ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಗೋಲ್ಡ್ ಮೈನ್ ಬೆಟ್ಟಿಂಗ್ ಆಟ ಮುಗಿಯುವ ಹಂತಕ್ಕೆ ತಲುಪಿದೆ. ಆಟದ ಮಧ್ಯೆ ಮನಸ್ತಾಪಗಳು ಆಗಿವೆ. ಪ್ರಶಾಂತ್ ಸಂಬರಗಿ ಮಾತಿಗೆ ಅನುಪಮಾ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿನೋದ್ ಗೊಬ್ಬರಗಾಲ ʻಅಪ್ಪಾಜಿ ಚೆನ್ನಾಗಿ ಆಡಿದ್ದೀರಾʼ ಎಂದು ಹೊಗಳಿದ್ದಾರೆ.
ಅನುಪಮಾ ಮಾತನಾಡಿ ʻʻನಿಮ್ಮದು ಏನೇ ಉದ್ದೇಶ, ಸ್ಟ್ರ್ಯಾಟಜಿ ಇದ್ದರೂ ಬೇರೆಯವರಿಗೆ ಸ್ಟೇಟ್‌ಮೆಂಟ್ಸ್‌ಗಳನ್ನು ಪಾಸ್ ಮಾಡಬೇಡಿ. ಆ ರೀತಿ ಮಾಡಲೇಬೇಡಿ. ಗೇಮ್‌ನಲ್ಲಿ ನಿಮ್ಮ ಸ್ಟ್ರ್ಯಾಟಜಿಯನ್ನು ಬ್ಲೇಮ್ ಮಾಡಬೇಕೇ ಹೊರತು. ಸ್ಟೇಟ್‌ಮೆಂಟ್ಸ್‌ಗಳನ್ನು ಪಾಸ್ ಮಾಡಬೇಡಿ. ನೀವು ಯಾರು ಬ್ಯುಸಿನೆಸ್ ಮಾಡೇ ಇಲ್ವಾ, ನಿಮ್ಮ ಮುಖಗಳನ್ನು ನೋಡಿ ಎಂದಿದ್ದೀರಿʼʼ ಎಂದರು.
ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿʻʻ ನಾನು ಆ ತರ ಹೇಳಲೇ ಇಲ್ಲʼʼ ಎಂದರು. ಪ್ರತಿಕ್ರಿಯಿಸಿದ ಅನುಪಮಾ ʻʻನಾನು ಆಗ ನಿಮ್ಮದೇ ಬಿಡಿ ಸರ್ ಬ್ಯುಸಿನೆಸ್ ಅಂದೆ. ನನಗೆ ನೆನಪಿದೆ. ನಾವು ಗೇಮ್ ಆಡಿದೀವಿ. ನಾವು ನಿಮಗೆ ಹೊಡೆದಿದ್ವಿ, ನೀವು ನಮಗೆ ಹೊಡೆದಿದ್ದೀರಿ ಅಷ್ಟೇ, ಗೇಮ್ ಅದುʼʼ ಎಂದರು. ಅದಕ್ಕೆ ಪ್ರಶಾಂತ್ ಮಾತನಾಡಿ ʻʻಅಗ್ರೆಸಿವ್‌ನಲ್ಲಿ ಏನೋ ಹೇಳಿಬಿಟ್ಟೆʼʼ ಎಂದಿದ್ದಾರೆ. ಅದಕ್ಕೆ ನೇಹಾ ಗೌಡ ಮಾತನಾಡಿ ʻʻಅಗ್ರೆಸಿವ್ ಆಗಿ ಬೇರೆಯವರ ಭಾವನೆಗಳಿಗೆ ನೋವಾಗುವ ಹಾಗೆ ಮಾತನಾಡಬಾರದುʼʼ ಎಂದರು. ಇದಕ್ಕೆ ಪ್ರಶಾಂತ್ ʻʻಇದು ಜಸ್ಟ್ ಗೇಮ್ʼʼಎಂದು ಸುಮ್ಮನಾಗಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಟಾಸ್ಕ್ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್ ಗೇಮ್ ಅಂದ್ರು ಆರ್ಯವರ್ಧನ್!
ವಿನೋದ್ ಗೊಬ್ಬರಗಾಲ ಜತೆ ಪ್ರಶಾಂತ್ ಸಂಬರಗಿ ಮಾತನಾಡುವಾಗ ಮನೆಯ ಗ್ರೂಪಿಸಮ್ ಬಗ್ಗೆ ಚರ್ಚೆ ಮಾಡಿದ್ದಾರೆ. ವಿನೋದ್ ಗೊಬ್ಬರಗಾಲ ಪ್ರಶಾಂತ್ ಸಂಬರಗಿಗೆ ʻʻನಾವಿಬ್ಬರು ಜತೆಯಾಗಿರುತ್ತೇವೆ. ನಾನು ಸದಾ ನಿಮ್ಮ ಸಹಾಯಕ್ಕೆ ಇರುತ್ತೇನೆ ಎಂಬ ಮಾತುಗಳು ಕೇಳಿ ಬರುತ್ತಿದೆ ಮನೆಯಲ್ಲಿʼʼ ಎಂದರು. ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿ ʻʻನಾವಿಬ್ಬರೂ ಕಡಿಮೆ ಮಾತನಾಡೋಣ. ಸುಮ್ಮನೆ ಟಾರ್ಗೆಟ್ ಆಗಿಬಿಡುತ್ತೀಯಾ. ನನ್ನಿಂದ ನಿನಗೆ ತೊಂದರೆ ಬೇಡʼʼ ಎಂದಿದ್ದಾರೆ. ವಿನೋದ್ ಈ ಬಗ್ಗೆʻʻ ನನಗೂ ಈ ರೀತಿ ಇದ್ದು ಅಭ್ಯಾಸ ಇಲ್ಲ. ಸಾಕಾಗಿ ಬಿಟ್ಟಿದೆʼʼ ಎಂದರು. ಅದಕ್ಕೆ ಪ್ರಶಾಂತ್ ʻʻನೀನು ಅದೇನೋ ನನಗೆ ತುಂಬ ಇಷ್ಟವಾಗಿದ್ದೀಯಾ. ಬಂದಾಗಿನಿಂದಲೂ ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆʼʼ ಎಂದರು.
ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಟಾಸ್ಕ್ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್ ಗೇಮ್ ಅಂದ್ರು ಆರ್ಯವರ್ಧನ್!