Site icon Vistara News

Bigg Boss Kannada | ಈ ವಾರ ಮನೆಯ ಕ್ಯಾಪ್ಟನ್‌ ರಾಕೇಶ್‌ ಅಡಿಗ: ತಂದೆ ಮಾತಿಗೆ ಮನೆಮಂದಿ ಫಿದಾ!

Bigg Boss Kannada (Rakesh adiga captain)

ಬೆಂಗಳೂರು: ಬಿಗ್‌ ಸೀಸನ್‌ 9ರಲ್ಲಿ (Bigg Boss Kannada ) ಈ ವಾರ ರಾಕೇಶ್‌ ಅಡಿಗ ಅವರು ಕ್ಯಾಪ್ಟನ್‌ ಆಗಿದ್ದಾರೆ. ಕಳೆದ ವಾರ ಕ್ಯಾಪ್ಟನ್‌ ಟಾಸ್ಕ್‌ನಲ್ಲಿ ಯಾರು ಭಾಗವಹಿಸಲು ಸಾಧ್ಯವಾಗದೇ ಇದ್ದ ಕಾರಣ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಮನೆಮಂದಿ ಹೊರ ಇದ್ದಿದ್ದರು. ಆದರೆ ಇದಲ್ಲವನ್ನು ಬದಿಗಿಟ್ಟು ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸಿಡಿಯನ್ನು ಲೋಟದಲ್ಲಿ ಕೂರಿಸುವ ಟಾಸ್ಕ್‌ ನೀಡಿದ್ದರು. ಈ ಟಾಸ್ಕ್‌ನಲ್ಲಿ ರಾಕೇಶ್‌ ಅಡಿಗ ಅವರು ಅತಿ ಹೆಚ್ಚು ಸಿಡಿಯನ್ನು ಇಟ್ಟು ಟಾಸ್ಕ್‌ನಲ್ಲಿ ವಿಜೇತರಾದರು. ಈ ವಾರ ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾದರು. ಮನೆಮಂದಿ ಕೂಡ ರಾಕೇಶ್‌ ಅಡಿಗ ಅವರು ಕ್ಯಾಪ್ಟನ್‌ ಆಗಿರುವ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಯಾರಾದರೂ ಕ್ಯಾಪ್ಟನ್‌ ಆದರೆ ಮನೆಯಿಂದ ಕರೆ ಬರುತ್ತದೆ. ಈ ಬಾರಿ ರಾಕೇಶ್‌ ಅವರು ಅವರ ಅಮ್ಮನ ಕರೆ ಬರುತ್ತದೆ ಎಂದು ಭಾವಿಸಿದ್ದರು. ಆದರೆ ರಾಕಿಗೆ ಅವರ ತಂದೆಯ ಕರೆ ಬಂದಿದೆ.

ಇದನ್ನೂ ಓದಿ | Bigg Boss Kannada | ಕಾಡಿನಲ್ಲಿ ಕಷ್ಟ-ಸುಖ ಮಾತನಾಡಿದ ಸ್ಪರ್ಧಿಗಳು!

ರಾಕೇಶ್‌ ಕ್ಯಾಪ್ಟನ್ ಆದ ಕಾರಣ ಅವರ ತಂದೆಯಿಂದ ವಾಯ್ಸ್ ನೋಟ್ ಬಂದಿತ್ತು, ʻʻಹಾಯ್ ರಾಕೇಶ್ ನೀನು ನಾಯಕನಾದ ಸುದ್ದಿ ಕೇಳಿ ತುಂಬ ಖುಷಿ ಆಯ್ತು. ನಾಯಕ ಅಂದರೆ ಮನೆಯಲ್ಲಿರುವ ಎಲ್ಲ ಸದಸ್ಯರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರ ತರುವ ಉದ್ದೇಶ ನಿನ್ನದಾಗಬೇಕು. ಇಡೀ ವಾರ ಎಲ್ಲರೂ ಲವಲವಿಕೆಯಿಂದ ಆಡುವಂತೆ ನೀನು ನೋಡಿಕೊಳ್ಳಬೇಕು. ಅದು ನಿನ್ನ ಮುಖ್ಯ ಉದ್ದೇಶ. ಚೆನ್ನಾಗಿ ಆಡು, ತಾಳ್ಮೆಯಿಂದ ಇರು, ಯಾರಿಗೂ ಬೇಸರ ಆಗದಂತೆ ನೋಡಿಕೊʼʼಎಂದಿದ್ದಾರೆ. ಮನೆಮಂದಿ ರಾಕಿ ತಂದೆಯ ಕನ್ನಡ ಪದಬಳಕೆಗೆ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ | Bigg Boss Kannada | ಆರ್ಯವರ್ಧನ್‌ ಗುರೂಜಿಯಿಂದಾಗಿ ಮನೆಮಂದಿಗೆ ಆಟವೂ ಇಲ್ಲ, ಸೌಕರ್ಯವು ಇಲ್ಲ!

Exit mobile version