Site icon Vistara News

Bigg Boss Kannada | ಉಡುಗೊರೆ ನೋಡಿ ಕುಣಿದು ಕುಪ್ಪಳಿಸಿದ್ರು ರೂಪೇಶ್‌ ಶೆಟ್ಟಿ: ಭಾವುಕರಾದ್ರು ವಿನೋದ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಐದನೇ ವಾರ, 32ನೇ ದಿನ ʻಏರಿ ಮೇಲೆ ಏರಿʼ, ʻಬಿಡುಗಡೆಗೊಳಿಸಿʼ ಎಂಬ ಎರಡು ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದೆ. ಟಾಸ್ಕ್‌ನಲ್ಲಿ ವಿಜೇತರಾದ ಆರ್ಯವರ್ಧನ್‌ ಗುರೂಜಿ, ರೂಪೇಶ್‌ ಶೆಟ್ಟಿ ಮತ್ತು ವಿನೋದ್‌ ಗೊಬ್ಬರಗಾಲ ಉಡುಗೊರೆ ಪಡೆದುಕೊಂಡರು.

ಹಿಂದಿನ ರಾತ್ರಿ (31ನೇ ದಿನ)ಬಿಗ್‌ ಬಾಸ್‌ ಮನೆಯಲ್ಲಿ ಅರುಣ್‌ ಸಾಗರ್‌ ಅವರು ‘ದುರಾಸೆʼ ಎಂಬ ಪದ ಬಳಸಿದಕ್ಕೆ ವಾದ ವಿವಾದಗಳು ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ಸಂಬರಗಿ ಮಧ್ಯೆ ನಡೆಯಿತು. ತನ್ನ ಕ್ಯಾಪ್ಟನ್ಸಿಯಲ್ಲಿ ಈ ತರಹದ ಭಿನ್ನಾಭಿಪ್ರಾಯಗಳು ನಡೆದವು ಎಂದು ಸಾನ್ಯ ʻʻಬಿಗ್‌ ಬಾಸ್‌ ನೀಡಿದ ಟಾಸ್ಕ್‌ ವೇಳೆ ಉಡುಗೊರೆಯನ್ನು ಪಡೆಯುವುದಿಲ್ಲ. ತನ್ನ ಆಟವನ್ನು ಪ್ರಶಾಂತ್‌ ಅವರಿಗೆ ನೀಡುತ್ತೇನೆʼʼ ಎಂಬ ಹೇಳಿಕೆ ನೀಡಿದರು. ಪ್ರಶಾಂತ್‌ ಅವರು ʻʻಆಡಲು ಇಷ್ಟವಿಲ್ಲ ನೀವೆ ಆಡಿʼʼ ಎಂದರು. ಉಳಿದ ಸ್ಪರ್ಧಿಗಳು ಆದ ಘಟನೆ ಮರೆತು ಆಟವಾಡಿ ಉಡುಗೊರೆಯನ್ನು ಪಡೆಯಿರಿ ಎಂದು ಸೂಚಿಸಿದರು. ಈ ಅಭಿಪ್ರಾಯಕ್ಕೆ ಸಾನ್ಯ ಒಪ್ಪಿಗೆ ನೀಡಿದರು.

ಬಿಗ್‌ ಬಾಸ್‌ ʻಏರಿ ಮೇಲೆ ಏರಿʼ ಎಂಬ ಟಾಸ್ಕ್‌ ನೀಡಿದ್ದರು. ಇದರ ಅನುಸಾರ ಆಡುವ ಸದಸ್ಯರು ಆರಂಭಿಕ ಸ್ಥಾನದಲ್ಲಿರುವ ಪುಡಿಯನ್ನು ಬೌಲ್‌ನಲ್ಲಿ ತುಂಬಿಸಿ ತಮ್ಮ ತಲೆಯ ಮೇಲೆ ಇಟ್ಟುಕೊಂಡು. ಸೀಸ ಮೇಲೆ ಸಾಗುತ್ತ, ಅಂತಿಮ ಸ್ಥಾನದಲ್ಲಿರುವ ಬುಟ್ಟಿಗೆ ತುಂಬಬೇಕು. ವಿನೋದ್‌ ಗೊಬ್ಬರಗಾಲ ಈ ಟಾಸ್ಕ್‌ ವಿಜೇತರಾದರು. ವಿನೋದ್‌ ಅವರಿಗೆ ಅವರ ಅಜ್ಜಿಯ ಜತೆ ಹಳೆಯ ನೆನಪಿನ ಫೋಟೊ ಉಡುಗೊರೆಯಾಗಿ ಸಿಕ್ಕಿತು. ಫೋಟೊ ನೋಡುತ್ತಲೇ ವಿನೋದ್‌ ಬಾವುಕರಾಗಿ ಹಳೆಯ ನೆನಪು ಮೆಲುಕು ಹಾಕಿದರು.

