ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada) ಏಳನೇ ಯಾರು ರಿಯಲ್, ಯಾರು ಫೇಕ್ ಎಂಬ ಟಾಸ್ಕ್ ಬಿಗ್ ಬಾಸ್ ನೀಡಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ರೂಪೇಶ್ ರಾಜಣ್ಣ ಫೇಕ್ ಎಂದು ಕೆಲವರು ಹೇಳಿದ್ದರು. ಅದಕ್ಕೆ ರಾಜಣ್ಣ ಸಿಟ್ಟಾಗಿದ್ದಾರೆ. ಫೇಕ್ ಎನ್ನುವ ಶಬ್ದವನ್ನು ಅರಗಿಸಿಕೊಳ್ಳಲಾಗದ ರೂಪೇಶ್ ರಾಜಣ್ಣ ಅವರು ನಟ ಅಂಬರೀಶ್ ಅವರ ಸ್ಟೈಲಿನಲ್ಲಿ ಡೈಲಾಗ್‌ಗಳನ್ನು ಹೇಳುವುದರ ಮೂಲಕ ಕೋಪವನ್ನು ತೋರಿಸಿಕೊಂಡಿದ್ದಾರೆ.
46ನೇ ದಿನವೂ ಆಟ ಮುಂದುವರಿದಿದ್ದು, ಒಬ್ಬರು ತೀರ್ಪುಗಾರರಾಗಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಅದುವೇ ʻಟವರ್ ಟಕ್ಕರ್. ಇದರ ಅನುಸಾರ ಗಾರ್ಡನ್ ಏರಿಯಾದಲ್ಲಿ ಮೂರು ಟವರ್‌ಗಳನ್ನು ಇರಿಸಲಾಗಿದೆ. ಪ್ರತಿ ಟವರ್‌ನಲ್ಲಿ ಇಬ್ಬರು ಸದಸ್ಯರು ಒಬ್ಬರದಾದ ಮೇಲೆ ಒಂದೊಂದು ಬ್ಲಾಕ್‌ಗಳನ್ನು ತೆಗೆಯಬೇಕು. ಹೀಗೆ ತೆಗೆಯುವ ಬ್ಲಾಕ್‌ಗಳಲ್ಲಿ ಕೆಂಪು ಗೆರೆಗಳಿದ್ದರೆ ಅವುಗಳನ್ನು ಸೇರಿಸಿ, ಎಕ್ಸ್ ಗುರುತು ರಚಿಸಬೇಕು. ಆಟದ ಮಧ್ಯೆ ಟವರ್ ಬಿದ್ದರೆ ಆಡುತ್ತಿರುವ ಸದಸ್ಯನ ಆಟ ಮುಗಿಯುತ್ತದೆ. ಈ ಟಾಸ್ಕ್‌ನಲ್ಲಿ ಅಮೂಲ್ಯ ಅವರು ವಿಜೇತರಾದರು.
ತೀರ್ಪುಗಾರರಾದ ಅಮೂಲ್ಯ ಅವರು, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ಅರುಣ್ ಸಾಗರ್, ಆರ್ಯವರ್ಧನ್ ಮತ್ತು ಪ್ರಶಾಂತ್ ಸಂಬರಗಿ ಅವರನ್ನು ಫೇಕ್ ಎಂದು ಘೋಷಿಸಿದರು. ದಿವ್ಯಾ ಉರುಡುಗ, ಅನುಪಮಾ, ರಾಕೇಶ್ ಅಡಿಗ, ಕಾವ್ಯ ಮತ್ತು ರೂಪೇಶ್ ಶೆಟ್ಟಿ ಅವರನ್ನು ರಿಯಲ್ ಆಗಿ ಆಯ್ಕೆ ಮಾಡಿದರು. ಎರಡೂ ಗುಂಪಿನ ಚರ್ಚೆಯ ಮೇರೆಗೆ ದೀಪಿಕಾ ಹೊರತುಪಡಿಸಿ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಫೇಕ್ ಎಂದು ಪರಿಗಣನೆ ಮಾಡಿದರು.
ಇದನ್ನೂ ಓದಿ | Bigg Boss Kannada | ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಜಾ: ನಾಮಿನೇಟ್ ಆದವರು ಯಾರು?
