Site icon Vistara News

Bigg Boss Kannada | ಬೈಕ್‌ ಗಿಫ್ಟ್‌ ಕೊಡ್ತಾರಂತೆ ರೂಪೇಶ್‌ ಶೆಟ್ಟಿ: ವಿರಹ ವೇದನೆಯಲ್ಲಿ ಇದ್ದಾರಂತೆ ದಿವ್ಯಾ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಐದನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ ಅವರಿಗೆ ವಿರಹ ವೇದನೆ ಆಗಿದೆ ಎಂದು ಚರ್ಚೆ ಆಗಿದೆ. ಕಿಚ್ಚ ಸುದೀಪ್‌ ದೀಪಾವಳಿ ಪ್ರಯುಕ್ತ ಸದಸ್ಯರಿಗೆ ಲೆಟರ್‌ ಕಳುಹಿಸಿದ್ದರು. ದಿವ್ಯಾ ಉರುಡುಗ ಅವರಿಗೆ ʻʻವಿರಹ ವೇದನೆ ಮುಂದುವರಿಯಲಿʼʼಎಂದು ಬರೆದು ಕಳುಹಿಸಿದ್ದರು. ಪಂಚಾಯಿತಿಯಲ್ಲಿ ಗಿಫ್ಟ್‌ ಕೊಡುವುದಾದರೆ ಯಾರಿಗೆ ಯಾವ ಗಿಫ್ಟ್‌ ಕೊಡುತ್ತೀರಾ ಎಂಬ ಪ್ರಶ್ನೆಗೆ ರೂಪೇಶ್‌ ಶೆಟ್ಟಿ ಅವರು ದಿವ್ಯಾ ಉರುಡುಗ ಅವರಿಗೆ ಬೈಕ್‌ ಗಿಫ್ಟ್‌ ಮಾಡುತ್ತೇನೆ ಎಂದರು.

ಈ ಬಗ್ಗೆ ಕಾರಣ ನೀಡಿದ ರೂಪೇಶ್‌ ಶೆಟ್ಟಿ ʻದಿವ್ಯಾ ಅವರು ನಮ್ಮ ಜತೆ ಊಟ ಮಾಡಬೇಕಿದ್ದರೂ ಒಂದು ಸೀಟ್ ಬಿಟ್ಟುಕೊಟ್ಟು ಅವರು (ಅರವಿಂದ್‌) ಇಲ್ಲಿ ಕೂರುತ್ತಿದ್ದರು ಎಂದು ಹೇಳುತ್ತಾರೆ. ಅವರ ಬಗ್ಗೆ ತುಂಬ ಮಾತನಾಡುತ್ತಿರುತ್ತಾರೆ. ನನಗೆ ಬೈಕರ್ ಕರೆದುಕೊಂಡು ಬರುವ ಶಕ್ತಿ ಇಲ್ಲ. ಹೀಗಾಗಿ ಬೈಕ್ ಆದರೂ ಗಿಫ್ಟ್ ಕೊಡೋಣʼʼಎಂದು ಹೇಳಿದರು. ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿ ʻʻನನ್ನ ಲೈನ್‌ ಏನು ಅಂದರೆ ವಿರಹ ಮುಂದುವರಿಯಬೇಕು ಅಲ್ವಾ ಅಂತ ನಾನು ಪ್ರಶ್ನೆ ಮಾಡಿದ್ದೀನಿ. ನನ್ನ ಲೈನ್‌ಅನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಬೇಡ ಅಂದ್ರೆ ಹೊರಡಬಹುದುʼʼಎಂದರು . ರೂಪೇಶ್‌ ಪ್ರತಿಕ್ರಿಯಿಸಿ ʻಅರವಿಂದ್‌ ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದರೆ ಬರಲಿʼʼ ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಮನೆಮಂದಿಗೆ ಚರ್ಚಿಸಿ ಎನ್ನಲು ಬಿಗ್ ಬಾಸ್‍ಗೆ ಭಯವಾಗಿದೆಯಂತೆ!

ಬಿಗ್‌ ಬಾಸ್‌ ಸೀಸನ್‌ 8ರಲ್ಲಿ ಅರವಿಂದ್‌ ಮತ್ತು ದಿವ್ಯಾ ಉರುಡುಗ ಭಾಗವಹಿಸಿದ್ದರು. ಜೋಡಿ ಟಾಸ್ಕ್ ನಂತರದಲ್ಲಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಯಾರಿಗೆ ಯಾವ ಸ್ಟಾರ್ ಪಟ್ಟ: ಪಿನ್‌ ಸ್ಟಾರ್‌ ಇವರೇ ನೋಡಿ!

Exit mobile version