Site icon Vistara News

Bigg Boss Kannada | ಬರ್ತ್‌ಡೇ ಬಾಯ್‌ ರೂಪೇಶ್‌ಗೆ ಸಾನ್ಯ ಕೊಟ್ರು ಭರ್ಜರಿ ಗಿಫ್ಟ್‌!

Bigg Boss Kannada

ಬೆಂಗಳೂರು : ಕನ್ನಡ ಬಿಗ್‌ ಬಾಸ್‌ ಒಟಿಟಿಯಲ್ಲಿ (Bigg Boss Kannada) ಎರಡನೇ ಹುಟ್ಟಿದ ಹಬ್ಬವನ್ನು ರೂಪೇಶ್‌ ಶೆಟ್ಟಿ ಆಚರಿಸಿಕೊಂಡಿದ್ದಾರೆ. ಸಾನ್ಯ ಅವರು ರೂಪೇಶ್‌ ಶೆಟ್ಟಿ ಅವರ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್‌ ನೀಡಿದ್ದಾರೆ. ರೂಪೇಶ್‌ ಶೆಟ್ಟಿ ಅವರು ಸಾನ್ಯ ಜತೆ ಒಳ್ಳೆಯ ಫ್ರೆಂಡ್‌ಷಿಪ್‌ ಹೊಂದಿರುವುದು ಗಮನಾರ್ಹ.

ಸುದೀಪ್‌ ಅವರು “ವಾರದ ಕಥೆ ಕಿಚ್ಚನ ಜತೆʼ ಕಾರ್ಯಕ್ರಮದಲ್ಲಿಯೇ ರೂಪೇಶ್‌ ಅವರಿಗೆ ಶುಭಾಶಯ ತಿಳಿಸಿದರು. ರಾತ್ರಿ 12 ಗಂಟೆಗೆ ಬಿಗ್‌ ಬಾಸ್‌ ಕೇಕ್‌ ಕೊಟ್ಟು ಸಪ್ರೈಸ್‌ ನೀಡಿತ್ತು. ಸಾನ್ಯ ಅವರು ವಿಭಿನ್ನವಾಗಿ ಶುಭಾಶಯ ಹೇಳಿ, ಕೆಲವೇ ನಿಮಿಷಗಳಲ್ಲಿ ಹಾಡನ್ನು ಬರೆದು ಕೊಟ್ಟಿದ್ದು ಗಮನ ಸೆಳೆಯಿತು.

ʻʻದರ್ಬಾರಲ್ಲಿ ದಿಲ್ದಾರ್ ಇವನು. ಒಂಚೂರ್ ಕೊಟ್ರೆ ಡಬಲ್ ಕೊಡುವನು. ಬಿಗ್ ಬಾಸ್ ಮನೆಯಲ್ಲಿ ನಗು ಮೊಗದವನು. ಸ್ಮೈಲ್ ಅಲ್ಲೇ ಎಲ್ಲರನ್ನು ಸೋಲಿಸುವವನು. ನಿಜವಾಗಿ ಬದುಕಿದವನಿವನು. ಮುಖವಾಡ ಕಳಚಿದವನಿವನು. ಮಜಾ ಮಾಡಿ ಹೇಳಿದನು. ಮೂರ್ ದಿನದ ಬಾಳು ಗುರು ಕೇಳು ನನ್ನ ಮಾತು ಚೂರು…ಹೀಗೆ ರ‍್ಯಾಪ್‌ನಲ್ಲಿ ರೂಪೇಶ್‌ ಅವರ ಬಗ್ಗೆ ಸಾನ್ಯ ಬರೆದಿದ್ದಾರೆ.

ಇದನ್ನೂ ಓದಿ | Bigg Boss Kannada | ವೈದ್ಯ ಲೋಕವೇ ವಿಸ್ಮಯ ಪಡುವ ಔಷಧ ಹೇಳಿದ್ದಾರೆ ಸೋನು: ನೆಗಡಿ ಬಂದ್ರೆ ಏನು?

ರೂಪೇಶ್‌ ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಈ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿ ಸಾನ್ಯ ಹಾಗೂ ರೂಪೇಶ್‌ ಗುಸುಗುಸು ಮಾತನಾಡಿಕೊಂಡಿದ್ದರು. ಈ ಹುಟ್ಟಿದ ಹಬ್ಬ ಬಿಗ್‌ ಬಾಸ್‌ ಮನೆಯಲ್ಲಿ ಎರಡನೇಯದಾಗಿದ್ದು, ಮೊದಲು ಜಸ್ವಂತ್‌ ಆಚರಿಸಿಕೊಂಡಿದ್ದರು. ಜಸ್ವಂತ್‌ಗೂ ಕೂಡ ಸಾನ್ಯ ಕಲ್ಲಂಗಡಿ ಹಣ್ಣಿನಿಂದ ಕೇಕ್‌ ಮಾಡಿಕೊಟ್ಟಿದ್ದರು.

‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಕೂಡ ಮುಕ್ತಾಯವಾಗಿದ್ದು, ಮೊದಲ ಎಲಿಮಿನೇಷನ್ ಸಹ ಮುಗಿದಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೆಯಲ್ಲಿ ನಡೆದ ಅದ್ಧೂರಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

Exit mobile version