Site icon Vistara News

Bigg Boss Kannada | ʼಬದಲಾಗಲು ಸಾಧ್ಯವೇ ಇಲ್ಲ ರೂಪಿ’: ಸಾನ್ಯ ಅಯ್ಯರ್‌ ಭಾವುಕ ಪೋಸ್ಟ್‌ ವೈರಲ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಆರನೇ ವಾರ ಸಾನ್ಯ ಅಯ್ಯರ್‌ ಅವರು ಮನೆಯಿಂದ ಹೊರ ನಡೆದಿದ್ದಾರೆ. ಎಲಿಮಿನೇಟ್‌ ಆದ ವಿಚಾರ ತಿಳಿಯುತ್ತಿದ್ದಂತೆ ರೂಪೇಶ್‌ ಶೆಟ್ಟಿ ಅವರು ಸಾನ್ಯ ಅವರ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದರ ಬೆನ್ನಲ್ಲೆ ಸಾನ್ಯ ಅಯ್ಯರ್‌ ʻʻಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನುʼʼ ಇರುತ್ತೇನೆ ಎಂದು ರೂಪೇಶ್‌ ಶೆಟ್ಟಿ ಕುರಿತು ಇನ್‌ಸ್ಟಾದಲ್ಲಿ ಹೇಳಿಕೊಂಡಿದ್ದಾರೆ.

ಒಟಿಟಿ ಸೀಸನ್‌ನಿಂದಲೂ ಸಾನ್ಯ ಮತ್ತು ರೂಪೇಶ್‌ ಶೆಟ್ಟಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು. ದೊಡ್ಮನೆಯ ಪ್ರೇಮ ಪಕ್ಷಿಗಳು ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಹೇಳುತ್ತಿದ್ದರು. 100 ದಿನದ ಆಟದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ 6 ವಾರಕ್ಕೆ ಸಾನ್ಯ ಎಲಿಮಿನೇಟ್ ಆಗಿರುವುದಕ್ಕೆ ರೂಪೇಶ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸಾನ್ಯ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ʻʻಬದಲಾಗಲು ಸಾಧ್ಯವೇ ಇಲ್ಲ ರೂಪಿ. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ. ನಮ್ಮ ಮನಸ್ಸು ಇನ್ನು ಹತ್ತಿರ. ನಿನ್ನ ಶಕ್ತಿಯಾಗಿರಲು ಯಾವಾಗಲೂ ಶ್ರಮಿಸುತ್ತೇನೆ. ನನ್ನ ರಾಕ್‌ಸ್ಟಾರ್ʼʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇದೀಗ ಈ ಜೋಡಿ ನೋಡಿ ನೋಡುಗರು ದೊಡ್ಮನೆಗೆ ಹೋಗಲು ಸಾನ್ಯ ಅವರಿಗೆ ಅವಕಾಶ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರ ನಡೆದ ಸಾನ್ಯ ಅಯ್ಯರ್‌!

ಸಾನ್ಯ ಹೊರಡುವಾಗ ರೂಪೇಶ್‌ ಶೆಟ್ಟಿ ಹೇಳಿದ್ದೇನು?
ರೂಪೇಶ್‌ ಶೆಟ್ಟಿ ಅವರು ಸಾನ್ಯ ಅವರ ಬಳಿ ʻʻನೀನು ಸಿಕ್ಕ ಮೇಲೆ ನನ್ನೊಳಗಿನ ಭಾವನೆ ಬದಲಾಗಿದೆ. ನಾನು ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಪೇಸ್‌ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರುವುದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾʼʼಎಂದು ಹೇಳಿ ಅತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಸಾನ್ಯ ಮಡಿಲಲ್ಲಿ ತಲೆಯಿಟ್ಟು ಕಣ್ಣೀರು ಹಾಕಿದ ರೂಪೇಶ್‌ ಶೆಟ್ಟಿ!

Exit mobile version