ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ (Bigg Boss Kannada) ಈಗಾಗಲೇ ಆರು ಸ್ಪರ್ಧಿಗಳು ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಹಳೆಯ ಸ್ಪರ್ಧಿಗಳಾದ ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿಗಳಾದ ನವಾಜ್, ನಟ ದರ್ಶ್ ಚಂದ್ರಪ್ಪ ಮತ್ತು ನಟಿ ಮಯೂರಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಏಳನೇ ಸ್ಪರ್ಧಿಯಾಗಿ ಹಳೆಯ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕೂಡ ವಿತರಕರಾಗಿ ಗುರುತಿಸಿಕೊಂಡವರು. ಡ್ರಗ್ಸ್ ವಿಚಾರದಲ್ಲಿ ಕೆಲವು ಕಲಾವಿದರ ವಿರುದ್ಧ ನೇರ ಆರೋಪ ಮಾಡಿ ಸುದ್ದಿಯಾದವರು. ಜಟ್ಕಾ ಕಟ್ ಅಭಿಯಾನದಂತೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ವಿರುದ್ಧವೂ ಅಭಿಯಾನ ಕುರಿತು ಪ್ರಶಾಂತ್ ಸಂಬರಗಿ ಧ್ವನಿ ಎತ್ತಿದ್ದರು .
ಇದನ್ನೂ ಓದಿ | Bigg Boss Kannada | ಮೂರನೇ ಸ್ಪರ್ಧಿಯಾಗಿ ದೀಪಿಕಾ ದಾಸ್ ಎಂಟ್ರಿ: ನಾಲ್ಕನೇ ಸ್ಪರ್ಧಿಯಾಗಿ ನವಾಜ್!
ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಓಂಕಾರ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಕಮಲಿ ಧಾರಾವಾಹಿ ಮುಕ್ತಾಯವಾಗುತ್ತಿದೆ, ಪರಭಾಷೆಯಲ್ಲಿಯೂ ಅಮೂಲ್ಯ ನಟಿಸುತ್ತಿದ್ದಾರೆ. ಈ ಹಿಂದೆ ಅವರು ‘ಅರಮನೆ’ ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ ‘ಕಮಲಿ’ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕರ್ನಾಟಕದ ಮನೆಮಾತಾಗಿದ್ದಾರೆ. ʻʻಸ್ವಾತಿ ಮುತ್ತುʼʼ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಪದಾರ್ಪಣೆ ಮಾಡಿದರು.
ಇದನ್ನೂ ಓದಿ | Bigg Boss Kannada | ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ, ಆರನೇ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ ಎಂಟ್ರಿ!