Site icon Vistara News

Bigg Boss Kannada | ಅಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬಾರದು ಎಂದ ರಾಕಿ: ಏನಿದು ಕೋಲ್ಡ್‌-ಹಾಟ್‌ ವೈಬ್ಸ್‌?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 ನಾಲ್ಕನೇ (Bigg Boss Kannada) ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಅಟ್ಯಾಚ್‌ಮೆಂಟ್‌ ಬೆಳೆಯುತ್ತಿದೆ. ರಾಕೇಶ್‌ ಅಡಿಗ ಅವರು ಅಮೂಲ್ಯ ಗೌಡ ಜತೆ ಕ್ಲೋಸ್ ಆಗುತ್ತಿದ್ದಾರೆ. ಒಟಿಟಿ ಸೀಸನ್​ನಲ್ಲಿ ಸೋನು ಶ್ರೀನಿವಾಸ್ ಗೌಡ ಜತೆ ರಾಕೇಶ್ ಕ್ಲೋಸ್ ಆಗಿದ್ದರು. ಈ ಬಾರಿ ಅಮೂಲ್ಯ ಜತೆ ಅವರು ಅಟ್ಯಾಚ್​​ಮೆಂಟ್ ಬೆಳೆಸಿಕೊಳ್ಳುತ್ತಿದ್ದಾರೆ.

ರಾಕೇಶ್‌ ಮನೆ ಕ್ಲೀನ್‌ ಮಾಡುವಾಗ ಅಮೂಲ್ಯ ಅವರಿಗೆ ಸಹಾಯ ಮಾಡಿದ್ದಾರೆ. ಮಾತನಾಡಿ ʻʻಬರ್ತಾನೆ ಡಿಸೈಡ್‌ ಆದೆ. ಯಾರ ಜತೆನೂ ಅಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬಾರದು ಎಂದು. ಆದರೆ ಹೇಳಿಕೊಳ್ಳೋದೆ ಬೇರೆ, ಆಗೋದೇ ಬೇರೆ,ʼʼ ಎಂದಿದ್ದಾರೆ. ಅಮೂಲ್ಯ ಮಾತನಾಡಿ ʻʻಅಲ್ಲಿಂದಾನೇ ರಾಕಿ ಎಲ್ಲವೂ ಶುರುವಾಗೋದು. ಫ್ರೆಂಡ್‌ ಎಂದು ಟ್ರೀಟ್‌ ಮಾಡುತ್ತೇವೆ. ನಂತರ ಹರ್ಟ್‌ ಆಯ್ತು ಎಂದು ಯೋಚನೆ ಮಾಡುತ್ತೇವೆʼʼ ಎಂದಿದ್ದಾರೆ.

ಅದಕ್ಕೆ ರಾಕೇಶ್‌ ʻʻಹೌದುʼʼ ಎಂದಿದ್ದಾರೆ. ಬಳಿಕ ʻʻಮಾರಲ್‌ ಆಫ್‌ ದ ಸ್ಟೋರಿ ಏನು? ʼʼಎಂದು ಕೇಳಿದ್ದಾರೆ. ಉತ್ತರ ನೀಡಿದ ಅಮೂಲ್ಯ, ʻʻನಾನು ಕೋಲ್ಡ್‌ ವೈಬ್‌ ಕೊಡಲ್ಲ. ನೀನು ಹಾಟ್‌ ವೈಬ್‌ ಕೊಡಬೇಡʼʼ ಎಂದು ನಕ್ಕಿದ್ದಾರೆ.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌-ಸಾನ್ಯ ತರ್ಲೆ: ರೂಪೇಶ್ ರಾಜಣ್ಣ ಗಿರಿಗಿಟ್ಲೆ!

ಕಾವ್ಯಗೆ ಮಾತ್ರ ಕಾಫಿ ಕೊಟ್ಟ ಕಾರಣಕ್ಕೆ ರಾಕೇಶ್‌ ಅಮೂಲ್ಯಗೆ ಸಾರಿ ಕೇಳಲು ಹೇಳಿದ್ದಾರೆ. ʻʻನಾನು ಪಕ್ಕದಲ್ಲೇ ಇದ್ದೆ. ನನಗೂ ತಂದು ಕೊಡಬಹುದಿತ್ತು. ಸಾರಿ ಕೇಳುʼʼ ಎಂದಿದ್ದಾರೆ. ಅದಕ್ಕೆ ಅಮೂಲ್ಯ, ʻʻನನಗೆ ಲೈಫ್‌ ಅಲ್ಲಿ ಆಗದೇ ಇರೋದು ಅಂದ್ರೆ ಅದು ಸಾರಿ ಪದ ಒಂದೇʼʼ ಎಂದಿದ್ದಾರೆ. ಆಗ ರಾಕೇಶ್‌, ʻʻಸುಮ್ಮನೆ ಮಾತನಾಡುವುದು, ಬಿಟ್ಟು ಬಿಡೋದು ಮೋಸʼʼ ಎಂದಿದ್ದಾರೆ.

ಹಾಗೇ ಒಟಿಟಿಯಲ್ಲಿ ಕೂಡ ನನಗೆ ಕೋಲ್ಡ್‌ ವೈಬ್ಸ್‌ ಆಗಿರಲಿಲ್ಲ ಎಂದು ಹೇಳಿಕೊಂಡರು ರಾಕೇಶ್‌. ಆಗ ಅಮೂಲ್ಯ ʻʻನಿಮಗೆ ಯಾರೂ ಕೋಲ್ಡ್‌ ವೈಬ್ಸ್‌ ಕೊಟ್ಟಿಲ್ವಾ?ʼʼ ಎಂದು ಕೇಳಿದ್ದಾರೆ. ಅದಕ್ಕೆ ರಾಕೇಶ್‌, ʻʻಸೋನು ಕೊಡೋಳು ಆದರೆ ಎರಡು ನಿಮಿಷಕ್ಕೆ ನಕ್ಕು ಬಿಡೋಳುʼʼಎಂದರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ಫೇವರಿಸಮ್‌ ಆಟ ಆಡ್ತಿದ್ದಾರೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ!

Exit mobile version