Site icon Vistara News

Bigg Boss Kannada | ಕ್ಯಾಪ್ಟನ್‌ ಆಗಿರುವ ಖುಷಿಯ ನಡುವೆಯೂ ಸಾನ್ಯ ಅತ್ತಿದ್ಯಾಕೆ?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 28ನೇ ದಿನ (Bigg Boss Kannada) ಐದನೇ ವಾರ ಸಾನ್ಯ ಅಯ್ಯರ್‌ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಈ ವಾರದ ಉತ್ತಮ ಪ್ರದರ್ಶನಕಾರರಾಗಿಯೂ ಸಾನ್ಯ ಆಯ್ಕೆಯಾಗಿದ್ದು, ರೂಪೇಶ್‌ ರಾಜಣ್ಣ ಕಳಪೆ ಪ್ರದರ್ಶನ ನೀಡಿದ್ದಾರೆ. ಕ್ಯಾಪ್ಟನ್‌ ಟಾಸ್ಕ್‌ ವೇಳೆ ಸಾನ್ಯಾ ಗುದ್ದಿನದ ಆಘಾತಕ್ಕೆ ಅರುಣ್‌ ಸಾಗರ್‌ ಅವರ ಎದೆಗೆ ಪೆಟ್ಟು ಬಿದ್ದಿದೆ.

ಈ ವಾರದ ಟಾಸ್ಕ್‌ಗಳ ಪೈಕಿ ಅತಿ ಹೆಚ್ಚು ಟಾಸ್ಕ್‌ ಗೆದ್ದಿರುವುದು ʻಧಮ್‌ ಪವರ್‌ ತಂಡʼ. ತಂಡಕ್ಕೆ ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದರು. ಲಿವಿಂಗ್‌ ಏರಿಯಾದಲ್ಲಿ ಕಾಲಕಾಲಕ್ಕೆ ಟಿವಿಯಲ್ಲಿ ಎಮೋಜಿಗಳನ್ನು ತೋರಿಸಲಾಗುತ್ತದೆ. ಆಗ ಸ್ಪರ್ಧಿಗಳು ಟಿವಿಯಲ್ಲಿ ತೋರಿಸಿದ ಎಮೋಜಿಗಳನ್ನು ನೋಡಿ ನಂತರ ಗಾರ್ಡನ್‌ ಏರಿಯಾದಲ್ಲಿ ಇದ್ದ ಇಮೋಜಿ ದಿಂಬುಗಳನ್ನು ಹುಡುಕಿ ತಮಗೆ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು. 10 ಸುತ್ತುಗಳಲ್ಲಿ ಈ ಟಾಸ್ಕ್‌ ನಡೆದಿದ್ದು, ಈ ಟಾಸ್ಕ್‌ನಲ್ಲಿ ಸಾನ್ಯ ವಿಜೇತರಾಗಿ ಹೊರಹೊಮ್ಮಿ ಈ ವಾರದ ಕ್ಯಾಪ್ಟನ್‌ ಆದರು.

ಇದನ್ನೂ ಓದಿ | Bigg Boss Kannada | ತಮ್ಮ ಗೆಲುವನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ಗೆ ಅರ್ಪಿಸಿದ ʻಧಮ್‌ ಪವರ್‌ʼ ಟೀಮ್‌!

