Site icon Vistara News

Bigg Boss Kannada | ಬಾಲ್‌ ಟಾಸ್ಕ್‌ನಲ್ಲಿ ರಾಕೇಶ್‌ ಮಾಸ್ಟರ್‌ ಪ್ಲ್ಯಾನ್‌: ಗೆದ್ದಿದ್ಯಾರು?

Bigg Boss Kannada

ಬೆಂಗಳೂರು: ಬಿಗ್ ಬಾಸ್ ಸೀಸನ್‌ 9ರಲ್ಲಿ (Bigg Boss Kannada) 73ನೇ ದಿನ ಎರಡು ಟಾಸ್ಕ್‌ಗಳನ್ನು ನೀಡಿದ್ದಾರೆ. ಆ ಎರಡು ಟಾಸ್ಕ್‌ನಲ್ಲಿ ಅಮೂಲ್ಯ ಅವರ ತಂಡ ʻಮಿನುಗುತಾರೆʼ ಟೀಂ ಗೆದ್ದಿದೆ. ರಾಕೇಶ್ ಅಡಿಗ ಅವರ ತಂಡದಲ್ಲಿ ಇಬ್ಬರು ಏನೋ ಮಾಡಲು ಹೋಗಿ ಮಿನುಗು ತಾರೆ ಟೀಂನವರಿಗೆ ಅನುಕೂಲ ಮಾಡಿಕೊಟ್ಟಂತೆ ಆಗಿದೆ.

ಟಾಸ್ಕ್‌ಗಳನ್ನು ಕೊಡುವುದಕ್ಕೂ ಮುನ್ನ ಬಿಗ್ ಬಾಸ್ ಎರಡು ಟೀಂಗಳನ್ನಾಗಿ ಮಾಡಿತ್ತು. ಒಂದು ʻಮಿನುಗುತಾರೆʼ ತಂಡ. ಈ ತಂಡದಲ್ಲಿ ಅಮೂಲ್ಯ ಕ್ಯಾಪ್ಟನ್ ಆಗಿದ್ದರು. ಉಳಿದಂತೆ ಅನುಪಮಾ, ರಾಜಣ್ಣ, ಪ್ರಶಾಂತ್ ಸಂಬರಗಿ, ರೂಪೇಶ್ ಶೆಟ್ಟಿ ಟೀಂ ಸದಸ್ಯರಾಗಿದ್ದರು. ಮತ್ತೊಂದು ತಂಡ ʻಕೂಲ್ʼ ತಂಡ. ಇದರಲ್ಲಿ ರಾಕೇಶ್ ಅಡಿಗ ಕ್ಯಾಪ್ಟನ್ ಆಗಿದ್ದರೆ ದೀಪಿಕಾ ದಾಸ್, ಅರುಣ್ ಸಾಗರ್, ದಿವ್ಯಾ ಉರುಡುಗ, ಆರ್ಯವರ್ಧನ್ ಸದಸ್ಯರಾಗಿದ್ದರು. ಅದರಲ್ಲಿ ಒಂದು ಬಾಲ್ ಹಾಕುವ ಟಾಸ್ಕ್ ಇನ್ನೊಂದು ಲೈಟ್ಸ್ ಹಾಕುವ ಟಾಸ್ಕ್ ನೀಡಿತ್ತು.

ಏನಿದು ಬಾಲ್‌ ಟಾಸ್ಕ್‌?
ಈ ವಾರದ ಮೊದಲನೇ ಟಾಸ್ಕ್‌ ಬಿಗ್‌ ಬಾಸ್‌ ನೀಡಿತ್ತು ಅದುವೇ ʻಜಸ್ಟ್‌ ಪಾಸ್‌ʼ. ಸದಸ್ಯರು ತಮಗೆ ಮೀಸಲಿರುವ ಮೇಜಿನ ಮೇಲಿರುವ ಹಿಡಿಕೆಗಳ ಸಹಾಯದಿಂದ ಆರಂಭಿಕ ಸ್ಥಾನದಲ್ಲಿರುವ ಚೆಂಡನ್ನು ಅಡಚಣೆಯಲ್ಲಿರುವ ದಾರಿಯಲ್ಲಿ ಸಾಗಿಸಿ ಅಂತಿಮ ಸ್ಥಾನಕ್ಕೆ ತಲುಪಿಸಬೇಕು. 5 ಸುತ್ತುಗಳಲ್ಲಿ ಈ ಟಾಸ್ಕ್‌ ನಡೆಯಲಿದ್ದು,ಮೂರು ಅಂಕಗಳನ್ನು ಪಡೆದ ತಂಡ ಒಂದು ಸ್ಟಾರ್‌ ಪಡೆಯುತ್ತದೆ.

