Site icon Vistara News

Bigg Boss Kannada | ರೂಪೇಶ್ ಕ್ಯಾಪ್ಟನ್ಸಿ ಪರೀಕ್ಷೆ ಮುಗೀತು: ಮನೆಯವರು ಕೊಟ್ಟ ರೇಟಿಂಗ್ಸ್, ರಿವ್ಯೂ ಏನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಇದೀಗ ಐದನೇ ವಾರಕ್ಕೆ ಬಂದು ನಿಂತಿದೆ. ಈ ವಾರ ಡೇಂಜರ್ ಝೋನ್‌ನಲ್ಲಿ ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಮಾಚಿಮಾಡ, ಆರ್ಯವರ್ಧನ್ ಗುರೂಜಿ, ನಂದಿನಿ, ಜಶ್ವಂತ್ ಬೋಪಣ್ಣ, ಜಯಶ್ರೀ ಆರಾಧ್ಯ ಇದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಕ್ಯಾಪ್ಟನ್ಸಿ ಮುಕ್ತಾಯಗೊಂಡಿದ್ದು, ಸ್ಪರ್ಧಿಗಳು 2 ಲಕ್ಷದ 86 ಸಾವಿರ ರೂ. ಗೆದ್ದಿದ್ದಾರೆ.

ರೂಪೇಶ್ ಕ್ಯಾಪ್ಟನ್ಸಿ ಪರೀಕ್ಷೆ ಮುಗೀತು!
ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಕ್ಯಾಪ್ಟನ್‌ಶಿಪ್‌ ಅಂತ್ಯಗೊಂಡಿದೆ. ಮೂರನೇ ವಾರ ಹಾಗೂ ನಾಲ್ಕನೇ ವಾರ ‘ಬಿಗ್ ಬಾಸ್’ ಮನೆಯ ‘ಬಾಸ್’ ಆಗಿ ಹೊರಹೊಮ್ಮಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿ ಸತತ ಎರಡು ಬಾರಿ ಬಾಸ್‌ ಪಟ್ಟವನ್ನು ಅಲಂಕರಿಸಿದ್ದರು. ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರೂಪೇಶ್ ಶೆಟ್ಟಿ ಸೇಫ್ ಆಗಿದ್ದರು. ಹೀಗಾಗಿ, ನೇರವಾಗಿ ರೂಪೇಶ್ ಶೆಟ್ಟಿ ಆರನೇ ವಾರ ಅಂದರೆ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದರು. ಹಣ ಗಳಿಕೆಯನ್ನೂ ಈ ವಾರ ಮಾಡಬೇಕಿತ್ತು. ರೂಪೇಶ್‌ ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ಕ್ಕೆ ದಿನಗಣನೆ ಶುರು!

ಕ್ಯಾಪ್ಟನ್ಸಿ ರೇಟಿಂಗ್ ಟಾಸ್ಕ್‌ !
ಬಿಗ್‌ ಬಾಸ್‌ ಕ್ಯಾಪ್ಟನ್ಸಿ ರೇಟಿಂಗ್ ಟಾಸ್ಕ್‌ ಒಂದನ್ನು ನೀಡಿತ್ತು. ಬಿಗ್‌ ಬಾಸ್‌ ಸ್ಪರ್ಧಿಗಳು ರೂಪೇಶ್‌ ಕ್ಯಾಪ್ಟನ್ಸಿ ಬಗ್ಗೆ ಅಂಕವನ್ನು ನೀಡಿ ಕಾರಣವನ್ನು ಹೇಳಬೇಕಿತ್ತು. ಈ ಮೊದಲು ರೂಪೇಶ್‌ಗೆ ಆರ್ಯವರ್ಧನ್‌ ಗುರೂಜಿ 10 ಅಂಕವನ್ನು ನೀಡಿದ್ದಾರೆ. ಕಾರಣವನ್ನು ನೀಡಿ ʻʻರೂಪೇಶ್ ಕ್ಯಾಪ್ಟನ್ಸಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗೆ ನಾನು ಹತ್ತು ಅಂಕವನ್ನು ನೀಡಿದ್ದೇನೆ. ಇದು ತುಂಬಾ ಅದೃಷ್ಟದ ಸಂಖ್ಯೆ. ಈ 1 ರ ಮುಂದೆ ಎಷ್ಟು ಬೇಕಾದರೂ ಸೊನ್ನೆ ಹಾಕಬಹುದು” ಎಂದು ಕಾರಣ ನೀಡಿದರು.