ಟಾಸ್ಕ್‌ ಆಡುವ ವೇಳೆ ಅರುಣ್‌ ಸಾಗರ್‌ ಅವರಿಗೆ ಪೆಟ್ಟಾಗಿದ್ದು, ಸಾನ್ಯ ಮತ್ತು ಅರುಣ್‌ ಸಾಗರ್‌ ನಡುವೆ ಸಣ್ಣ ಮನಸ್ತಾಪವೂ ಆಯಿತು. ಟಾಸ್ಕ್‌ ಆಡುವ ಭರದಲ್ಲಿ ಸಾನ್ಯ ಡೋರ್‌ ಬಾಗಿಲು ತೆಗೆದಿದ್ದು ಆ ವೇಳೆ ಅಚಾನಕ್‌ ಆಗಿ ಅರುಣ್‌ ಸಾಗರ್‌ ಅವರಿಗೆ ತಾಕಿದೆ. ನೋವಾದರೂ ಸಾನ್ಯ ಗಮನಿಸದೇ ಆಟ ಆಡಿದ್ದಕ್ಕೆ ಅರುಣ್‌ ಸಾಗರ್‌ ಸದಸ್ಯರ ಮುಂದೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಸದಸ್ಯರ ಮುಂದೆ ಅರುಣ್‌ ಸಾಗರ್‌ ಮಾತನಾಡಿ ʻʻಕ್ಯಾಪ್ಟನ್‌ ಟಾಸ್ಕ್‌ ಹೌದು ಆದರೆ ಕರ್ಟೆಸಿ ಬೇಡ್ವಾ?ನಾನು ಸುಮ್ಮನೆ ಬಿಡಲ್ಲʼʼ ಎಂದಿದ್ದಾರೆ. ನಂತರ ಸಾನ್ಯ ಅವರು ಅರುಣ್‌ ಸಾಗರ್‌ ಅವರ ಕ್ಷೇಮ ವಿಚಾರಿಸಲು ಬಂದಾಗ ಅರುಣ್‌ ಸಾಗರ್‌ ಮಾತನಾಡಿ ʻʻಟಾಸ್ಕ್‌ ಒಕೆ , ನಾನೇ ಡ್ಯಾಷ್‌ ಹೊಡೆದರೆ ನಾನು ದಿಂಬು ಎತ್ತುತ್ತಾ ಇರಲಿಲ್ಲ. ನೀವು ಮನೆಯ ಒಳಗೆ ಇರಬೇಕಿತ್ತು. ಗೆಲ್ಲೋದೆ ಲೈಫ್‌ ಆದರೆ ಜನರನ್ನು ಹೇಗೆ ನೋಡುತ್ತೀರಿ ನೀವು?ʼʼ ಎಂದು ಹೇಳಿದರು.

ಈ ಘಟನೆ ಆದ ನಂತರ ಉಳಿದ ಸದಸ್ಯರು ಸಾನ್ಯರನ್ನು ಸಮಾಧಾನ ಮಾಡಿದರು. ಅನುಪಮಾ, ಕಾವ್ಯ, ದಿವ್ಯಾ, ನೇಹಾ ತಮ್ಮಲ್ಲಿಯೇ ನಡೆದ ಘಟನೆಯ ಬಗ್ಗೆ ಮಾತನಾಡಿಕೊಂಡಿದ್ದರು. ʻʻಅರುಣ್‌ ಸಾಗರ್‌ ಅವರು ಆ ಕ್ಷಣಕ್ಕೆ ಹೇಳಿದ್ದು ತಪ್ಪು, ಆದರೆ ಸಾನ್ಯ ಬೇಗ ಬಂದು ವಿಚಾರಿಸಬೇಕಿತ್ತು. ಬಹುಶಃ ಹಿಂದಿನ ದಿನ ಸಾನ್ಯರ ಮೇಲೆ ಅರುಣ್‌ ಸಾಗರ್‌ ಅವರಿಗೆ ಕೋಪ ಇದ್ದ ಕಾರಣ ಈ ರೀತಿ ಪ್ರತಿಕ್ರಿಯೆ ನೀಡಿರಬಹುದೆಂದು,ʼʼ ಮಾತನಾಡಿಕೊಂಡರು.

ಇದನ್ನೂ ಓದಿ | Bigg Boss Kannada | ಒಗ್ಗಟ್ಟಿನ ಟಾಸ್ಕ್‌ನಲ್ಲಿ ಮನಸುಗಳ ಒಡಕು: ಅರುಣ್‌ ಸಾಗರ್‌ ಮಾತಿಗೆ ಕಣ್ಣೀರಿಟ್ಟ ನೇಹಾ!

Exit mobile version