Site icon Vistara News

Bigg Boss Kannada | ಬಿಗ್‌ ಬಾಸ್‌ ಗೆಲ್ತಾರಾ ರೂಪೇಶ್‌ ಶೆಟ್ಟಿ? ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌!

Bigg Boss Kannada

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada ) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಯಾರು ಈ ಬಾರಿಯ ಟ್ರೋಫಿ ಎತ್ತಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಇದೀಗ ರೂಪೇಶ್‌ ಶೆಟ್ಟಿ ಈ ಸೀಸನ್‌ ವಿನ್ನರ್‌ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಅವರು ಫಿನಾಲೆ ತಲುಪಿದ್ದರು. ಅವರಲ್ಲಿ ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ರೂಪೇಶ್‌ ಶೆಟ್ಟಿ ಹೆಸರು ಟ್ರೆಂಡ್‌ ಆಗಿದ್ದು, ಸೀಸನ್‌ 9ರ ವಿಜೇತರಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಕೇಶ್‌ ಅಡಿಗ ರನ್ನರ್‌ ಅಪ್‌ ಆಗಿದ್ದಾರೆ ಎಂತಲೂ ಹೇಳಲಾಗುತ್ತಿದೆ. ರೂಪೇಶ್‌ ಶೆಟ್ಟಿ ಅವರು ಒಟಿಟಿ ಸೀಸನ್‌ನಲ್ಲಿಯೂ ವಿಜೇತರಾಗಿದ್ದರು, ಇದೀಗ ಈ ಸೀಸನ್‌ ವಿನ್ನರ್‌ ಆಗುತ್ತಾರಾ ಎಂಬ ಕುತೂಹಲ ವೀಕ್ಷಕರಿಗೆ ಶುರುವಾಗಿದೆ.

ಇದನ್ನೂ ಓದಿ | Bigg Boss Kannada | ಇಂದು ಬಿಗ್‌ ಬಾಸ್‌ ಗ್ರ್ಯಾಂಡ್ ಫಿನಾಲೆ: ಯಾರಾಗ್ತಾರೆ ಸೀಸನ್ 9 ವಿನ್ನರ್‌?

ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯಾ ಅವರು ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಈಗ ದೊಡ್ಮನೆಯ ಹೊರಗೆ ಸಾನ್ಯಾರನ್ನು ಭೇಟಿ ಮಾಡುವ ಸಮಯ ಹತ್ತಿರ ಆಗಿದೆ. ಭೇಟಿ ಆದಾಗ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ಅವರು ದೊಡ್ಮನೆ ಒಳಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ದಿವ್ಯಾ ಮತ್ತು ರಾಜಣ್ಣ, ರೂಪೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಸಾನ್ಯಾ ಅಯ್ಯರ್ ಹತ್ತಿರ ರೂಪೇಶ್ ಶೆಟ್ಟಿ ಅವರು, ಹೇಗಿದ್ದೀಯಾ? ಎಂದು ಹೇಳಿ ಹಗ್ ಮಾಡಿಕೊಳ್ಳುತ್ತೇನೆ ಎಂತಲೂ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ, ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ ನಡುವೆ ಪೈಪೋಟಿ ಮುಂದುವರೆದಿದೆ. ಯಾರಾಗಲಿದ್ದಾರೆ ಬಿಗ್ ಬಾಸ್ ಸೀಸನ್ 9ರ ವಿಜೇತರು ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ದಿವ್ಯಾ ಉರುಡುಗ ಔಟ್‌

Exit mobile version