಾಗೂ ಅನುಪಮಾ ಹೇಳಿದ್ದೇನು?
ರಾಕೇಶ್‌ ಮಾತನಾಡಿ ʻʻಪ್ರಶಾಂತ್‌ ಸಂಬರಗಿ ಅವರ ಕುರಿತು ಕಾರಣ ಹೇಳಬೇಕೆಂದರೆ, ಎಲ್ಲೋ ಒಂದು ಕಡೆ ರೂಪೇಶ್‌ ಶೆಟ್ಟಿ ಅವರಿಗೆ ಹೊಡೆದು ಬಿಟ್ಟರೆ ಅವರು ಮನೆಯಿಂದ ಆಚೆ ಹೋಗುತ್ತಾರೆ. ಆ ಇಂಟೆನ್ಷನ್‌ ಪ್ರಶಾಂತ್‌ ಅವರಲ್ಲಿ ಇತ್ತು ಎನ್ನುವ ಮಾತು ನನ್ನ ಕಿವಿಗೆ ಬಿತ್ತು. ಆದರೆ ನೀವು ಹೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಆ ರೀತಿ ಹೇಳಿದ್ದೇ ಆದರೆ ಅದು ಸರಿ ಅಲ್ಲ. ಒಂದು ವೇಳೆ ರೂಪೇಶ್‌ ಶೆಟ್ಟಿ ಅವರು ಎಲ್ಲಾದರೂ ಕೋಪದಲ್ಲಿ ಕೈ ಎತ್ತಿದ್ದರೆ ಅವರ ಕೆರಿಯರ್‌ ಅಲ್ಲಿಗೇ ಮುಕ್ತಾಯವಾಗುತ್ತಿತ್ತು ಎನ್ನುವ ಕಾರಣಕ್ಕೆ ನೀವು ಹೀಗೆ ಮಾಡಿದ್ದೇ ಆದರೆ, ನಿಮಗೆ ಕಳಪೆ ಕೊಡುತ್ತೇನೆʼʼಎಂದರು. ಅನುಪಮಾ ಮಾತನಾಡಿ ʻʻರೂಪೇಶ್‌ ಶೆಟ್ಟಿ ಅವರ ಕತ್ತು ಹಿಡಿದ ವಿಚಾರಕ್ಕೆ ಮತ್ತು ಪ್ರತಿ ಬಾರಿ ಬೇರೆಯವರನ್ನು ಬ್ಲೇಮ್‌ ಮಾಡುತ್ತೇವೆ ಹೊರತು, ನಾವು ತಪ್ಪು ಮಾಡುತ್ತೇವೆ ಎನ್ನುವುದು ಅರ್ಥೈಸಿಕೊಳ್ಳಬೇಕು. ಅದರಲ್ಲಿ ನೀವು ಸೋತಿದ್ದೀರಿʼʼಎಂದು ಪ್ರಶಾಂತ್‌ ಸಂಬರಗಿ ಅವರ ಕುರಿತು ಅನುಪಮಾ ಹೇಳಿದರು.

ಇದನ್ನೂ ಓದಿ | Bigg Boss Kannada | ಗೊಂಬೆ ಆಟದಲ್ಲಿ ರಾಕೇಶ್‌-ದೀಪಿಕಾ ವಾದ, ಪ್ರತಿವಾದ: ಚಿಕನ್ ಕನವರಿಕೆಯಲ್ಲಿ ಕಾವ್ಯಶ್ರೀ!

