Site icon Vistara News

Bigg Boss Kannada | ರೋಲ್‌ಕಾಲ್‌ ವಿಚಾರಕ್ಕೆ ರೂಪೇಶ್‌ ರಾಜಣ್ಣ-ಪ್ರಶಾಂತ್‌ ಕಿರಿಕ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೂರನೇ ವಾರ ಪ್ರಶಾಂತ್‌ ಸಂಬರಗಿ ಹಾಗೂ ರೂಪೇಶ್‌ ರಾಜಣ್ಣ ಮಧ್ಯೆ ಒಂದಲ್ಲ ಒಂದು ಕಿರಿಕ್‌ ಆಗುತ್ತಲೇ ಇದೆ. ರೂಪೇಶ್‌ ರಾಜಣ್ಣ ʻʻರೋಲ್‌ಕಾಲ್‌ ಮಾಡಿ ದುಡ್ಡು ಮಾಡಿದ್ದಾರೆʼʼ ಎಂಬ ಆರೋಪವನ್ನು ಪ್ರಶಾಂತ್‌ ಮಾಡಿದರು. ಈ ಕುರಿತು ರೂಪೇಶ್‌ ಸಿಟ್ಟಾಗಿದ್ದು ತಿರುಗೇಟು ನೀಡಿದರು.

ಸಾನ್ಯ ಅಯ್ಯರ್‌ ಈ ಹಿಂದೆ ಪ್ರಶಾಂತ್‌ ಸಂಬರಗಿಗೆ ಕುತಂತ್ರಿ ಎಂಬ ಪಟ್ಟವನ್ನು ನೀಡಿದ್ದರು.ಅದು ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚನ ಮುಂದೆ ಹೋಗಿ, ಸಾನ್ಯಗೆ ಕಿಚ್ಚ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಇದೀಗ ರೂಪೇಶ್‌ ರಾಜಣ್ಣ ಕುತಂತ್ರಿ ಎಂದು ಪ್ರಶಾಂತ್‌ ಸಂಬರಗಿಗೆ ಹೇಳಿದ್ದಾರೆ. ಮಾತು ಮುಂದುವರಿಸಿ ʻʻನೀವು ಸರಿಯಾಗಿ ಆಟ ಆಡುವುದಿಲ್ಲ. ನಿಮಗೆ ಕುತಂತ್ರಿ ಪಟ್ಟ ಸರಿ ಇದೆʼʼ ಎಂಬ ಮಾತನ್ನು ರೂಪೇಶ್‌ ರಾಜಣ್ಣ ಹೇಳಿದ್ದಾರೆ. ಇದಕ್ಕೆ ಪ್ರಶಾಂತ್‌ ಸಂಬರಗಿ ಗರಂ ಆಗಿದ್ದು ಪ್ರತಿಕ್ರಿಯೆ ನೀಡಿ ʻʻರೋಲ್‌ ಕಾಲ್‌ ಮಾಡಿದ್ದು ಯಾರು ಎಂದು ನನಗೆ ಗೊತ್ತು. ಯಾರ್ಯಾರು ರೋಲ್‌ಕಾಲ್‌ ಮಾಡಿ ಎಲ್ಲೆಲ್ಲಿ ಜೀವನ ಮಾಡಿದ್ದಾರೆ ಎಂದು ತಿಳಿದಿದೆ. ಹೆಸರಿಗೆ ಕನ್ನಡದ ಕಂದ.ʼʼ ಎಂದು ಪ್ರಶಾಂತ್‌ ಹೇಳಿದರು.

ಇದನ್ನೂ ಓದಿ | Bigg Boss Kannada | ಸನ್ನೆ ಭಾಷೆ ಮಾತಾಡ್ತಾರೆ ರೂಪೇಶ್‌-ಸಾನ್ಯ; ದರ್ಶ್‌ಗೆ ಆರ್ಯವರ್ಧನ್‌ ಫುಲ್ ಟ್ಯೂಷನ್!

ಇದಕ್ಕೆ ರೂಪೇಶ್‌ ರಾಜಣ್ಣ ಮಾತನಾಡಿ ʻʻಕೋಟಿ ಕೋಟಿ ವ್ಯವಹಾರ ಮಾಡುವ ಕುತಂತ್ರಿಗಳು ಅಲ್ಲ ನಾವು. ಹೆದರಿಕೊಂಡು ಓಡಿ ಹೋಗುವ ಜಾಯಮಾನ ನಮ್ಮದಾಗಲಿ, ಕನ್ನಡಿಗರ ಜಾಯಮಾನದಲ್ಲಾಗಲಿ ಇಲ್ಲ. ನಾನು ರೋಲ್‌ ಕಾಲ್‌ ಮಾಡಿದ್ದು ಪ್ರೂವ್‌ ಮಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆʼʼ ಎಂದು ಪ್ರಶಾಂತ್‌ಗೆ ಸವಾಲ್‌ ಹಾಕಿದರು. ಈ ಕುರಿತು ಮನೆಯ ಸದಸ್ಯರು ರೂಪೇಶ್‌ ರಾಜಣ್ಣಗೆ ಸಮಾಧಾನ ಮಾಡಲು ಪ್ರಯತ್ನಿಸಿದರು. ನಂತರ ರೂಪೇಶ್‌ ರಾಜಣ್ಣ ಸುಮ್ಮನಾದರು

ಇದನ್ನೂ ಓದಿ | Bigg Boss Kannada | ಈ ಮೂರು ಸ್ಪರ್ಧಿಗಳು ಸೇಫ್‌ : ನಾಯಕ ಜೋಕರ್‌ ಆಗಬಾರದು ಎಂದು ಕಿಚ್ಚ ಹೇಳಿದ್ದು ಯಾರಿಗೆ?

Exit mobile version