Site icon Vistara News

Bigg Boss Kannada | ಸಾನ್ಯ–ರೂಪೇಶ್‌ ಇಗೋ ಕ್ಲಾಶ್‌; ಹ್ಯಾಶ್‍ಟ್ಯಾಗ್‍ ಆಟ, ಯಾರ ಕೊರಳಿಗೆ ಯಾವ ಪಟ್ಟ? 

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡದಲ್ಲಿ (Bigg Boss Kannada) ಈ ವಾರ ಜಯಶ್ರೀ, ಸೋನು ಗೌಡ, ನಂದಿನಿ, ಸೋಮಣ್ಣ ಮಾಚಿಮಾಡ ಹಾಗೂ ಆರ್ಯವರ್ಧನ್‌ ಗುರೂಜಿ ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ ನೀಡಿದ ಹ್ಯಾಶ್‍ಟ್ಯಾಗ್‍ ಆಟಕ್ಕೆ ಸಂಬಂಧಿಸಿದಂತೆ ಸಾನ್ಯ ಹಾಗೂ ರೂಪೇಶ್‌ ನಡುವೆ ಇಗೋ ಕ್ಲಾಶ್‌ ಆಗಿದೆ.

ರೂಪೇಶ್‌ ಹ್ಯಾಶ್‍ಟ್ಯಾಗ್‍ ಆಟದಲ್ಲಿ ʻಆಕರ್ಷಕʼ ಹ್ಯಾಶ್‌ಟ್ಯಾಗ್‌ ಬೋರ್ಡ್‌ ಅನ್ನು ಸಾನ್ಯಗೆ ನೀಡಿದ್ದರು. ʻಜೋಕರ್‌ʼ ಮತ್ತು ʻಬೆಸ್ಟ್‌ ಫ್ರೆಂಡ್‌; ಹ್ಯಾಶ್‍ಟ್ಯಾಗ್‍ ಅನ್ನು ಕೊಟ್ಟಿದ್ದರು. ಈ ಕುರಿತು ಸಾನ್ಯ ಮತ್ತು ರೂಪೇಶ್‌ ನಡುವೆ ಸಣ್ಣ ಮಟ್ಟದಲ್ಲಿ ಇಗೋ ಕ್ಲಾಶ್‌ ಆಗಿದೆ.

ʻʻನಾನು ನಿನ್ನೊಂದಿಗೆ ತುಂಬಾ ಕಂಫರ್ಟ್‌ ಜೋನ್‌ನಲ್ಲಿ ಇದ್ದೇನೆ. ನಿನಗೆ ನಾನು ತುಂಬಾ ಪ್ರಾಮುಖ್ಯತೆ ಕೊಡುತ್ತೇನೆ. ನನಗೆ ನಂದಿನಿ ಬಿಟ್ಟರೆ ನೀನು ತುಂಬಾ ಹತ್ತಿರವಾದವನು. ಆದರೆ, ಜೋಕರ್‌ ಹಾಗೂ ಬೆಸ್ಟ್‌ ಫ್ರೆಂಡ್‌ ಟ್ಯಾಗ್‌ ನೀಡಿದ್ದು ನನಗೆ ಇಷ್ಟವಾಗಿಲ್ಲʼʼ ಎಂದು ಸಾನ್ಯ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Bigg Boss KanBigg Boss Kannadanada | ಬಿಗ್‌ ಬಾಸ್‌ ಮನೆಯಿಂದ ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್!

ಇದಕ್ಕೆ ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻನಾನು ನಿನ್ನ ಜತೆ ಈ ಮನೆಯಲ್ಲಿ ತುಂಬಾ ಸಮಯ ಕಳೆದಿದ್ದೇನೆ. ಬೆಸ್ಟ್‌ ಫ್ರೆಂಡ್‌ ಅಂದರೆ ಅರ್ಥ ಮಾಡಿಕೊ. ಮನುಷ್ಯನ ಭಾವನೆ ಇಲ್ಲಿ ಮುಖ್ಯ. ಹಾಗೇ ಈ ಮನೆಯಲ್ಲಿ ನಿನ್ನನ್ನು ನೋವಿಸುವ ಉದ್ದೇಶ ನನಗೆ ಇಲ್ಲ. ಬಿಗ್‌ ಬಾಸ್‌ ಒಂದು ಒಳ್ಳೆಯ ಪಯಣ” ಎಂದು ಮನಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸಾನ್ಯ ಕೂಡ ಈ ಮಾತಿಗೆ ʻನನಗೆ ನೀನು ತುಂಬಾ ಮುಖ್ಯ. ನನ್ನ ನಿನ್ನ ಬಾಂಧವ್ಯ ಕೂಡಾ ಮುಖ್ಯ. ನಿನಗೆ ಏನೇ ಸಮಸ್ಯೆ ಬಂದರೂ ನನ್ನ ಬಳಿ ಹಂಚಿಕೊ ಎಂದುʼʼ ಫುಲ್‌ಸ್ಟಾಪ್‌ ಇಟ್ಟಿದ್ದಾರೆ.

ಹ್ಯಾಶ್‌ಟ್ಯಾಗ್‌ ಟಾಸ್ಕ್‌ನಲ್ಲಿ ರೂಪೇಶ್‌ ಉಳಿದ ಸ್ಪರ್ಧಿಗಳಿಗೆ ಹ್ಯಾಶ್‌ ಟ್ಯಾಗ್‌ ಬೋರ್ಡ್‌ ಕೊಟ್ಟಿದ್ದು, ʻಹೆಡ್‌ಮಾಸ್ಟರ್‌ ಟ್ಯಾಗ್‌ ಅನ್ನು ಸೋಮಣ್ಣ ಅವರಿಗೆ ನೀಡಿದರೆ, ʻಸೋಮಾರಿʼ ಹ್ಯಾಷ್‌ಟ್ಯಾಗ್‌ ಅನ್ನು ಸೋನು ಗೌಡ, ʻʻಶೋಕಿʼʼ ಟ್ಯಾಗ್‌ ಅನ್ನು ಜಶ್ವಂತ್‌ ಹಾಗೂ ಆತ್ಮವಿಶ್ವಾಸ ಟ್ಯಾಗ್‌ ಅನ್ನು ಜಯಶ್ರೀ ಅವರಿಗೆ ನೀಡಿದ್ದಾರೆ. ಇನ್ನು ಆರ್ಯವರ್ಧನ್‌ ಗುರೂಜಿಗೆ ವಿಶೇಷವಾಗಿ ʻʻಟ್ಯೂಬ್‌ ಲೈಟ್‌ ಟ್ಯಾಗ್‌ʼʼ ಅನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಒಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿ, ಜನಮನ್ನಣೆಗೆ ಪಾತ್ರವಾಗಿರುವ ಬಿಗ್‌ ಬಾಸ್‌ ಶೋ ಮುಗಿಯಲು ದಿನಗಣನೆ ಆರಂಭವಾಗಿದೆ.

ಇದನ್ನೂ ಓದಿ | Bigg Boss Kannada | ಸೋನು ಗೌಡಗೆ ಕ್ಲಾಸ್‌ ತೆಗೆದುಕೊಂಡ ಕಿಚ್ಚ: ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

Exit mobile version