ಇದನ್ನೂ ಓದಿ | Bigg Boss Kannada | ದಿವ್ಯಾಗೆ ʻನೆವರ್‌ ಗಿವ್‌ ಅಪ್‌ʼಎಂದ ಅರವಿಂದ್‌: ಪ್ರೀತಿಯ ಸಂದೇಶ ಪೋಸ್ಟ್‌ ವೈರಲ್‌!

ಎರಡನೇ ಟಾಸ್ಕ್‌ ಆದ ʻದೀಪವೂ ನಿನ್ನದೇ ಸ್ಟಾರೂ ನಿನ್ನದೇʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಇದರ ಅನುಸಾರ ಅದೃಷ್ಟ, ನೆನಪಿನ ಶಕ್ತಿ ಹಾಗೂ ತಂತ್ರಗಾರಿಕೆ ಒಳಗೊಂಡ ಈ ಆಟದಲ್ಲಿ ಎರಡೂ ತಂಡದ ಸದಸ್ಯರು ಒಬ್ಬರಾದ ಮೇಲೆ ಒಬ್ಬರಂತೆ ಸ್ವಿಚ್ಚನ್ನು ಒತ್ತಿ, ಬೋರ್ಡ್‌ನಲ್ಲಿರುವ ನೀಲಿ ಹಾಗೂ ಕೇಸರಿ ಬಣ್ಣದ ಲೈಟ್‌ಗಳನ್ನು ಬೆಳಗಿಸಬೇಕು. ಪ್ರತಿಬಾರಿ ಸ್ವಿಚ್‌ ಒತ್ತಿ ಬೆಳಗಿಸಬಹುದಾದ ಲೈಟ್‌ ಬೆಳಗಬಹುದು ಅಥವಾ ಆರಿಸಬಹುದು. ಒಂದು ಬಣ್ಣದ ಲೈಟ್‌ ಎಲ್ಲವೂ ಬೆಳಗಿದಾಗ ಆ ತಂಡ ಗೆಲ್ಲುತ್ತದೆ.

ಬಾಲ್‌ ಟಾಸ್ಕ್‌ನಲ್ಲಿ ಮಿನುಗುತಾರೆ ತಂಡ ವಿನ್‌!
ಬಾಲಿನ ಟಾಸ್ಕ್‌ನಲ್ಲಿ ಮೊದಲಿಗೆ ಕೂಲ್ ತಂಡದಿಂದ ರಾಕೇಶ್ ಬಂದರೂ ಮಿನುಗುತಾರೆ ತಂಡದಿಂದ ಅಮೂಲ್ಯ ಬಂದರು. ಮೊದಲ ಆಟದಲ್ಲಿ ರಾಕೇಶ್ ಒಂದು ಬಾಲ್ ಹಾಕಿದರು. ಅಮೂಲ್ಯ ಸೋತರು. ಎರಡನೇ ಬಾರಿಗೆ ಕೂಲ್ ತಂಡದಿಂದ ದಿವ್ಯಾ ಬಂದರೆ, ಮಿನುಗು ತಾರೆ ತಂಡದಿಂದ ಅನುಪಮಾ ಬಂದರು. ಅನುಪಮಾ ಬಾಲ್ ಹಾಕುವಲ್ಲಿ ಸಕ್ಸೆಸ್‌ ಆದರು, ದಿವ್ಯಾ ಸೋತರು. ಮೂರನೇ ಬಾರಿಗೆ ಕೂಲ್ ತಂಡದಿಂದ ದೀಪಿಕಾ ದಾಸ್, ಮಿನುಗು ತಾರೆ ತಂಡದಿಂದ ರೂಪೇಶ್ ಶೆಟ್ಟಿ ಬಂದರು. ಅಂತಿಮವಾಗಿ ರೂಪೇಶ್ ಶೆಟ್ಟಿ ಬಾಲ್ ಹಾಕಿದರು, ದೀಪಿಕಾ ಔಟ್ ಆದರು.

