ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ಈ ವಾರ ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ನಡೆದಿದ್ದಾರೆ. ಮನೆಯಲ್ಲಿ ಏನಾದರೂ ಒಂದು ವಿಚಾರಕ್ಕೆ ಧ್ವನಿ ಎತ್ತಿ, ಹೈಲೈಟ್ ಆಗಿರುತ್ತಿದ್ದ ಪ್ರಶಾಂತ್ ಸಂಬರಗಿ 12ನೇ ವಾರಕ್ಕೆ ಮನೆಯಿಂದ ಹೊರಗೆ ಹೋದಂತಾಗಿದೆ. ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾದ ಇವರು ʼಪ್ರವೀಣʼರಾಗಿ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಕಾವ್ಯಶ್ರೀ ಗೌಡ ನಂತರ ಪ್ರಶಾಂತ್ ಸಂಬರಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇವರು ಸಿನಿಮಾ ಕ್ಷೇತ್ರದಲ್ಲಿ ಕೂಡ ವಿತರಕರಾಗಿ ಗುರುತಿಸಿಕೊಂಡವರು. ಡ್ರಗ್ಸ್ ವಿಚಾರದಲ್ಲಿ ಕೆಲವು ಕಲಾವಿದರ ವಿರುದ್ಧ ನೇರ ಆರೋಪ ಮಾಡಿ ಸುದ್ದಿಯಾದವರು. ಜಟ್ಕಾ ಕಟ್ ಅಭಿಯಾನದಂತೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ವಿರುದ್ಧವೂ ಅಭಿಯಾನ ಕುರಿತು ಪ್ರಶಾಂತ್ ಸಂಬರಗಿ ಧ್ವನಿ ಎತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿಯೂ ನಿಭಾಯಿಸಿದ್ದಾರೆ ಪ್ರಶಾಂತ್ ಸಂಬರಗಿ.
ಇದನ್ನೂ ಓದಿ | Bigg Boss Kannada | ಈ ವಾರದ ಕಳಪೆ ಅಮೂಲ್ಯ ಗೌಡ: ರೂಪೇಶ್ ಶೆಟ್ಟಿ ಮನೆಯ ಕ್ಯಾಪ್ಟನ್!
ಕಿರಿಕ್ ಪ್ರಶಾಂತ್!
ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ನಡುವೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ವಾದಗಳು ನಡೆಯುತ್ತಲೇ ಇರುತ್ತವೆ. ʻʻನಾನು ಸಾಕಷ್ಟು ಕನ್ನಡ ಹೋರಾಟ ಮಾಡಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ, ಪತ್ರಗಳು ಇವೆʼʼ ಎಂದು ಆರ್ಯವರ್ಧನ್ ಜತೆ ಪ್ರಶಾಂತ್ ಸಂಬರಗಿ ಅವರು ರೂಪೇಶ್ ರಾಜಣ್ಣ ಕುರಿತು ಹೇಳಿಕೊಂಡಿದ್ದರು. ಈ ಹೇಳಿಕೆ ನಂತರ ಕನ್ನಡಪರ ಸಂಘಟನೆಗಳ ಸದಸ್ಯರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದರು. ಪ್ರಶಾಂತ್ ಸಂಬರಗಿ ಅವರು ಕನ್ನಡ ಜನತೆಯ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ | Bigg Boss Kannada | ಸಾನ್ಯ ಪೋಸ್ಟ್ಗೆ ಕಿಚ್ಚನ ಖಡಕ್ ರಿಯಾಕ್ಷನ್: ರೂಪೇಶ್ ಕ್ಷಮೆಯಾಚಿಸಿದ್ದೇಕೆ?