Site icon Vistara News

Bigg Boss Kannada | ಆಚೆ ಹೋದ ಮೇಲೆ ಏನೋ ಹೇಳ್ತೀನಿ ಎಂದ ರೂಪೇಶ್‌: ರೂಪೇಶ್‌-ಸಾನ್ಯಾ ಗುಸುಗುಸು

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಒಟಿಟಿ (Bigg Boss Kannada) ದಿನೇ ದಿನೇ ರಂಗು ಪಡೆದುಕೊಳ್ಳುತ್ತಲಿದೆ. ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಬಾಂಧವ್ಯ ಬೆಳೆಯುತ್ತಾ ಇದೆ. ಇನ್ನು ರಾಕೇಶ್‌ಗೆ ಸೋನು ಗೌಡ ಓಪನ್‌ ಆಗೇ ಪ್ರಪೋಸ್‌ ಮಾಡಿದ್ದಾರೆ. ರಾಕೇಶ್‌ ಕೂಡ ಬಿಗ್‌ಬಾಸ್‌ ಮನೆಯಲ್ಲಿರುವ ಹುಡುಗಿಯರ ಜತೆ ಫ್ಲರ್ಟ್‌ ಮಾಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ರೂಪೇಶ್‌ ಶೆಟ್ಟಿ ಕೂಡ ಸಾನ್ಯಾ ಜತೆ ಕನೆಕ್ಟ್‌ ಆಗಲು ಟ್ರೈ ಮಾಡುತ್ತಿದ್ದಾರೆ ಎಂದು ಜಯಶ್ರೀ ಅವರಿಗೆ ಸಂದೇಹ ಬಂದಿದೆ. ಈ ವಿಚಾರವನ್ನು ರೂಪೇಶ್‌, ಆರ್ಯವರ್ಧನ್‌ ಮುಂದೆ ಸ್ವತಃ ಜಯಶ್ರೀ ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಲಕ್ಷುರಿ ಬಜೆಟ್‌ನಲ್ಲಿ ಲೋಕೇಶ್‌-ಸೋನು ಫೈಟ್‌: ಯಾರು ಈ ವಾರದ ಬೆಸ್ಟ್ & ವರ್ಸ್ಟ್?

ಜಯಶ್ರೀ ಅನುಮಾನ ಕೇಳಿಸಿಕೊಂಡ ರೂಪೇಶ್‌ ʻʻನನ್ನ ಹಾಗೂ ಸಾನ್ಯಾ ಅಯ್ಯರ್‌ ಜತೆ ಒಂದು ಬಾಂಧವ್ಯವಿದೆ. ನಾವಿಬ್ಬರೂ ಕಂಫರ್ಟ್‌ ಇದ್ದೇವೆ. ಅವರಿಗೇನು ಕಾಳು ಹಾಕುತ್ತಿಲ್ಲ ಎಂದು ಹೇಳಿದರು. ಇನ್ನು ಸಾನ್ಯಾ ಹಾಗೂ ರೂಪೇಶ್‌ ಶೆಟ್ಟಿ ನಡುವೆ ಮಧ್ಯರಾತ್ರಿ ಗಂಟೆಗಟ್ಟಲೆ ಮಾತುಕತೆ ನಡೆದಿದ್ದು, ಸಾನ್ಯಾ ಅವರು ರೂಪೇಶ್‌ಗೆ ʻಆಚೆ ಹೋದ ಮೇಲೆ ಏನೋ ಒಂದು ಹೇಳ್ತೀನಿʼ ಎಂದಿದ್ದಾರೆ. ʻನಿನ್ನ ಅಮ್ಮ ಪ್ರೋಗ್ರಾಮ್‌ ನೋಡುತ್ತಿದ್ದರೆ ಸರಿಯಾಗಿ ಬೈಯ್ಯುತ್ತಾರೆ. ಹೊರಗಡೆ ನಾನು ಸಿಕ್ಕರೆ ನಿನ್ನ ತಾಯಿ ಏಕೆ ಎಂದು ಪ್ರಶ್ನೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ಯಾಕೆ ಹೀಗೆ ಆದೆ ಎಂದು ಕೇಳುತ್ತಾರೆʼ ಎಂದು ರೂಪೇಶ್‌ ಅವರು ಸಾನ್ಯಾಗೆ ಹೇಳಿದ್ದಾರೆ. ಸಾನ್ಯಾ ಈ ವಿಚಾರಕ್ಕೆ ʻಅಮ್ಮ ನಿಮ್ಮ ಜತೆ ಮಾತನಾಡುತ್ತಾರೆʼ ಎಂದು ಹೇಳಿದ್ದಾರೆ.

ಇನ್ನು ಈ ಇಬ್ಬರು ಗುಟ್ಟಾಗಿ ಮಾತನಾಡಿಕೊಳ್ಳುವಾಗ ʻಅವರಿಬ್ಬರ ಮಾತು ಸ್ಷಷ್ಟವಾಗಿ ಕೇಳಿಸದ ರೀತಿಯಲ್ಲಿ ಇತ್ತು. ನಂತರ ಬಿಗ್‌ಬಾಸ್‌ ಮೈಕ್‌ ಸರಿಯಾಗಿ ಧರಿಸಿ ಎಂದು ಎಚ್ಚರಿಕೆ ನೀಡಿದ್ದರು. ನಂತರ ಅವರಿಬ್ಬರ ಮಾತು ಅರ್ಧಕ್ಕೆ ನಿಂತಿದೆ.

ಇದನ್ನೂ ಓದಿ | Bigg Boss kannada | ಮೇಕಪ್‌ ಅಲ್ಲಿ ಆರ್ಯವರ್ಧನ್‌ ಮಿಂಚಿಂಗ್‌: ಸಖತ್‌ ಎಂಟರ್ಟೈನರ್‌ ಅಂದ್ರು ಗುರೂಜಿ ಫ್ಯಾನ್ಸ್‌!

Exit mobile version