ಜಯಶ್ರೀ 9.5 ಅಂಕ ನೀಡಿದರೆ, ಸಾನ್ಯ 9 ಅಂಕ ಕೊಟ್ಟರು. ಸೋಮಣ್ಣ ಕೂಡ ರೂಪೇಶ್‌ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿ, ʻʻಈ ವಾರ ಅಷ್ಟು ದಿನಗಳಿಗಿಂತ ತುಂಬಾ ಚಾಲೆಂಜಿಂಗ್‌ ಆಗಿತ್ತು. ರೂಪೇಶ್ ಕ್ಯಾಪ್ಟನ್ಸಿಯಲ್ಲಿ ಒತ್ತಡ ತೆಗೆದುಕೊಂಡರು. ಈ ವಾರ ರೂಪೇಶ್‌ ಅವರ ಗೌರವ ಹೆಚ್ಚಿದೆʼʼ ಎಂದರು.

ಸೋನು ಗೌಡ 9 ಅಂಕ ನೀಡಿ, ʻʻರೂಪೇಶ್‌ ಅವರು ಸ್ನೇಹಿತರಿಗೆ ಸ್ವಲ್ಪ ಸಾಪ್ಟ್‌ ಕಾರ್ನರ್‌ ತೋರಿಸಿದ್ದರು. ಹಾಗೇ ತುಂಬಾ ಸ್ಟ್ರಿಕ್ಟ್ ಆಗಿದ್ದರುʼʼ ಎಂದರು. ರಾಕೇಶ್‌ ಅಡಿಗ 8 ಅಂಕವನ್ನು ನೀಡಿದರೆ, ನಂದಿನಿ 9.5 ಅಂಕ ಕೊಟ್ಟರು. ನಂದಿನಿ ಕ್ಯಾಪ್ಟನ್‌ಶಿಪ್‌ ಬಗ್ಗೆ ಮಾತನಾಡಿ, ʻʻಎಲ್ಲ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ. ರೂಪೇಶ್‌ ಫನ್‌ ಎಲಿಮೆಂಟ್‌ ಇಷ್ಟವಾಯಿತು. ಚಿಕ್ಕ ಟಾಸ್ಕ್‌ನಲ್ಲಿಯೂ ಟಾಸ್ಕ್‌ನ ರೂಲ್ಸ್‌ ಮರೆಯುತ್ತಿರಲಿಲ್ಲʼʼ ಎಂದರು. ಜಶ್ವಂತ್‌ ಕೂಡ 9.5 ಅಂಕ ನೀಡಿದರು.

ರೂಪೇಶ್‌ ತನ್ನ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿ ʻʻಎಲ್ಲರ ಸಹಕಾರದಿಂದ ನಾನು ಕ್ಯಾಪ್ಟನ್‌ಶಿಪ್‌ ಯಶಸ್ವಿಯಾಗಿ ಮುಗಿಸಿದ್ದೇನೆ. ಬಿಗ್‌ ಬಾಸ್‌ಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಮನೆಯಲ್ಲಿ ಟಾಸ್ಕ್‌ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರೂ ಚೆನ್ನಾಗಿ ನಿಭಾಯಿಸಿದ್ದೀರಿ. ಈ ಬಿಗ್‌ ಬಾಸ್‌ ಪಯಣ ಎಂದಿಗೂ ಮರೆಯಲು ಸಾಧ್ಯವಿಲ್ಲʼʼ ಎಂದು ಖುಷಿ ಹಂಚಿಕೊಂಡರು. ಕ್ಯಾಪ್ಟನ್ಸಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ರೂಪೇಶ್‌, ರೇಟಿಂಗ್‌ ಬೋರ್ಡ್‌ ಪಕ್ಕ ನಿಂತು ಬಿಗ್‌ ಬಾಸ್‌ ಬಳಿ, “ನನ್ನ ಇದೊಂದು ಫೋಟೋ ಕ್ಲಿಕ್ಕಿಸಿಕೊಂಡು ಮನೆಯಿಂದ ಹೊರಬಂದ ನಂತರ ಕೊಡಿ” ಎಂದು ಮನವಿ ಮಾಡಿಕೊಂಡರು.

ಇಂದಿನ ಬಿಗ್‌ ಬಾಸ್‌ ಮನಯಲ್ಲಿ ರೂಪೇಶ್‌ ಸ್ವಲ್ಪ ಭಾವುಕರಾಗಿದ್ದರು. ಒಟ್ಟಿನಲ್ಲಿ ಒಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿ, ಜನಮನ್ನಣೆಗೆ ಪಾತ್ರವಾಗಿರುವ ಬಿಗ್‌ ಬಾಸ್‌ ಶೋ ಮುಗಿಯಲು ದಿನಗಣನೆ ಆರಂಭವಾಗಿದೆ. ಜನರ ಕುತೂಹಲ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಯಾರು ಉಳಿಯಲಿದ್ದಾರೆ? ಯಾರು ಹೊರಬರಲಿದ್ದಾರೆ? ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸೋನು-ರಾಕೇಶ್‌ ಪ್ರೇಮ ಪುರಾಣ: ಕ್ಲಾಸ್‌ ತೆಗೊಂಡ್ರು ಗುರೂಜಿ!

Exit mobile version