ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada ) 76ನೇ ದಿನ ರೂಪೇಶ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಅಮೂಲ್ಯ ಅವರು ಕಳಪೆ ಪ್ರದರ್ಶನ ತೋರಿದ್ದಕ್ಕೆ ಜೈಲು ಸೇರಿದ್ದಾರೆ! ಬಣ್ಣ ಎರಚುವ ಆಟದಲ್ಲಿ ಅಮೂಲ್ಯ ಅವರು ಅಗ್ರೆಸಿವ್ ಆಗಿ ಆಡಿದ್ದಕ್ಕಾಗಿಯೇ ಅವರನ್ನು ಸ್ಪರ್ಧಿಗಳು ಕಳಪೆ ಎಂದು ಘೋಷಿಸಿದ್ದಾರೆ.
ಪ್ರತಿ ಶುಕ್ರವಾರ ಮನೆಯ ಕ್ಯಾಪ್ಟನ್ ಆಯ್ಕೆ ಇದ್ದೇ ಇರುತ್ತದೆ. ಈ ವಾರ ಬಿಗ್ ಬಾಸ್ ಒಂದು ಟಾಸ್ಕ್ ಒಂದನ್ನು ನೀಡಿತ್ತು. ಕ್ಯಾಪ್ಟನ್ ಟಾಸ್ಕ್ಗೆ ಆಯ್ಕೆಯಾದ ನಾಲ್ವರು ತೆಂಗಿನ ಕಾಯಿಗಳು ಇರುವ ಬಲೆಯ ಚೀಲವನ್ನು ಹಗ್ಗದ ಮೂಲಕ ಎಳೆದಿಟ್ಟುಕೊಳ್ಳಬೇಕು. ಮನೆಯ ಉಳಿದ ಸದಸ್ಯರು ಬಲೆಯ ಒಳಗಡೆ ತೆಂಗಿನ ಕಾಯಿಗಳನ್ನು ಹಾಕುತ್ತಲೇ ಇರಬೇಕು. ಆ ಭಾರಕ್ಕೆ ಬಲೆ ನೆಲಕ್ಕೆ ತಾಗಿದರೆ ಆ ಸದಸ್ಯ ಔಟ್ ಆಗುತ್ತಾರೆ. ಈ ಟಾಸ್ಕ್ನಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದರು.
ಇದನ್ನೂ ಓದಿ | Bigg Boss Kannada | ದಿವ್ಯಾಗೆ ʻನೆವರ್ ಗಿವ್ ಅಪ್ʼಎಂದ ಅರವಿಂದ್: ಪ್ರೀತಿಯ ಸಂದೇಶ ಪೋಸ್ಟ್ ವೈರಲ್!
ಕಳಪೆ ಕೊಟ್ಟಾಗ ಪ್ರತಿ ವಾರ ಒಂದು ಬೇಸರ ಕಾಣುತ್ತಾ ಇತ್ತು. ಕಳಪೆ ಕೊಟ್ಟವರ ಮೇಲೆ ಮುನಿಸು ಕೋಪ ವ್ಯಕ್ತವಾಗುತ್ತಾ ಇತ್ತು. ಆದರೆ ಈ ಬಾರಿ ಅದು ಕಾಣಲಿಲ್ಲ. ಅಮೂಲ್ಯ ತನ್ನ ತಪ್ಪಿಗೆ ತಕ್ಕ ಶಿಕ್ಷೆಯನ್ನು ಬಹಳ ಖುಷಿಯಿಂದ ಸ್ವೀಕರಿಸಿದ್ದಾರೆ. ನಗುತ್ತಲೇ ಕಳಪೆ ಬಟ್ಟೆಯನ್ನು ತೆಗೆದುಕೊಂಡಿದ್ದಾರೆ. ಜೈಲಿಗೆ ಹೋಗುವಾಗಲೂ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದಾರೆ. ಎಲ್ಲರೂ ಡೈಲಾಗ್ಗಳನ್ನು ಕೂಗಿದ್ದಾರೆ.
ಇದನ್ನೂ ಓದಿ | Bigg Boss Kannada | ಬಾಲ್ ಟಾಸ್ಕ್ನಲ್ಲಿ ರಾಕೇಶ್ ಮಾಸ್ಟರ್ ಪ್ಲ್ಯಾನ್: ಗೆದ್ದಿದ್ಯಾರು?