ಎರಡನೇ ಸುತ್ತಿನಲ್ಲಿ ʻʻಉರುಳಿಸಿ ನೋಡು ಬೀಳಿಸಿ ಆಡುʼʼ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದರು. ಇದರ ಅನುಸಾರ ಆಡುವ ಸದಸ್ಯರು ಹಲಗೆಯಿಂದ ನಿರ್ಮಿಸಲಾದ ಹಾದಿಯ ಆರಂಭಿಕ ಸ್ಥಾನದಲ್ಲಿ ನಿಂತು ಚೆಂಡನ್ನು ಉರುಳಿಸಿ ಹಾದಿಯ ಅಂತಿಮ ಸ್ಥಾನದಲ್ಲಿರುವ ಬಾಟಲಿಯ ಆಕಾರದ ಬೌಲಿಂಗ್ ಪಿನ್‌ಗಳನ್ನು ಬೀಳಿಸಬೇಕು. ಚೆಂಡು ಉರುಳಿಸಲು ಪ್ರತಿ ಸದಸ್ಯರಿಗೆ ಐದು ಅವಕಾಶ ನೀಡಲಾಗುತ್ತದೆ. ಅತಿ ಕಡಿಮೆ ಅವಧಿಯಲ್ಲಿ ಎಲ್ಲ ಬೌಲಿಂಗ್ ಪಿನ್ ಬೀಳಿಸುವ ಸದಸ್ಯ ವಿಜೇತರಾಗುತ್ತಾರೆ. ಈ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ ವಿನ್ ಆದರು.
ತೀರ್ಪುಗಾರರಾದ ವಿನೋದ್ ಗೊಬ್ಬರಗಾಲ ಅವರು ಕಾವ್ಯಶ್ರೀ, ಅರುಣ್ ಸಾಗರ್, ಅನುಪಮಾ, ರಾಕೇಶ್ ಅಡಿಗ, ದಿವ್ಯಾ ಅವರನ್ನು ರಿಯಲ್ ಆಗಿ ಆಯ್ಕೆ ಮಾಡಿದರು. ಅಮೂಲ್ಯ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ, ಆರ್ಯವರ್ಧನ್ ಮತ್ತು ರೂಪೇಶ ರಾಜಣ್ಣ ಅವರನ್ನು ಫೇಕ್ ಎಂದು ಆಯ್ಕೆ ಮಾಡಿದರು. ಎರಡೂ ತಂಡದ ತೀರ್ಮಾನದ ಮೇರೆಗೆ ದೀಪಿಕಾ ದಾಸ್ ಹೊರತುಪಡಿಸಿ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಅವರು ಫೇಕ್ ಎಂದು ಪರಿಗಣನೆ ಮಾಡಿದರು. ಎರಡೂ ಸುತ್ತಿನಲ್ಲಿ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಫೇಕ್ ಎಂಬ ಕಾರಣಕ್ಕಾಗಿ ನೇರವಾಗಿ ನಾಮಿನೇಟ್ ಆದರು.
ಮೂರನೇ ಸುತ್ತಿನಲ್ಲಿ ʻವಿಜಯಪತಾಕೆʼ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದು, ಆಡುವ ಸದಸ್ಯರು ತಮಗೆ ಮೀಸಲಿರುವ ಬಣ್ಣದ ಬಾವುಟಗಳನ್ನು ಕೊಳವೆಯಲ್ಲಿ ಸಿಕ್ಕಿಸಬೇಕು. ಕೊಳವೆಯಲ್ಲಿ ಸಿಕ್ಕಿಸಿ ಎದುರಾಳಿಯಿಂದ ಕಾಪಾಡಿಕೊಳ್ಳಲು 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಅನುಪಮಾ ವಿಜೇತರಾಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಅನುಪಮಾ ಅವರ ನಿರ್ಧಾರದ ಮೇರೆಗೆ ಯಾರು ಫೇಕ್ ಹಾಗೂ ರಿಯಲ್ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Bigg Boss Kannada | ʼಬದಲಾಗಲು ಸಾಧ್ಯವೇ ಇಲ್ಲ ರೂಪಿ’: ಸಾನ್ಯ ಅಯ್ಯರ್ ಭಾವುಕ ಪೋಸ್ಟ್ ವೈರಲ್!