ಬೆಂಗಳೂರು : ಬಿಗ್ ಬಾಸ್ ಸಿಸನ್ 9ರ (Bigg Boss Kannada) ಏಳನೇ ವಾರ ರಿಯಲ್ ಹಾಗೂ ಫೇಕ್ ಎನ್ನುವ ಟಾಸ್ಕ್‌ಅನ್ನು ಬಿಗ್ ಬಾಸ್ ನೀಡಿದ್ದಾರೆ. ಮೊದಲ ದಿನವೇ ಈ ಟಾಸ್ಕ್ ನಂತರ ರೂಪೇಶ್ ರಾಜಣ್ಣ ಮತ್ತು ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿ ಬಂದಿತ್ತು. ಈ ಮಧ್ಯೆ ಅರುಣ್ ಸಾಗರ್ ಅವರು ಎಂದಿನಂತೆ ಮನೆಯನ್ನು ತಮ್ಮ ಕ್ರಿಯೇಟಿವಿಟಿ ಮೂಲಕ ರಂಜಿಸಿದ್ದಾರೆ. ಜೋಕರ್ ರೀತಿ ಮೇಕಪ್ ಮಾಡಿಕೊಂಡು, 46ನೇ ದಿನ ಮನೆಯಲ್ಲಿ ಹೈಲೈಟ್ ಆಗಿದ್ದಾರೆ. ಆದರೆ ರೂಪೇಶ್ ಶೆಟ್ಟಿ ಅವರು ಅರುಣ್ ಸಾಗರ್ ಬಗ್ಗೆ ಆರ್ಯವರ್ಧನ್ ಅವರ ಬಳಿ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿ ಮರ್ಯಾದೆ ಕೊಡುವುದೇ ತಪ್ಪು!
ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಬಳಿ ಮಾತನಾಡಿ ʻʻಕೆಲವೊಮ್ಮೆ ಅರುಣ್ ಅವರ ಬುದ್ಧಿ ಮಾತುಗಳು ಕೇಳಿಸಿಕೊಳ್ಳುವುದೇ ಕಷ್ಟ ಆಗುತ್ತದೆ. ನಾವು ಕೂಡ ಅವರ ಹಾಗೇ ಇಲ್ಲಿ ಆಟ ಆಡಲು ಬಂದದ್ದು. ನಿನ್ನೆ ಆಟದಲ್ಲಿಯೂ ಕೂಡ ರಾಜಣ್ಣನ ಪರ ಇದ್ದರು. ತಕ್ಷಣ ದಿವ್ಯಾ ಅವರ ಬಳಿ ಅವರ ಪರ ಇದ್ದಂತೆ ಮಾತನಾಡುತ್ತಾರೆ. ನನಗೆ ಈಗೀಗ ತಿಳಿಯುತ್ತಿದೆ, ಯಾವುದಾದರೂ ಒಂದು ವಿಷಯ ಸಿಕ್ಕಿದರೆ ಸಾಕು ಎಲ್ಲರ ಹತ್ತಿರ ಹೇಳಿಕೊಂಡು ಬರುತ್ತಾರೆ. ನಂತರ ಹೊರಗಡೆ ನೋಡುವವರಿಗೆ ಅರುಣ್ ಅವರು ಹೇಳಿದ್ದೆ ಸತ್ಯ ಎಂದು ಅನ್ನಿಸಲು ಶುರುವಾಗುತ್ತದೆ. ಇಲ್ಲಿ ನಾವು ಜಾಸ್ತಿ ಮರ್ಯಾದೆ ಕೊಡುವುದೆ ತಪ್ಪು, ಕೊಟ್ಟರೆ ಅದು ನಮಗೇ ಕಷ್ಟʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಜಾ: ನಾಮಿನೇಟ್ ಆದವರು ಯಾರು?
ರಿಯಲ್, ಫೇಕ್ ಕುರಿತು ಹಾಡಿದ ಅರುಣ್ ಸಾಗರ್
ರಿಯಲ್ ಮತ್ತು ಫೇಕ್ ಕುರಿತು ಅರುಣ್ ಸಾಗರ್ ಅವರು ಒಬ್ಬರೇ ಕುಳಿತು ಹಾಡನ್ನು ರಚಿಸಿ, ಹಾಡಿದ್ದಾರೆ. ಹಾಡಿನ ಒಟ್ಟು ತಾತ್ಪರ್ಯ ಮನುಷ್ಯನ ಸ್ವಭಾವದ ಕುರಿತು ಹಾಡಿದ್ದಾರೆ. ಅದೇ ರೀತಿ ಜೋಕರ್ ರೀತಿ ಅರುಣ್ ಸಾಗರ್ ಮೇಕಪ್ ಹಾಕಿಕೊಂಡು, ಪ್ರತಿಯೊಬ್ಬರ ಬಳಿ ವ್ಯಂಗ್ಯವಾಗಿ ʻನೀನು ಫೇಕಾ ಅಥವಾ ರಿಯಲ್ಲಾʼ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ 46ನೇ ದಿನದ ಸಂಚಿಕೆಯಲ್ಲಿ ಟಾಸ್ಕ್‌ನಲ್ಲಿಯೂ ಅರುಣ್ ಸಾಗರ್ ಅವರು ಉತ್ತಮ ಪ್ರದರ್ಶನವನ್ನು ತೋರಿದ್ದು, ನೋಡುಗರಿಗೆ ಮನೋರಂಜನೆ ನೀಡಿದ್ದಾರೆ.
ಇದನ್ನೂ ಓದಿ | Bigg Boss Kannada | ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಜಾ: ನಾಮಿನೇಟ್ ಆದವರು ಯಾರು?