Site icon Vistara News

Bigg Boss Kannada | ಸಾನ್ಯ ಮಡಿಲಲ್ಲಿ ತಲೆಯಿಟ್ಟು ಕಣ್ಣೀರು ಹಾಕಿದ ರೂಪೇಶ್‌ ಶೆಟ್ಟಿ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಆರನೇ ವಾರ ಸಾನ್ಯ ಅಯ್ಯರ್‌ ಮನೆಯಿಂದ ಔಟ್‌ ಆಗಿದ್ದಾರೆ. ಎಲಿಮಿನೇಟ್‌ ಆಗಿದ್ದಾರೆ ಎಂದ ಕೂಡಲೇ ರೂಪೇಶ್‌ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಸಾನ್ಯ ಮಡಿಲಲ್ಲಿ ತಲೆಯಿಟ್ಟು ರೂಪೇಶ್‌ ಶೆಟ್ಟಿ ಮಗುವಿನ ಥರ ಅತ್ತಿದ್ದಾರೆ.

ರೂಪೇಶ್‌ ಶೆಟ್ಟಿ ಅವರು ಸಾನ್ಯ ಅವರ ಬಳಿ ʻʻನೀನು ಸಿಕ್ಕ ಮೇಲೆ ನನ್ನೊಳಗಿನ ಭಾವನೆ ಬದಲಾಗಿದೆ. ನಾನು ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಪೇಸ್‌ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರುವುದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾʼʼಎಂದು ಹೇಳಿ ಅತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಸೇಫ್‌ ಆದ ಸ್ಪರ್ಧಿಗಳು ಯಾರು? ಆಟದ ಕುರಿತು ಕಿಚ್ಚ ನೀಡಿದ ಕ್ಲಾರಿಟಿ ಏನು?

ಸಾನ್ಯ ಅವರು ರೂಪೇಶ್‌ ಶೆಟ್ಟಿಗೆ ನೆನಪಿಗೋಸ್ಕರವಾಗಿ ಉಂಗುರ ಕೊಟ್ಟಿದ್ದಾರೆ. ಮನೆಯಿಂದ ಸಾನ್ಯ ಆಚೆ ಹೋದ ನಂತರ ರೂಪೇಶ್‌ ಶೆಟ್ಟಿ ಮನೆಯವರ ಮುಂದೆ ಅತ್ತಿದ್ದಾರೆ. ರಾಕೇಶ್‌ ಅಡಿಗ ಅವರು ರೂಪೇಶ್‌ ಶೆಟ್ಟಿ ಅವರನ್ನು ಸಮಾಧಾನ ಪಡಿಸಿ ʻʻಮನೆಯಿಂದ ಹೊರಗಡೆ ಹೋದಮೇಲೆ ಅವಳು ಸಿಗುತ್ತಾಳೆʼʼ ಎಂದು ಹೇಳಿದ್ದಾರೆ. ಒಟಿಟಿ ಸೀಸನ್‌ನಿಂದಲೂ ರೂಪೇಶ್‌ ಶೆಟ್ಟಿ ಮತ್ತು ಸಾನ್ಯ ನಡುವೆ ಆಪ್ತತೆ ಬೆಳೆದಿತ್ತು. ವೀಕೆಂಡ್‌ನಲ್ಲಿ ಇವರಿಬ್ಬರ ಕ್ಲೋಸ್‌ನೆಸ್‌ ಬಗ್ಗೆ ಸುದೀಪ್‌ ಅವರು ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರ ನಡೆದ ಸಾನ್ಯ ಅಯ್ಯರ್‌!

Exit mobile version