ಬೆಂಗಳೂರು : ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada ) ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಪ್ರೇಮ ಪಕ್ಷಿಗಳು ಎಂದೇ ಹೈಲೈಟ್ ಆಗಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್‌ನಿಂದಲೂ ಇಬ್ಬರೂ ಒಬ್ಬರಿಗೊಬ್ಬರೂ ಬೆಂಬಲ ನೀಡುತ್ತ ಬಂದಿದ್ದಾರೆ. ಸಾನ್ಯ ಅಯ್ಯರ್ ಮನೆಯಿಂದ ಹೊರ ನಡೆದ ನಂತರ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹಾಗೇ ಸಾನ್ಯ ಕೂಡ ಮನೆಯಿಂದ ಹೋದ ಮೇಲೆ ಕೆಲವು ವಸ್ತುಗಳನ್ನು ಕಳುಹಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಇದೀಗ ನಾನು ಕಳುಹಿಸುತ್ತಿರುವ ವಸ್ತುಗಳು ರೂಪೇಶ್ ಅವರಿಗೆ ರೀಚ್ ಆಗುತ್ತಿಲ್ಲ ಎಂದು ಬಿಗ್ ಬಾಸ್ ಮೇಲೆ ಸಾನ್ಯ ಬೇಸರ ಹೊರ ಹಾಕಿದ್ದಾರೆ.
ರೂಪೇಶ್ ಶೆಟ್ಟಿ ಒಟಿಟಿಯಿಂದ ಟಿವಿ ಸೀಸನ್‌ವರೆಗೂ ತಾವಿಬ್ಬರೂ ಬೆಸ್ಟ್ ಫ್ರೆಂಡ್ ಎಂತಲೇ ಹೇಳಿಕೊಂಡು ಬಂದಿದ್ದಾರೆ. ರೂಪೇಶ್ ಶೆಟ್ಟಿ ಅವರು ಸಾನ್ಯರಿಂದ ಪ್ರಾಮೀಸ್ ಮಾಡಿಕೊಂಡಿದ್ದರು. ʻʻಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು. ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕುʼʼ ಎಂದಿದ್ದರು. ಅದರಂತೆ ಸಾನ್ಯ ಒಂದು ವಾರ ಬಟ್ಟೆ ಕಳುಹಿಸಿದ್ದಾರೆ. ಎರಡನೇ ವಾರದಿಂದ ಯಾವ ಡ್ರೆಸ್ ಕೂಡ ಬರುವುದಿಲ್ಲ. ಇದನ್ನು ರೂಪೇಶ್ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ. ಇದೀಗ ಸಾನ್ಯ ಈ ಕುರಿತು ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ಈ ವಾರದ ಮನೆಯ ಕ್ಯಾಪ್ಟನ್ ರೂಪೇಶ್ ರಾಜಣ್ಣ: ಹೇಗಿತ್ತು ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ?
ʻʻರೂಪಿ ನೀನು ಸ್ಟ್ರಾಂಗ್ ಆಗಿರು. ನಾನು ಕಳುಹಿಸುತ್ತಿರುವ ಶರ್ಟ್ ನಿನಗೆ ತಲುಪುತ್ತಿಲ್ಲ. ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್ ನಿನಗೆ ಇರುತ್ತದೆ. ಇದನ್ನು ಯಾರಿಂದಲ್ಲೂ ನಿಲ್ಲಿಸಲು ಆಗುವುದಿಲ್ಲ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕುʼʼ ಎಂದು ಸಾನ್ಯ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ತಂದೆಯನ್ನು ಅಪ್ಪಿಕೊಂಡು ಭಾವುಕರಾದ ರೂಪೇಶ್ ಶೆಟ್ಟಿ