ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಮನೆಯ ಸದಸ್ಯರು ತಮ್ಮ ಕುಟುಂಬದವರನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದು, ಬ್ಯಾಟರಿ ರಿಚಾರ್ಜ್ ಮಾಡುತ್ತ ಮನೆಯವರ ಎಷ್ಟು ಸಮಯ ಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ರೂಪೇಶ್ ಶೆಟ್ಟಿ ಅವರ ತಂದೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ʻಮರೆಯಲಾರದ ದಿನʼ ಎಂದು ರೂಪೇಶ್ ಶೆಟ್ಟಿ ಕ್ಯಾಮೆರಾ ಮುಂದೆ ಹೇಳಿಕೊಂಡು ಭಾವುಕರಾಗಿದ್ದಾರೆ.
ರೂಪೇಶ್ ಶೆಟ್ಟಿ ಮಾತನಾಡಿ ʻʻಯಾರಿದು ಪಂಚೆ ಹಾಕಿಕೊಂಡು ಬಂದಿದ್ದು ಎಂದು ನೋಡಿದಾಗ ಅಪ್ಪ ಎಂದು ಖುಷಿ ಆಯ್ತು. ನಾನು ಯೋಚನೆ ಮಾಡಿರಲಿಲ್ಲ. 31 ವರ್ಷದಲ್ಲಿ ಇಷ್ಟು ಚೆನ್ನಾಗಿ ಈ ರೀತಿ ಮಾತನಾಡಿಸಿದ್ದು ನನ್ನ ತಂದೆ ಇದೇ ಮೊದಲ ಬಾರಿಗೆ. ನಾನು ಕ್ಯಾಮೆರಾ ಮುಂದೆ ಹೇಳಿದ್ದೆ. ಅಪ್ಪ ಬರಲಿಲ್ಲ ಎಂದರೆ ಬಲವಂತ ಮಾಡಬೇಡಿ. ಅಕ್ಕ ಅಥವಾ ದೊಡ್ಡಮ್ಮನನ್ನು ಕರೆಸಿ ಎಂದು. ಇದೀಗ ಅಪ್ಪ ಚೆನ್ನಾಗಿ ಮಾತನಾಡಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾರದ ಘಟನೆʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ರಾಕೇಶ್ ಅಡಿಗ-ಅಮೂಲ್ಯ ನಡುವೆ ಮನಸ್ತಾಪ: ಕಣ್ಣಿಂದಾಚೆ, ಗಮನದಿಂದಲೂ ಆಚೆ ಆದ್ರಾ ಅಮ್ಮು!
ರೂಪೇಶ್ ಶೆಟ್ಟಿ ಅವರ ತಂದೆ ಬಿಗ್ ಬಾಸ್ ಸದಸ್ಯರ ಜತೆ ಚೆನ್ನಾಗಿ ಮಾತನಾಡಿದ್ದಾರೆ. ʻʻರೂಪೇಶ್ ಏನಾದರೂ ತಪ್ಪು ಮಾತನಾಡಿದರೆ ಹೊಟ್ಟೆಗೆ ಹಾಕಿಕೊಳ್ಳಿ. ನಿಮ್ಮೆಲ್ಲರನ್ನು ಟಿವಿಯಲ್ಲಿ ನೋಡಿದ್ದೆ. ಆಟವನ್ನು ಚೆನ್ನಾಗಿ ಆಡುತ್ತಿದ್ದೀರಿ. ಮಗ ಎರಡು ವಾರದಿಂದ ಚೆನ್ನಾಗಿ ಆಡುತ್ತಿದ್ದಾನೆ. ನೀವೆಲ್ಲ ದೊಡ್ಡ ಕಲಾವಿದರು. ಅವನನ್ನು ನಿಮ್ಮ ಜತೆ ಸಾಧನೆಯತ್ತ ಕರೆದುಕೊಂಡು ಹೋಗಿ. ನನಗೆ ಮೂರು ಮಕ್ಕಳು. ಅವರೇ ನನಗೆ ಮುತ್ತುಗಳುʼʼ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ಆರ್ಯವರ್ಧನ್ ಗುರೂಜಿ ಅವರನ್ನು ರೂಪೇಶ್ ಶೆಟ್ಟಿ ತಂದೆಯ ಸ್ಥಾನದಲ್ಲಿ ಗೌರವಿಸುತ್ತಿದ್ದಾರೆ. ಒಟಿಟಿ ಸೀಸನ್‌ನಿಂದ ಟಿವಿ ಸೀಸನ್‌ವರೆಗೂ ಇವರಿಬ್ಬರ ಬಾಂಧವ್ಯ ಮುಂದುವರಿದಿತ್ತು. ರೂಪೇಶ್ ಶೆಟ್ಟಿ ಅವರ ತಂದೆ ಆರ್ಯವರ್ಧನ್ ಗುರೂಜಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಮನೆಯ ಕ್ಯಾಪ್ಟನ್ ಯಾರಗಬೇಕು ಎಂದು ಕೇಳಿದಾಗ ಆರ್ಯವರ್ಧನ್ ಗುರೂಜಿ ಆಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್‌ನಲ್ಲೊಂದು ಟ್ವಿಸ್ಟ್!