Site icon Vistara News

Bigg Boss Kannada | ಮನೆಯಿಂದ ಹೊರನಡೆದ ರೂಪೇಶ್‌ ರಾಜಣ್ಣ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ದಿವ್ಯಾ ಉರುಡುಗ ಹೊರ ಬರುತ್ತಿದ್ದಂತೆ ಇದೀಗ ರೂಪೇಶ್ ರಾಜಣ್ಣ ಮನೆಯಿಂದ ಹೊರ ನಡೆದಿದ್ದಾರೆ. ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ಆಟ ಅಂತ್ಯವಾಗಿದೆ.

ಕನ್ನಡ ಪರ ಹೋರಾಟಗಾರ ಗಮನ ಸೆಳೆದಿದ್ದ ರೂಪೇಶ್ ರಾಜಣ್ಣ, ನವೀನರ ಪೈಕಿ ಒಬ್ಬರಾಗಿ ಮನೆಗೆ ಕಾಲಿಟ್ಟಿದ್ದರು. ಇತರೆ ಸ್ಪರ್ಧಿಗಳಿಗೂ ಪೈಪೋಟಿ ಕೊಟ್ಟು ಟಾಪ್ 5 ಫೈನಲಿಸ್ಟ್‌ಗಳ ಪೈಕಿ ಇವರು ಒಬ್ಬರಾಗಿದ್ದರು. ಈಗ ರೂಪೇಶ್ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ ಬಾಸ್‌ನಿಂದ ಹೊರಬಂದಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ದೀಪಿಕಾ ದಾಸ್‌ಗೆ ಪೈಪೋಟಿ ಕೊಟ್ಟಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ದಿವ್ಯಾ ಉರುಡುಗ ಔಟ್‌

ಕನ್ನಡ ನಾಡು, ನುಡಿ ಪರವಾಗಿ ಸಾಕಷ್ಟು ಹೋರಾಟ ಮಾಡಿರುವ ರೂಪೇಶ್, ಸೋಷಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ಸಕ್ರಿಯರಾದವರು. ಅಲ್ಲದೇ, ಕನ್ನಡ ನಟರಿಗೆ ತೊಂದರೆ ಆದಾಗಲೂ ಅವರ ಪರವಾಗಿ ನಿಂತು, ಹೋರಾಟ ಮಾಡಿದವರು.

ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ರಾಕೇಶ್ ಅಡಿಗ ನಡುವೆ ಪೈಪೋಟಿ ಮುಂದುವರಿದಿದೆ. ಯಾರಾಗಲಿದ್ದಾರೆ ಬಿಗ್ ಬಾಸ್ ಸೀಸನ್ 9ರ ವಿಜೇತರು ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಗೆಲ್ತಾರಾ ರೂಪೇಶ್‌ ಶೆಟ್ಟಿ? ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌!

Exit mobile version