ರಾಕೇಶ್‌ ಅಡಿಗ ಮಾಸ್ಟರ್‌ ಪ್ಲ್ಯಾನ್‌!
ಇನ್ನೇನು ಮಿನುಗು ತಾರೆ ತಂಡದವರು ಗೆದ್ದು ಬಿಡುತ್ತಿದ್ದ ಎನ್ನುವಷ್ಟರಲ್ಲಿ ರಾಕೇಶ್ ಪ್ಲ್ಯಾನ್ ಒಂದನ್ನು ಮಾಡುತ್ತಾರೆ. ರಾಜಣ್ಣ ಮತ್ತು ಆರ್ಯವರ್ಧನ್ ನಡುವೆ ಸ್ಪರ್ಧೆ ಆರಂಭವಾಗಿತ್ತು. ರಾಜಣ್ಣ ತುಂಬಾನೇ ಫಾಸ್ಟ್ ಆಗಿ ಆಡುವುದಕ್ಕೆ ಶುರು ಮಾಡಿದರು. ಇನ್ನೇನು ಬಾಲ್ ಬಾಕ್ಸ್ ಒಳಗೆ ಬೀಳಬೇಕು, ಅಷ್ಟರಲ್ಲಿ ರಾಕಿ, ರಾಜಣ್ಣ ಅವರ ಗಮನ ಸೆಳೆದು ಬಾಲ್ ಔಟ್ ಮಾಡುವುದಕ್ಕೆ ಯೋಚಿಸಿದಂತೆ ಇತ್ತು. ರಾಕೇಶ್ ಟೀಂ ಜೋರು ಧ್ವನಿಯಲ್ಲಿ ಕೂಗಲಾರಂಭಿಸಿದರು. ಗುರೂಜಿ ಗುರೂಜಿ ಎಂದು ಕೂಗುತ್ತಿದ್ದಂತೆ ಅಲ್ಲಿ ರಾಜಣ್ಣ ಡಿಸ್ಟರ್ಬ್ ಆದರು. ಗುರೂಜಿ ಹಾಕಿಯೇ ಬಿಟ್ಟರೇನೋ ಎಂದುಕೊಂಡು ಕೈ ನಡುಗಿಸಿ, ಬಾಲ್ ಕೆಳಗೆ ಬೀಳಿಸಿ ಬಿಟ್ಟರು. ಆದರೆ ಮತ್ತೆ ಪ್ರಯತ್ನ ಪಟ್ಟ ರಾಜಣ್ಣ ಅವರು ಯಾರ ಧ್ವನಿಗೂ ಗಮನಕೊಡದೇ ಅಂತಿಮವಾಗಿ ಬಾಲ್ ಹಾಕಿದರು. ಈ ಬಾಲ್‌ನಿಂದ ʻಮಿನುಗು ತಾರೆʼ ತಂಡ ಮೂರು ಬಾಲ್‌ಗಳನ್ನು ಹಾಕಿ ಆಟ ಗೆದ್ದಿದ್ದಾರೆ.

ಇದನ್ನೂ ಓದಿ | Bigg Boss Kannada | ಕೊನೆಗೂ ಮದುವೆ ಬಗ್ಗೆ ರಿವೀಲ್‌ ಮಾಡಿದ ಸಾನ್ಯ ಅಯ್ಯರ್‌: ʻರೂಪಿ ಫ್ರೆಂಡ್‌ಶಿಪ್‌ ಬಿಡಲ್ಲʼಎಂದ ನಟಿ!

Exit mobile version