ಮನೆಯವರೆಲ್ಲ ಪ್ರಶಾಂತ್‌ ಸಂಬರಗಿ ಅವರನ್ನು ಒಮ್ಮತದ ನಿರ್ಧಾರದಿಂದ ಜೈಲು ಸೇರಿಸಿದ್ದಾರೆ ಎಂಬ ಅರ್ಥದಲ್ಲಿ ಪ್ರಶಾಂತ್‌ ಸಂಬರಗಿ ಅವರು ಮನೆಮಂದಿ ಬಗ್ಗೆ ಕಿಡಿಕಾರಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ ʻʻಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಅಪಾದನೆ ಹೊರಿಸುತ್ತಾರೆ. ತಮ್ಮಲ್ಲಿಯೇ ರಾಜಿ ಮಾಡಿಕೊಂಡು ಅದನ್ನು ವಿಷಯ ಪ್ರಸ್ತಾಪಿಸದೆ ಬೇರೆಯವರ ಜತೆ ಫೈಟಿಂಗ್‌ ಮಾಡಿರುವ ವಿಚಾರ ಇಟ್ಟುಕೊಂಡು ಕಳಪೆ ನೀಡಿದ್ದು, ನಿಮ್ಮಲ್ಲಿರುವ ದೊಡ್ಡ ಕಳಪೆ. ಹೊಡೆದು ಬಿಟ್ರೇ ಆಚೆ ಹೋಗಿ ಬಿಡ್ತೇನಾ ಎಂದದ್ದು ರೂಪೇಶ್‌ ಶೆಟ್ಟಿ ಅವರು ಅದು ನನ್ನ ಮಾತುಗಳಲ್ಲʼʼಎಂದು ಸದಸ್ಯರ ಮುಂದೆ ಹೇಳಿದ್ದಾರೆ.

ಮೈಂಡ್‌ ಸೆಟ್‌ ಆಧಾರದ ಮೇಲೆ ಕಳಪೆ ನೀಡಿದ್ದೀರಾ!
ಜೈಲು ಸೇರಿದ ನಂತರ ಅನುಪಮಾ ಮತ್ತು ರಾಕೇಶ್‌ ಅಡಿಗ ಅವರು ಪ್ರಶಾಂತ್‌ ಜತೆ ಮಾತನಾಡಲು ಬಂದಾಗ ಪ್ರಶಾಂತ್‌ ಸಂಬರಗಿ ಅವರು ಕೂಗಾಡಿದ್ದಾರೆ. ಪ್ರಶಾಂತ್‌ ಸಂಬರಗಿ ಅವರು ಮಾತನಾಡಿ ʻʻಈ ಬಾರಿ ಕಳಪೆ ಮತ್ತು ಅತ್ಯುತ್ತಮ ನೀಡುವಾಗ ಮೈಂಡ್‌ ಸೆಟ್‌ ಪ್ರಕಾರ ವೋಟ್‌ ನೀಡಿದ್ದೀರಾ. ರಾಕೇಶ್‌ ನೀನು ವೋಟ್‌ ನೀಡಿದ ಆಧಾರದ ಮೇಲೆ ಕೆಲವು ಜನ ನನಗೆ ಕಳಪೆ ಕೊಟ್ಟಿದ್ದಾರೆʼʼಎಂದರು.

ಅನುಪಮಾ ಮಾತನಾಡಿ ʻʻಇಲ್ಲಿ ರಾಕೇಶ್‌ ಹಾಗೂ ಬೇರೆ ಯಾರನ್ನೋ ನಂಬಿಕೊಂಡು ಬಿಗ್‌ ಬಾಸ್‌ ಮನೆಗೆ ನಾನು ಬಂದಿಲ್ಲ. ನಿಮ್ಮ ಅಷ್ಟೂ ದಿನದ ವ್ಯಕ್ತಿತ್ವ ಹಾಗೂ ಅಭಿಪ್ರಾಯಗಳನ್ನೂ ಗೌರವಿಸಿದ್ದೇನೆ. ನನಗೆ ಅನ್ನಿಸಿದ್ದು ನಾನು ಹೇಳಿದೆʼʼಎಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ರಾಜಣ್ಣ ಉರುಳುಸೇವೆ: ಬಕ್ರಾ ಮಾಡಿದ್ದೇ ಗುರೂಜಿ, ರೂಪೇಶ್‌ ಶೆಟ್ಟಿ!

Exit mobile version