ʻಬಿಡುಗಡೆಗೊಳಿಸಿʼ ಎನ್ನುವ ಇನ್ನೊಂದು ಟಾಸ್ಕ್‌ಅನ್ನು ಬಿಗ್‌ ಬಾಸ್‌ ನೀಡಿದ್ದರು. ರೂಪೇಶ್‌ ಶೆಟ್ಟಿ, ನೇಹಾ ಗೌಡ ಹಾಗೂ ಆರ್ಯವರ್ಧನ್‌ ಈ ಟಾಸ್ಕ್‌ ನಿಭಾಯಿಸಬೇಕಿತ್ತು. ಈ ಟಾಸ್ಕ್‌ ಅನುಸಾರ ಎರಡು ಮಾನವ ಗಾತ್ರದ ಗೊಂಬೆಗಳನ್ನು ಸರಪಳಿಯಿಂದ ಕಟ್ಟಿ ಐದು ಬೀಗಗಳಿಂದ ಬಂಧಿಗೊಳಿಸಲಾಗಿತ್ತು. ಐದು ಬೀಗಿಗಳನ್ನು ತೆರೆದು ಗೊಂಬೆಗಳನ್ನು ಬಂಧನ ಮುಕ್ತ ಮಾಡಬೇಕಿತ್ತು. ಈ ಟಾಸ್ಕ್‌ನಲ್ಲಿ ಆರ್ಯವರ್ಧನ್‌ ಮತ್ತು ರೂಪೇಶ್‌ ಶೆಟ್ಟಿ ವಿಜೇತರಾದರು. ಆರ್ಯವರ್ಧನ್‌ ಮಗಳು ರೂಪೇಶ್‌ ಶೆಟ್ಟಿ ಬರೆದ ಹಾಡನ್ನು ಉಡುಗೊರೆಯಾಗಿ ನೀಡಿದರೆ, ರೂಪೇಶ್‌ ಶೆಟ್ಟಿ ಪ್ರಶಸ್ತಿ ಪಡೆದ ಶೀಲ್ಡ್‌ ಉಡುಗೊರೆಯಾಗಿ ಪಡೆದರು. ಶೀಲ್ಡ್‌ ನೋಡುತ್ತಲೇ ರೂಪೇಶ್‌ ಶೆಟ್ಟಿ ಕುಣಿದು ಕುಪ್ಪಳಿಸಿದರು.

ʻʻಈ ಪ್ರಶಸ್ತಿ ಬೆಳಗ್ಗೆ ಎದ್ದು ನೋಡಿದಾಗ ನನಗೆ ಇನ್ನೂ ಎನರ್ಜಿ ಬರುತ್ತದೆ. ಇನ್ನೂ ಈ ಮನೆಯಲ್ಲಿ 700 ದಿನ ಇದ್ದರೂ ಅಷ್ಟೇ ಎನರ್ಜಿ ಇಂದ ಆಡುತ್ತೇನೆʼʼ ಎಂದು ಕ್ಯಾಮೆರಾ ಮುಂದೆ ಸಂತಸ ವ್ಯಕ್ತ ಪಡಿಸಿದರು.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೇಲಿ ಕಿಚ್ಚನದೇ ಧ್ಯಾನ: ಅಡುಗೆಯಲ್ಲಿ ಸೈ ಎನಿಸಿಕೊಳ್ತಾರಾ ರಾಕೇಶ್‌?

Exit mobile version