ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) ರೂಪೇಶ್ ಶೆಟ್ಟಿ ಮತ್ತು ಸಾನ್ಯ ಪ್ರೇಮ ಪಕ್ಷಿಗಳು ಎಂದೇ ಕರೆಯಲಾಗುತ್ತಿತ್ತು. ಮನೆಯಿಂದ ಎಲಿಮಿನೇಟ್ ಆದ ಬಳಿಕ ಸಾನ್ಯ ಅಯ್ಯರ್ ಅವರು ರೂಪೇಶ್ ಶೆಟ್ಟಿ ಅವರಿಗೆ ಸಾಥ್ ಕೊಡುತ್ತ ಬಂದಿದ್ದಾರೆ. ರೂಪೇಶ್ ಶೆಟ್ಟಿ ಒಟಿಟಿಯಿಂದ ಟಿವಿ ಸೀಸನ್‌ವರೆಗೂ ತಾವಿಬ್ಬರೂ ಬೆಸ್ಟ್ ಫ್ರೆಂಡ್ ಎಂತಲೇ ಹೇಳಿಕೊಂಡು ಬಂದಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮುಂದೊಂದು ದಿನ ರೂಪೇಶ್ ಶೆಟ್ಟಿ ಅವರ ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಸಾನ್ಯ ಉತ್ತರವೇನು ಎಂಬುದರ ಬಗ್ಗೆ ನಟಿ ಮಾತನಾಡಿದ್ದಾರೆ.
ಈ ಬಗ್ಗೆ ನೇರ ಉತ್ತರ ನೀಡಿದ ಸಾನ್ಯ ಅಯ್ಯರ್ ʻʻಇದೀಗ ಮದುವೆ ಬಗ್ಗೆ ಯೋಚನೆ ಮಾಡಬಾರದು. ನನ್ನ ಕನಸಿನ ಜರ್ನಿ ಇದೀಗ ಶುರುವಾಗುತ್ತಿದೆ. ಇನ್ನೊಂದು 5 ವರ್ಷ ನಾನು ನನ್ನ ಕೆರಿಯರ್‌ನತ್ತ ಗಮನ ಕೊಡಬೇಕು. ಹಾಗಂತ ನಾನು ರೂಪೇಶ್ ಫ್ರೆಂಡ್‌ಶಿಪ್ ಬಿಡುತ್ತೇನೆ ಅಂತ ಅಲ್ಲ. ಮುಂದೆ ಹೇಗೆ ಡೆವಲಪ್ ಆಗುತ್ತೆ ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಈಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನಾಯಕಿಯಾಗಬೇಕು ಎಂಬುದು ನನ್ನ ಕನಸು. ಅದನ್ನ ನಾನು ಪಕ್ಕಕ್ಕೆ ಇಡಲು ಆಗುವುದಿಲ್ಲʼʼ ಎಂದಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮೇಲೆ ಸಾನ್ಯ ಅಯ್ಯರ್ ಮುನಿಸು : ʻರೂಪಿ ನೀನು ಸ್ಟ್ರಾಂಗ್ ಆಗಿರುʼ ಎಂದು ಹೇಳಿದ್ದೇಕೆ?
ಹಾಗೇ ರೂಪೇಶ್ ಶೆಟ್ಟಿ ಅವರ ಕುರಿತು ಮಾತನಾಡಿ ʻʻರೂಪೇಶ್ ಶೆಟ್ಟಿ ತುಂಬ ಸ್ಮಾರ್ಟ್ ಆಗಿ ಆಡುತ್ತಿದ್ದಾರೆ. ಕೆಲವು ಸಲ ನನಗೋಸ್ಕರ ಆಡುತ್ತೇನೆ ಎಂದು ಹೇಳಿದ್ದೂ ಇದೆ. ಆಗ ನಾವು ಸಪೋರ್ಟ್ ಮಾಡಬೇಕಾಗುತ್ತದೆ. ನನ್ನ ಎನರ್ಜಿಯನ್ನು ಇಲ್ಲಿಂದ ಅವರಿಗೆ ಕಳುಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡ, ತುಳು ಸಿನಿಮಾಗಳಲ್ಲಿ ಜತೆಯಾಗಿ ನಟಿಸುವ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇವೆʼʼ ಎಂದು ಹೇಳಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಸಾನ್ಯರಿಂದ ಪ್ರಾಮಿಸ್ ಮಾಡಿಕೊಂಡಿದ್ದರು. ʻʻಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು. ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕುʼʼ ಎಂದಿದ್ದರು. ಅದೇ ರೀತಿ ಕೂಡ ಸಾನ್ಯ ಅವರು ನಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Bigg Boss Kannada | ಈ ವಾರದ ಮನೆಯ ಕ್ಯಾಪ್ಟನ್ ರೂಪೇಶ್ ರಾಜಣ್ಣ: ಹೇಗಿತ್ತು ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ?