Site icon Vistara News

Bigg Boss Kannada | ಮಲತಂದೆ ಕುರಿತ ಕಹಿ ಸತ್ಯ ಬಿಚ್ಚಿಟ್ಟ ಸಾನ್ಯ ಅಯ್ಯರ್‌!

Bigg Boss Kannada

ಬೆಂಗಳೂರು: ಮೊದಲ ದಿನವೇ ಬಿಗ್‌ಬಾಸ್‌ ಕನ್ನಡ ಒಟಿಟಿ (Bigg Boss Kannada) ಸ್ಪರ್ಧಿಗಳು ತಮ್ಮ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ಗೌರಿ ಮದುವೆ ಖ್ಯಾತಿಯ ʻಸಾನ್ಯ ಅಯ್ಯರ್‌ʼ ತಮ್ಮ ಜೀವನದ ಕಣ್ಣೀರಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ಬಿಗ್‌ಬಾಸ್‌ ಚಟುವಟಿಕೆ ನೀಡಿತ್ತು. ಇದರಲ್ಲಿ ಸ್ಪರ್ಧಿಗಳು ಮನಬಿಚ್ಚಿ ಮಾತನಾಡಿದ್ದಾರೆ.

ʻʻಅಮ್ಮ, ಚಿಕ್ಕಮ್ಮ ನನ್ನನ್ನು ಕ್ಷಮಿಸಿ ಎಂದು ಸಾನ್ಯ ಮಾತು ಆರಂಭಿಸಿ, ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್‌ ಮದುವೆ. ನನ್ನ ಕಣ್ಣ ಮುಂದೆಯೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ನನಗೆ ಈ ವಿಚಾರ ತುಂಬಾ ಪರಿಣಾಮ ಬೀರಿತು. ಒಂದು ಸಂಬಂಧ ಅಂದರೆ ಹೀಗೆ ಎಂದು ನಾನು ಅಂದುಕೊಂಡಿದ್ದೆ. ನಾನು ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿ ಇದ್ದೆ. ಅದೂ ಫಿಸಿಕಲ್‌ ಮತ್ತು ವರ್ಬಲ್‌ ಆಗಿತ್ತು. ಆತನಿಗೋಸ್ಕರ ನಾನು ವೃತ್ತಿ ಜೀವನವನ್ನು ಬಿಡಲು ತಯಾರಿದ್ದೆ. ಆದರೆ ಅದೂ ತುಂಬಾ ದಿನ ಇರಲಿಲ್ಲ. ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದಾರೆ. ಒಬ್ಬರು ನನ್ನ ಬಯೋಲಾಜಿಕಲ್‌ ಫಾದರ್‌. ಮತ್ತೊಬ್ಬರು ಮಲತಂದೆ. ನನ್ನ ಬಯೋಲಾಜಿಕಲ್‌ ತಂದೆ ಜತೆ ಅಷ್ಟಕಷ್ಟೇ ಸಂಬಂಧ ಇತ್ತು. ಮಲತಂದೆ ಜತೆ ಒಳ್ಳೆಯ ಸಂಬಂಧ ಇತ್ತು. ಅವರು ನನ್ನ ತಾಯಿಗೆ ಒಳ್ಳೆ ಫ್ರೆಂಡ್‌ ಆಗಿದ್ದಾಗಿನಿಂದಲೂ ಒಳ್ಳೆಯ ಸಂಬಂಧ ಇತ್ತು.

ಇದನ್ನೂ ಓದಿ | Bigg Boss Kannada | ಲೋಕಿ ಹಾಗೂ ಆರ್ಯವರ್ಧನ್‌ ಮಾತಿನ ವಾರ್‌!

ಆದರೆ ನನ್ನ ಮಲತಂದೆ ಅಮ್ಮನ ಜತೆ ಸಂಬಂಧ ಇರಬೇಕು ಎಂದು ನನ್ನ ಹೆಸರು ಹಾಳು ಮಾಡಲು ಮುಂದಾಗಿದ್ದರು. ನನ್ನ ಬಾಯ್‌ಫ್ರೆಂಡ್‌ ಜತೆ ನಾನಿದ್ದ ವಿಡಿಯೊ ಇಟ್ಟುಕೊಂಡು ಮೊದಲ ಅಜ್ಜಿಗೆ, ಅಮ್ಮನಿಗೆ ತೋರಿಸಿದರು. ಆ ವಿಡಿಯೊದಲ್ಲಿ ಏನೂ ಇರಲಿಲ್ಲ. ಆದರೂ ನನ್ನನ್ನು ಅವಮಾನ ಮಾಡಿದರು. ನಾನು ಅವರನ್ನು ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನೆ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲʼʼ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಲಿವಿಂಗ್‌ ಏರಿಯಾದಲ್ಲಿ ಹೈಡ್ರಾಮಾ: ಮೊದಲ ದಿನ ಏಳು ಸ್ಪರ್ಧಿಗಳು ನಾಮಿನೇಟ್‌

Exit mobile version