Site icon Vistara News

Bigg Boss Kannada | ಒಂದ್‌ ಕಡೆ ರಾಕೇಶ್‌ ಲವ್‌ ಕಹಾನಿ ಆದ್ರೆ: ಇನ್ನೊಂದ್ ಕಡೆ ಆರ್ಯವರ್ಧನ್‌ ಟ್ಯೂಷನ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಮೂಲೆ ಮೂಲೆಗಳು ಗಾಸಿಪ್‌ ಕಹಾನಿಗಳನ್ನು ಬಿಚ್ಚಿಡುತ್ತಿವೆ. ಒಂದು ಕಡೆ ರಾಕೇಶ್‌ ಅಡಿಗ ಬ್ರೇಕ್‌ಅಪ್‌ ಲವ್‌ ಸ್ಟೋರಿ ಬಗ್ಗೆ ಮಾತಾಡಿದರೆ , ಇನ್ನೊಂದು ಕಡೆ ಆರ್ಯವರ್ಧನ್‌ ಗುರೂಜಿ ದರ್ಶ್‌ಗೆ ಟ್ಯೂಷನ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ರಾಕೇಶ್‌ ಗೌಡಗೆ ದೀಪಿಕಾ ದಾಸ್‌ ಲವ್‌ ಸ್ಟೋರಿ ಬಗ್ಗೆ ಕೆದಕಿದ್ದಾರೆ. ಹುಡುಗೀರ ವಿಚಾರವನ್ನು ಕೇಳಿದಕ್ಕೆ ಪ್ರತಿಕ್ರಿಯೆ ನೀಡಿದ ರಾಕೇಶ್‌ ʻನನಗೆ ಲವ್‌ ಫೇಲ್ಯೂರ್‌ ಆಗಿದೆ ನಿಜ. ಆದರೆ ಈಗಲೂ ಮನಸ್ಸಿನಲ್ಲಿ ಪ್ರೀತಿ ಇದೆ. ಆದರೆ ಆ ಮಟ್ಟದಲ್ಲಿ ಅಲ್ಲ. ಪ್ರೀತಿಸಿದವರು ಬೇರೆ ರಿಲೇಶನ್‌ಶಿಪ್‌ ಅಲ್ಲಿದ್ದಾರೆ. ಕೆಲವರಿಗೆ ಮದುವೆ ಆಗಿದೆ. ಪ್ರೀತಿಯ ವಾಕ್ಯ ಚೇಂಜ್‌ ಆಗಬಾರದುʼʼ ಎಂದಿದ್ದಾರೆ.

Bigg Boss Kannada

ಇದನ್ನೂ ಓದಿ | Bigg Boss Kannada | ಸ್ಪರ್ಧಿಗಳ ಜತೆ ರೂಪೇಶ್‌ ರಾಜಣ್ಣ ವಿನಾಕಾರಣ ಜಗಳ

ಇದಕ್ಕೆ ಅಮೂಲ್ಯ ಕೂಡ ಪ್ರತಿಕ್ರಿಯೆ ನೀಡಿ ʻʻನೀವು ತುಂಬ ಒಳ್ಳೆಯವರುʼʼ ಎಂದಿದ್ದಾರೆ ಅದಕ್ಕೆ ರಾಕೇಶ್‌ ʻʻ ನಾನು ಒಳ್ಳೆಯವನು ಅಂದಿಲ್ಲ. ನಾನು ಪ್ರ್ಯಾಕ್ಟಿಕಲ್‌ ಅಷ್ಟೆ ಅಂದಿದ್ದಾರೆʼʼ

ಇನ್ನೊಂದು ಕಡೆ ಆರ್ಯವರ್ಧನ್‌ ಗುರೂಜಿ ದರ್ಶ್‌ಗೆ ಬಿಗ್‌ ಬಾಸ್‌ ಮನೆಯಲ್ಲಿ ಹೇಗಿರಬೇಕು ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻಈ ಮನೆಯಲ್ಲಿ ತುಂಬಾ ಸಾಫ್ಟ್‌ ಇದ್ದರೆ ತುಳಿದು ಬಿಡುತ್ತಾರೆ. ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲು ಕಾಯುತ್ತಾ ಇರುತ್ತಾರೆ. ನಿಮ್ಮ ಜತೆ ಯಾರು ಇರುತ್ತಾರೆ. ಇಲ್ಲ ಎಂದು ಗೊತ್ತಿಲ್ಲ. ಹುಡುಗೀರ ವಿಷ್ಯಕ್ಕೆ ಮಾತ್ರ ಹೋಗಬೇಡ. ಬಿಗ್‌ ಬಾಸ್‌ನಲ್ಲಿ ಹುಡುಗಿಯರ ಜತೆ ವಾದ ಮಾಡಕ್ಕೆ ಹೋಗಬಾರದು. ಸಾರಿ ಅನ್ನೋದು ಕಲಿಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ರೂಪೇಶ್ ರಾಜಣ್ಣ ನೀರಿನ ಪಾಠಕ್ಕೆ ಪ್ರಶಾಂತ್‌ ಸಂಬರಗಿ ಗರಮ್‌!

Exit mobile version