ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ಇನ್ನು 30 ದಿನಗಳು ಕಳೆದರೆ ಫೈನಲ್ ವೇದಿಕೆಯಲ್ಲಿ ಸ್ಪರ್ಧಿಗಳು ಬಂದು ನಿಲ್ಲುತ್ತಾರೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಶನ್ ಈಗಾಗಲೇ ಶುರುವಾಗಿದೆ. ಶುಕ್ರವಾರ ಮನೆಯ ಕ್ಯಾಪ್ಟನ್ ಆಗುವ ಸಮಯ. ಬಿಗ್ ಬಾಸ್ ಪ್ರತಿ ವಾರ ವಿಭಿನ್ನ ಕ್ಯಾಪ್ಟನ್ಸಿ ಟಾಸ್ಕ್‌ಗಳನ್ನು ನೀಡುತ್ತಲೇ ಇರುತ್ತಾರೆ. ಈ ಬಾರಿ ಮನೆಯ ಸದಸ್ಯರ ಕುಟುಂಬಕ್ಕೆ ಹಾಗೂ ಬಿಗ್ ಬಾಸ್ ಮನೆ ಮಂದಿಗೆ ಸಾಮ್ಯತೆ ಬಗ್ಗೆ ಟಾಸ್ಕ್ ನೀಡಿದ್ದಾರೆ. ಈ ವಾರ ರೂಪೇಶ್ ರಾಜಣ್ಣ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಮನೆಯವರು ಈಗಾಗಲೇ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಿ ಆಗಿದೆ. ಮನೆ ಮಂದಿ ಆಯ್ಕೆ ಮಾಡುವವರು ಹಾಗೂ ಮನೆಯ ಕುಟುಂಬದವರು ಮಾಡುವ ಆಯ್ಕೆ ಒಂದೇ ಆಗಿರುತ್ತದೆಯಾ ಎಂದು ನೋಡೋಣ ಎಂಬ ಟಾಸ್ಕ್ ನೀಡಿದ್ದರು ಬಿಗ್ ಬಾಸ್. ರಾಕೇಶ್ ಅಡಿಗ ನಮ್ಮ ಅಮ್ಮ ಅಮೂಲ್ಯ ಮತ್ತು ರೂಪೇಶ್ ಶೆಟ್ಟಿ ಹೆಸರು ಸೂಚಿಸಿರಬಹುದು ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರಗಿ ನಮ್ಮ ಅಮ್ಮ ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ಅವರನ್ನು ಆಯ್ಕೆ ಮಾಡಿದ್ದರು. ಆರ್ಯವರ್ಧನ್ ಅವರು ರೂಪೇಶ್ ಶೆಟ್ಟಿ ಮತ್ತು ರಾಜಣ್ಣ ಅವರನ್ನು ಆಯ್ಕೆ ಮಾಡಿರಬಹುದು ಎಂದರು. ಇನ್ನು ಅನುಪಮಾ ಅವರ ತಾಯಿ ಅರುಣ್ ಸಾಗರ್ ಹಾಗೂ ಅಮೂಲ್ಯ ಅವರನ್ನು ಆಯ್ಕೆ ಮಾಡಿರಬಹುದು, ರಾಜಣ್ಣ ಅವರು ದಿವ್ಯಾ ಮತ್ತು ರೂಪೇಶ್ ಶೆಟ್ಟಿ ಆಯ್ಕೆ ಇರಬಹುದು ಎಂದರು.
ಇದನ್ನೂ ಓದಿ | Bigg Boss Kannada | ತಂದೆಯನ್ನು ಅಪ್ಪಿಕೊಂಡು ಭಾವುಕರಾದ ರೂಪೇಶ್ ಶೆಟ್ಟಿ
ಅಮೂಲ್ಯ ಅವರು ರಾಜಣ್ಣ ಮತ್ತು ರಾಕೇಶ್ ಇರಬಹುದು ಎಂದು ಹೇಳಿದರೆ, ರೂಪೇಶ್ ಶೆಟ್ಟಿ ಅವರು, ರಾಜಣ್ಣ ಮತ್ತು ಆರ್ಯವರ್ಧನ್ ಇರಬಹುದು. ದೀಪಿಕಾ ಅವರು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಇರಬಹುದು. ಕಾವ್ಯಾ ಅವರು ಅನುಪಮಾ ಮತ್ತು ಅರುಣ್ ಆಯ್ಕೆ ಮಾಡಿರಬಹುದು ಎಂದರು.
ಆದರೆ, ಆರ್ಯವರ್ಧನ್ ಅವರ ಊಹೆ ಹೊರತುಪಡಿಸಿ ಉಳಿದ ಯಾರ ಊಹೆಯೂ ಸರಿ ಇರಲಿಲ್ಲ. ಆದರೆ, ಬಿಗ್ ಬಾಸ್ ಕುಟುಂಬದವರ ಪೈಕಿ ಹೆಚ್ಚಿನವರ ಆಯ್ಕೆಯಾದ ರೂಪೇಶ್ ರಾಜಣ್ಣ ಅವರ ಆಯ್ಕೆಯನ್ನೇ ಪರಿಗಣಿಸಿ ಅವರಿಗೆ ಕ್ಯಾಪ್ಟನ್ಸಿ ನೀಡಿದರು. ಈ ವಾರದ ಉತ್ತಮ ಪ್ರದರ್ಶನಕಾರರಾಗಿ ಅರುಣ್ ಸಾಗರ್ ಗುರುತಿಸಿಕೊಂಡರೆ ಕಳಪೆ ಮತ ಪಡೆದ ಪ್ರಶಾಂತ್ ಸಂಬರಗಿ ಜೈಲು ಸೇರಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್‌ನಲ್ಲೊಂದು ಟ್ವಿಸ್ಟ್!