ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ಸಾನ್ಯ ಮತ್ತು ರೂಪೇಶ್ ಶೆಟ್ಟಿ ನಡುವೆ ಮನಸ್ತಾಪಗಳು ಹೆಚ್ಚಾಗುತ್ತಿವೆ. ಒಟಿಟಿಯಿಂದಲೂ ಈ ಜೋಡಿ ಮಧ್ಯೆ ಆಪ್ತತೆ ಬೆಳೆದಿತ್ತು. ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡ ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಗ್ಯಾಪ್ ಜಾಸ್ತಿಯಾಗಿತ್ತು. 41ನೇ ದಿನ ರೂಪೇಶ್ ಶೆಟ್ಟಿ ಅವರಿಗಾಗಿ ಸಾನ್ಯ ಹಾಡಿದ್ದ ಹಾಡೇ ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಅವರಿಗಾಗಿ ಹಾಡೊಂದು ಡೆಡಿಕೇಟ್ ಮಾಡಿದ್ದಾರೆ. ಸಾನ್ಯ ಹಾಡುವಾಗ ಅಪಸ್ವರ ಬಂದಾಗ ತಾನು ಸರಿಯಾಗಿ ಹಾಡಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ರೂಪೇಶ್ ಕೂಡ ʻʻಸುಮ್ಮನೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀಯಾʼʼ ಎಂದು ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಸಾನ್ಯ ʻʻನನಗೆ ಈ ಹಾಡು ಸರಿಯಾಗಿ ಹಾಡಲು ಆಗಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Bigg Boss Kannada | ಈ ವಾರದ ಮನೆಯ ಕ್ಯಾಪ್ಟನ್ ಪ್ರಶಾಂತ್ ಸಂಬರಗಿ: ಉತ್ತಮ ರೂಪೇಶ್ ರಾಜಣ್ಣ, ಕಳಪೆ ಯಾರು?
ರೂಪೇಶ್ ಶೆಟ್ಟಿಯವರು ಸಾನ್ಯರಿಗೆ ಚೆನ್ನಾಗೇ ಹಾಡಿದ್ದೀಯಾ ಎಂದು ಎಷ್ಟೇ ಹೇಳಲು ಪ್ರಯತ್ನಿಸಿದರೂ ಸಾನ್ಯ ಮಾತ್ರ ಕೇಳಲು ತಯಾರಿರಲಿಲ್ಲ. ಇಬ್ಬರ ಮಧ್ಯೆ ಮಾತು ತಾರಕಕ್ಕೇರಿದ್ದು ಸಾನ್ಯ ಕೋಪಗೊಂಡರು. ʻʻನಿನ್ನ ತಂಟೆಗೆ ನಾನಿಲ್ಲʼʼ ಎಂದು ರೂಪೇಶ್ ಶೆಟ್ಟಿ ಅವರು ಸಾನ್ಯಗೆ ಕೈ ಕೈಮುಗಿದಿದ್ದಾರೆ. ಇವರಿಬ್ಬರ ಜಗಳಕ್ಕೆ ಮನೆಮಂದಿ ಮೂಕ ಪ್ರೇಕ್ಷಕರಾಗಿದ್ದಾರೆ.
ಇದನ್ನೂ ಓದಿ | Bigg Boss Kannada | ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ!