Site icon Vistara News

Bigg Boss Kannada | ʻನನ್ನ ಜತೆ ಮಾತಾಡುವ ರೀತಿ ಬದಲಾಗಿದೆ ರೂಪಿʼ: ಕಣ್ಣೀರು ಹಾಕಿದ ಸಾನ್ಯ!

Bigg Boss kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 23ನೇ ದಿನ ರೂಪೇಶ್‌ ಮತ್ತು ಸಾನ್ಯ ನಡುವೆ ಭಿನ್ನಾಭಿಪ್ರಾಯ ಬಂದಂತಿದೆ. ಬಿಗ್‌ ಬಾಸ್‌ ಕ್ಯಾಪ್ಟನ್‌ ರೂಮ್‌ ಪಿಕ್‌ನಿಕ್‌ ಸ್ಪಾಟ್‌ ಅಲ್ಲ ಎಂದು ರೂಪೇಶ್‌ ಶೆಟ್ಟಿ, ಸಾನ್ಯ ಮತ್ತು ಆರ್ಯವರ್ಧನ್‌ಗೆ ಸುದೀಪ್ ವೀಕೆಂಡ್‌ ಪಂಚಾಯಿತಿಯಲ್ಲಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಾನ್ಯ ಅವರು ರೂಪೇಶ್‌ ಮೊದಲಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೂಪೇಶ್‌ ಶೆಟ್ಟಿ ಹಾಡು ಹೇಳುತ್ತಿದ್ದಾಗ ಸಾನ್ಯ ಸಣ್ಣ ಮುಖ ಮಾಡಿಕೊಂಡಿದ್ದರು. ಮನೆಯ ಸದಸ್ಯರು ಊಟಕ್ಕೆ ಕುಳಿತಿರುವಾಗ ಸಾನ್ಯ ಅವರು ರೂಪೇಶ್‌ ಶೆಟ್ಟಿಗೆ ಕಾದಿದ್ದಾರೆ. ಎಷ್ಟು ಹೊತ್ತಾದರೂ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಲಿಂದ ಸಾನು ಎದ್ದು ಹೋದರು. ರೂಪೇಶ್‌ ಇದನ್ನು ಗಮನಿಸಿ ಹಿಂದಿಯೇ ಹೋಗಿದ್ದಾರೆ. ಸಾನ್ಯ ಜೋರಾಗಿ ಅತ್ತು ಮಾತನಾಡಿ, ʻʻಆವಾಗಲೇ ನನಗೆ ಹೊಟ್ಟೆ ಹಸಿದಿತ್ತು ಎಂದು ಹೇಳಿದೆ. ತುಂಬಾ ಹೊತ್ತು ಕಾದಿದ್ದೀನಿ. ತಡ್ಕೊಳಕ್ಕೆ ಆಗಿಲ್ಲ. ಬರಬೇಕು ತಾನೆ ಬೇಗಾ, ನೀನು ಅಪ್‌ಸೆಟ್‌ ಆದಾಗ ತಾನೇ ನಾನು ನಿನ್ನ ಜತೆ ಊಟ ಮಾಡಬೇಕು. ನಿನ್ನ ಬಿಟ್ಟು ಊಟ ಮಾಡಿದ್ರೆ ಅದರಲ್ಲಿ ಅರ್ಥ ಏನಿದೆ? ನನಗೆ ಹಸಿವಾದರೆ ತಲೆ ನೋವು ಬರುತ್ತೆʼʼ ಎಂದು ಅತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ನಾಲ್ಕನೇ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ: ಏನಿದು ಪಟ ಪಟ ಕ್ಯಾಪ್ಟನ್ ಚಿತ್ರಪಟ?

ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻನೀನು ಕಣ್ಣೀರು ಹಾಕಿದ್ರೆ ನನಗೆ ತುಂಬಾ ಬೇಜಾರಾಗತ್ತೆ. ನನಗೆ ಅರ್ಥ ಆಗ್ತಿಲ್ಲ. ನಾವಿಬ್ಬರೂ ತುಂಬಾ ಕ್ಲೋಸ್‌ ಇದ್ದೇವೆ. ನನಗೆ ಆ ಡಿಫರೆನ್ಸ್‌ ಅರ್ಥ ಆಗಲ್ಲ. ನಿನ್ನೆ ನಡೆದ ಘಟನೆಯಿಂದ ಅಪ್‌ಸೆಟ್‌ ಆಗಿದ್ದೆ. ನಾವು ಎಷ್ಟು ಒಳ್ಳೆಯ ಫ್ರೆಂಡ್ಸ್‌ ಎನ್ನುವುದು ತಿಳಿದಿದೆʼʼ ಎಂದರು.

ಲಿವಿಂಗ್‌ ಏರಿಯಾದಲ್ಲಿ ಮತ್ತೆ ಸಾನ್ಯ ರೂಪೇಶ್‌ ಮಾತನಾಡಿಕೊಂಡಿದ್ದು ಸಾನ್ಯ ಮಾತನಾಡಿ ʻʻನಿನಗೆ ಅನ್ನಿಸುತ್ತಾ? ಮೊದಲ ರೀತಿ ನಾವಿಬ್ಬರೂ ಮಾತನಾಡಿಕೊಳ್ಳುತ್ತಿದ್ದೇವಾ? ಸೇಮ್‌ ಸಾನ್ಯ ರೂಪಿ ಅನ್ನಿಸುತ್ತಾ?ʼʼ ಎಂದು ಕೇಳಿದರು. ರೂಪೇಶ್‌ ಪ್ರತಿಕ್ರಿಯೆ ನೀಡಿ,ʻʻಸೇಮ್‌ ಅಲ್ಲ ಅಂತದ್ದೇನು ಆಗಿಲ್ಲ. ಆದರೆ ಕಂಡಿದೆ. ಪಕ್ಕ ಗುರೂಜಿ ಇದ್ದರು. ಅಂತದ್ದೂ ಆಗಿಲ್ಲ. ತಪ್ಪು ಆಗಿಲ್ಲ, ಆಗೋದು ಇಲ್ಲಾʼʼ ಎಂದಿದ್ದಾರೆ. ಸಾನ್ಯ ಮಾತನಾಡಿʻʻನನ್ನ ಜತೆ ಮಾತಾಡುವ ರೀತಿ ಬದಲಾಗಿದೆ ಅಷ್ಟೇʼʼಎಂದರು. ರೂಪೇಶ್‌ ಕೊನೆಯಲ್ಲಿ, ʻʻನಿನ್ನ ಮೇಲೆ ಇರುವ ಕೇರ್‌ ಕನ್ಸರ್ನ್‌ ಕಡಿಮೆ ಆಗಿಲ್ಲʼʼ ಎಂದರು.

ಇದನ್ನೂ ಓದಿ | Bigg Boss Kannada | ಈ ವಾರ ಅರುಣ್‌ ಸಾಗರ್‌ಗೆ ಕಿಚ್ಚನ ಚಪ್ಪಾಳೆ!

Exit mobile version